Sunday 11th, May 2025
canara news

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ್ಟ್ರ-ದ.ಕ ಜಿಲ್ಲಾ ಪತ್ರಕರ್ತರ ಸಂಘಗಳ ಜಂಟಿ ಸೇವೆ

Published On : 14 Aug 2019   |  Reported By : Rons Bantwal


ನೆರೆಪೀಡಿತ ಪ್ರದೇಶಗಳ ತೀರ ಬಡಜನರಿಗೆ ದೈನಂದಿನ ವಸ್ತುಗಳ ವಿತರಣೆ

ಮುಂಬಯಿ, ಆ.13: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ್ಟ್ರ ಮತ್ತು ದ.ಕ ಜಿಲ್ಲಾ ಪತ್ರಕರ್ತರ ಸಂಘಗಳು ಜಂಟಿಯಾಗಿ ಇಂದಿಲ್ಲಿ ಮಂಗಳವಾರ ಪ್ರವಾಹದಿಂದ ತೊಂದರೆಗೊಳಗಾದ ತೀರ ಬಡಜನರಿಗೆ ದೈನಂದಿನ ವಸ್ತುಗಳ ವಿತರಿಸಿ ಮಾನವೀಯತೆ ಮೆರೆಯಿತು.

ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಸಾರಥ್ಯದಲ್ಲಿ ಮುಂಬಯಿನಲ್ಲಿ ಸಂಗ್ರಹಿತ ಒಂದು ಲೋಡ್‍ನಷ್ಟು ದೈನಂದಿನ ವಸ್ತುಗಳು ಇಂದಿಲ್ಲಿ ಮಂಗಳವಾರ ಮಂಗಳೂರು ತಲುಪಿದ್ದು ಕಪಸಮ ಸಕ್ರೀಯ ಸದಸ್ಯ ಆರೀಫ್ ಕಲ್ಕಟ್ಟಾ ಮಂಗಳೂರುನಲ್ಲಿ ಸ್ವೀಕರಿಸಿ ಬೆಳ್ತಂಗಡಿ, ಚಾರ್ಮಾಡಿ ಇನ್ನಿತರ ಪ್ರವಾಹ ಪೀಡಿತ ಗ್ರಾಮಗಳಿಗೆ ಸಾಗಿಸಿ ಗ್ರಾಮಸ್ಥರಿಗೆ ಖುದ್ಧಾಗಿ ವಿತರಿಸಿದರು. ಆಲ್ ಇಂಡಿಯಾ ಟ್ರಾನ್ಸ್‍ಪೆÇೀರ್ಟ್ ಕಾಂಗ್ರೇಸ್ ಕರ್ನಾಟಕ ರಾಜ್ಯಧ್ಯಕ್ಷ, ಕೆನರಾ ಪಿಂಟೋ ಟ್ರಾವೆಲ್ಸ್ ಮಾಲೀಕ ಸುನೀಲ್ ಪಾಯ್ಸ್ ಅವರು ಮಂಗಳೂರುನ ಸ್ಟೇಟ್‍ಬ್ಯಾಂಕ್‍ನಲ್ಲಿ ವಸ್ತುಗಳ ವಿತರಣಾ ಸೇವೆಗೆ ಚಾಲನೆಯನ್ನಿತ್ತು ಶುಭಕೋರಿದರು.

ಈ ಸಂದರ್ಭ ದ.ಕ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಮಾತನಾಡಿ, ಸಂತ್ರಸ್ತರಿಗೆ ಸಹಕರಿಸುವ ಮೂಲಕ ನೊಂದವರ ಬಾಳಿಗೆ ಸ್ಫೂರ್ತಿ ತುಂಬುವ ಕಾರ್ಯ ಇದಾಗಿದೆÉ. ದಾನಿಗಳ ಔದಾರ್ಯದಿಂದ ಸಂತ್ರಸ್ತರ ದಿನಬಳಕೆ ವಸ್ತುಗಳನ್ನು ಪೂರೈಸಲು ರೋನ್ಸ್ ಬಂಟ್ವಾಳ್‍ಗೆ ಸಾಧ್ಯವಾಗಿದೆ. ಇಂದು ಸುಮಾರು ಮೂರುವರೆ ಲಕ್ಷ ಬೆಳೆಬಾಳುವ ದೈನಂದಿನವಾಗಿ ಬೇಕಾಗುವ ಆಹಾರ ವಸ್ತುಗಳು, ಬಿಸ್ಕೇಟು, ಟೋಸ್ಟ್, ರಸ್ಕ್, ಸಾಬೂನು, ಪೇಸ್ಟ್, ಟೂತ್‍ಬ್ರೆಶ್, ಶೂ-ಚಪ್ಪಲ್, ಬಟ್ಟೆಬರೆ ಸಂಗ್ರಹಿಸಿ ಕರ್ನಾಟಕ ರಾಜ್ಯದ ಜನತೆಗೆ ತಲುಪಿಸಿದೆ. ಇದು ಎರಡನೇ ಹಂತವಾಗಿ ಸಂತ್ರಸ್ತರಿಗೆ ನೆರವು ನೀಡುವ ನಮ್ಮ ಕಾರ್ಯವಾಗಿದ್ದು, ಜಿಲ್ಲೆಯ ಜನರ ನೋವಿಗೆ ಸ್ಪಂಧಿಸಿದ ಸಂಘದ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು, ದಾನಿಗಳು ಮತ್ತು ಮಹಾರಾಷ್ಟ್ರದ ಪ್ರತಿಯೊಬ್ಬರಿಗೂ ಚಿರಋಣಿ ಎಂದರು.

