Sunday 26th, January 2020
canara news

ಕರ್ನಾಟಕದ ನೆರೆ ಬಾಧಿತ ಪ್ರದೇಶದ ಜನರಿಗೆ ಆಹಾರ-ನೀರು, ಬಟ್ಟೆಬರೆ

Published On : 13 Aug 2019   |  Reported By : Rons Bantwal


ಸಂಗ್ರಹಿಸಿ ಮಾನವೀಯತೆ ಮೆರೆದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ್ಟ್ರ

ಮುಂಬಯಿ, ಆ.11: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇಂದಿಲ್ಲಿ ಭಾನುವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿ ಕರ್ನಾಟಕ ರಾಜ್ಯದದ್ಯಾಂತ ಪ್ರವಾಹದಿಂದ ಸಂಕಷ್ಟಕ್ಕೊಳಗಾದ (ನೆರೆ ಬಾಧಿತ) ಜನರಿಗೆ ದೈನಂದಿನವಾಗಿ ಬೇಕಾಗುವ ಆಹಾರ ವಸ್ತುಗಳು, ನೀರು ಬಾಟಲುಗಳು, ಬಟ್ಟೆಬರೆ ಸಂಗ್ರಹಿಸಿ ಕರ್ನಾಟಕ ರಾಜ್ಯದ ಜನತೆಗೆ ತಲುಪಿಸಿತು.

ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸಾರಥ್ಯದಲ್ಲಿ ಕಪಸಮ ಪೆÇೀಷಕ ಸದಸ್ಯ, ಶಿವಾಸ್ ಹೇರ್ ಡಿಝೈನರ್ಸ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ್ ಕೆ.ಭಂಡಾರಿ, ಆಲ್ ಇಂಡಿಯಾ ಟ್ರಾನ್ಸ್‍ಪೆÇೀರ್ಟ್ ಕಾಂಗ್ರೇಸ್ ಕರ್ನಾಟಕ ರಾಜ್ಯಧ್ಯಕ್ಷ, ಕೆನರಾ ಪಿಂಟೋ ಟ್ರಾವೆಲ್ಸ್ ಮಾಲೀಕ ಸುನೀಲ್ ಪಾಯ್ಸ್ ಸಹಯೋಗ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿü ಅವರ ಮಾರ್ಗದರ್ಶನ, ದ.ಕ ಜಿಲ್ಲಾ ನೋಡಲ್ ಅಧಿಕಾರಿ ಗೋಕುಲ್‍ದಾಸ್ ನಾಯಕ್ ಸಮಕ್ಷಮಾದಲ್ಲಿ ಕಪಸಮ ಸಕ್ರೀಯ ಸದಸ್ಯ ಆರೀಫ್ ಕಲ್ಕಟ್ಟಾ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಆರ್.ಸಿ ಭಟ್, ಮೋಹನ್ ಕುತ್ತಾರು, ಸತೀಶ್‍ಕುಮಾರ್ ಪುಂಡಿಕಾೈ ನೇತೃತ್ವದಲ್ಲಿ ಭಾನುವಾರ ಸುಮಾರು ಒಂದು ಲಕ್ಷ ಮೊತ್ತದ ಬ್ರೆಡ್, ಟೋಸ್ಟ್, ಬಿಸ್ಕುಟ್, ನೀರು ಬಾಟಲ್ ಪ್ಯಾಕೇಟು ಸಿದ್ಧ ಪಡಿಸಿ ವಿತರಿಸಿತು.

ಇಂದಿಲ್ಲಿ ಆದಿತ್ಯವಾರ ಬಿಲ್ಲವರ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ್ ಎಸ್.ಪೂಜಾರಿ ಸಹಯೋಗದೊಂದಿಗೆ ದೈನಂದಿನ ಉಪಯೋಗದ ವಸ್ತುಗಳು, ಆಹಾರ ಮತ್ತು ಬಟ್ಟೆಬರೆಗಳನ್ನು ಸಂಗ್ರಹಿಸಲಾಯಿತು. ರವೀಂದ್ರ ಎ.ಶಾಂತಿ ಪೂಜೆ ನೆರವೇರಿಸಿ ಈ ಎಲ್ಲಾ ವಸ್ತುಗಳ ಅತ್ಯವಶ್ಯ ಜನರಿಗೆ ಶೀಘ್ರಗತಿಯಲ್ಲಿ ತಲುಪಿ ದಾನಿಗಳಿಗೂ ಪುಣ್ಯ ಲಭಿಸುವಂತಾಗಲಿ ಎಂದು ಹರಸಿದರು.