ಇಂದು ಉದಯವಾಣಿಯ ವಸಂತ್.ಎನ್ ಕೊಣಾಜೆ, ವಿ4 ನ್ಯೂಸ್‍ನ ಆರೀಫ್ ಕಲ್ಕಟ್ಟ, ಪ್ರಜಾವಾಣಿಯ ಮೋಹನ್ ಕುತ್ತಾರ್, ಮುಕ್ತ ಸುದ್ದಿವಾಹಿನಿಯ ಅಶ್ವಿನ್ ಕುತ್ತಾರ್, ವಾಯ್ಸ್ ಆಫ್ ಕರಾವಳಿ.ಕಾಂ ನ ಕೀರ್ತನ್ ಮರೋಳಿ, ಅಬ್ಬಕ್ಕ ಚಾನೆಲ್ ನ ತೇಜೇಶ್ ಗಟ್ಟಿ, ಉಳ್ಳಾಲ್ ನ್ಯೂಸ್.ಕಾಂ ಇದರ ಚಿಂತನ್ ಕುಮಾರ್, ಉದ್ಯಮಿಗಳಾದ ಸಹಬಾಝ್ ಖಾದರ್, ಮುಜೀಬ್ ರೆಹ್ಮಾನ್ ವಿತರಣಾ ಸೇವೆಯಲ್ಲಿ ಸಹಕರಿಸಿದರು.

ಶಿವಾಸ್ ಹೇರ್ ಡಿಝೈನರ್ಸ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ್ ಕೆ.ಭಂಡಾರಿ ಮತ್ತು ಗುಜರಾತ್ ಬಿಲ್ಲವ ಸಂಘ ಇದರ ವತಿಯಿಂದ ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ, ಅಧ್ಯಕ್ಷ ಮನೋಜ್ ಸಿ.ಪೂಜಾರಿ ಸೂರತ್, ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ, ಪ್ರಧಾನ ಕೋಶಾಧಿಕಾರಿ ಜಿನರಾಜ್ ಪೂಜಾರಿ, ಸರಿತಾ ಸೋಮನಾಥ್ ಪೂಜಾರಿ ಮತ್ತು ಸಂಘದ ವಿವಿಧ ಶಾಖೆಗಳು ಮತ್ತು ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರ, ದಾನಿಗಳ ಸೇವಾರ್ಥವಾಗಿ ಬುಧವಾರ ಮೂರನೇ ಹಂತವಾಗಿ ಬಟ್ಟೆಬರೆ ಹಾಗೂ ದಿನಬಳಕೆ ವಸ್ತುಗಳನ್ನು ಪ್ರದಾನಿಸಲಾಗುವುದು ಎಂದು ಆರೀಫ್ ಕಲ್ಕಟ್ಟಾ ತಿಳಿಸಿದ್ದಾರೆ.

ಕಪಸಮ ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ, ಸಕ್ರೀಯ ಸದಸ್ಯೆ ತಾರಾ ಆರ್.ಬಂಟ್ವಾಳ್, ವಿಶೇಷ ಆಮಂತ್ರಿತ ಸದಸ್ಯ ಸಾ.ದಯಾ (ದಯಾನಂದ್ ಸಾಲ್ಯಾನ್), ದೇವರಾಜ್ ಪೂಜಾರಿ ಡೊಂಬಿವಿಲಿ, ಕೃಷ್ಣ ಬಂಗೇರಾಮತ್ತಿತರರು ಉಪಸ್ಥಿತರಿದ್ದು ಕಾರ್ಯನಿರ್ವಹಿಸಿ ಸಹಕರಿಸಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here