ರಿಜೇನ್ಸಿ ಸಮೂಹ ಮುಂಬಯಿ ಇದರ ಪ್ರವರ್ತಕ ಜಯರಾಮ ಎನ್.ಶೆಟ್ಟಿ ಕಡಂದಲೆ, ಬಿ.ರಮಾನಂದ ರಾವ್ (ಬಡನಿಡಿಯೂರು), ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷ ಎಲ್.ವಿ ಅವಿೂನ್, ಸಲಹಾದಾರ ಎನ್.ಎಂ ಸನೀಲ್, ಬಿಲ್ಲವರ ಅಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ, ಮಾಜಿ ಅಧ್ಯಕ್ಷ ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಮಹಿಳಾ ವಿಭಾಗಧ್ಯಕ್ಷೆ ಜಯಂತಿ ವಿ.ಉಳ್ಳಾಲ್, ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್.ಬಂಗೇರ, ವಿಲಾಸಿನಿ ಕೆ.ಸಾಲ್ಯಾನ್, ಲಕ್ಷ್ಮೀ ಪೂಜಾರಿ, ಬಿಲ್ಲವರ ಭವನದ ವ್ಯವಸ್ಥಾಪಕ ಭಾಸ್ಕರ್ ಟಿ.ಪೂಜಾರಿ, ಕೃಷ್ಣ ಬಂಗೇರಾ, ಶ್ರೀ ದೇವಿ ಕ್ಯಾಟರರ್ಸ್ ಮಾಲಕ ಕೆಂಪೇಗೌಡ ಗೊಂಡೇನಹಳ್ಳಿ ನಾಗಮಂಗÀಲ, ರಮಾನಂದ ಸಾಲ್ಯಾನ್ ಮರೋಲ್, ಎನ್.ಎಂ ಸನಿಲ್, ರವೀಂದ್ರ ಕೋಟ್ಯಾನ್ (ಜಯಂತಿ ಕ್ಯಾಟರರ್ಸ್), ರವೀಂದ್ರ ಅವಿೂನ್ ಬನ್ನಂಜೆ, ಸದಾನಂದ ಸಫಲಿಗ, ವಿಶ್ವನಾಥ್ ಯು.ಮಾಡಾ, ಲಕ್ಷ್ಮೀ ಆರ್.ಶೆಟ್ಟಿ ವಸಾಯಿ, ರೇಖಾ ಆರ್.ಶೆಟ್ಟಿ, ಶರ್ಮಿಳಾ ಎಸ್.ಶೆಟ್ಟಿ, ಪ್ರಮೋದಾ ಬಿ.ಶೆಟ್ಟಿ, ರಾಜ್‍ಕುಮಾರ್ ಕಾರ್ನಾಡ್, ಪಿ.ಧನಂಜಯ ಶೆಟ್ಟಿ ಸಯಾನ್, ವಿಶ್ವನಾಥ ವಿ.ಶೆಟ್ಟಿ (ವಿನಿತ್ ಕೆಮಿಕಲ್ಸ್), ರಾಘವೇಂದ್ರ ಸಾ.ದಯಾ, ಸವಿತಾ ಎಸ್.ಶೆಟ್ಟಿ, ಹ್ಯಾರಿ ಆರ್.ಸಿಕ್ವೇರಾ, ಜಯರಾಮ್ ಜಿ.ನಾಯಕ್, ಕುಸುಮಾ ಚಂದ್ರ ಪೂಜಾರಿ, ನಾರಾಯಣ ಡಿ.ಸಾಲ್ಯಾನ್, ರಾಧಕೃಷ್ಣ ಶೇರಿಗಾರ್, ಕಪಸಮ ಸಲಹಾ ಸದಸ್ಯರುಗಳಾದ ಸಿಎ| ಐ.ಆರ್ ಶೆಟ್ಟಿ, ಸುರೇಂದ್ರ ಎ.ಪೂಜಾರಿ (ಸಾಯಿಕೇರ್), ಭಾರತ್ ಬ್ಯಾಂಕ್ ನಿರ್ದೇಶಕ ನ್ಯಾ| ರಾಜಾ ವಿ.ಸಾಲ್ಯಾನ್, ಸುಜತಾ ಸುಧಾಕರ್ ಉಚ್ಚಿಲ್, ದಯಾನಂದ್ ಬೋಂಟ್ರಾ ಬರೋಡಾ, ಮೋಹನ್ ಎಂ.ಪೂಜಾರಿ ಸೂರತ್, ಕರ್ನಾಟಕ ನಾಟಕ ಅಕಾಡೆಮಿ ಪುರಸ್ಕೃತ ರಂಗ ಕಲಾವಿದ ಮೋಹನ್ ಮಾರ್ನಾಡ್, ವಾಸುದೇವ ಮಾರ್ನಾಡ್, ಸುರೇಂದ್ರಕುಮಾರ್ ಮಾರ್ನಾಡ್, ಸುಶೀಲಾ ಎಸ್.ದೇವಾಡಿಗ (ಸಿಂಗಾಪುರ), ಕಪಸಮ ಸಲಹಾ ಸಮಿತಿ ಸದಸ್ಯರಾದ ಸಿಎ| ಐ.ಆರ್ ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಡಾ| ಆರ್.ಕೆ.ಶೆಟ್ಟಿ, ಸುಧಾಕರ್ ಉಚ್ಚಿಲ್, ಸುರೇಂದ್ರ ಎ.ಪೂಜಾರಿ, ಅವರು ವಿವಿಧ ಅಗತ್ಯವಸ್ತುಗಳನ್ನು ಒದಗಿಸಿ ಸಹಕರಿಸಿದ್ದು ಕಪಸಮ ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ ತಾಳಿಪಾಡಿ, ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ, ವಿಶೇಷ ಆಮಂತ್ರಿತ ಸದಸ್ಯರುಗಳಾದ ಸಾ.ದಯಾ (ದಯಾನಂದ್ ಸಾಲ್ಯಾನ್), ಗೋಪಾಲ್ ತ್ರಾಸಿ ಮತ್ತಿತರರು ಉಪಸ್ಥಿತರಿದ್ದು ಕಾರ್ಯನಿರ್ವಹಿಸಿ ಸಹಕರಿಸಿದರು.
More News

ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷರಾಗಿ ಬಿ.ವಿ ರಾವ್ ಆಯ್ಕೆ
ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷರಾಗಿ ಬಿ.ವಿ ರಾವ್ ಆಯ್ಕೆ
ಮಹಾರಾಷ್ಟ್ರದ ಆಹಾರ-ನಾಗರಿಕ ಸರಬರಾಜು ಮಂತ್ರಿ ಛಗ್‍ನ್ ಭುಜಬಲ್‍ಗೆ
ಮಹಾರಾಷ್ಟ್ರದ ಆಹಾರ-ನಾಗರಿಕ ಸರಬರಾಜು ಮಂತ್ರಿ ಛಗ್‍ನ್ ಭುಜಬಲ್‍ಗೆ
ಡೊಂಬಿವಲಿಯಲ್ಲಿ ಜರುಗಿದ ಕನ್ನಡ ಗಾದೆಗಳ ವೈಭವ ವಿಚಾರ ಸಂಕಿರಣ
ಡೊಂಬಿವಲಿಯಲ್ಲಿ ಜರುಗಿದ ಕನ್ನಡ ಗಾದೆಗಳ ವೈಭವ ವಿಚಾರ ಸಂಕಿರಣ

Comment Here