Sunday 11th, May 2025
canara news

ಆಶಾವಾದಿ ಪ್ರಕಾಶನ್-ದಿವೋ ಪತ್ರಿಕೆಯಿಂದ ಜರುಗಿದ ಕೊಂಕಣಿ ಲೇಖಕರ ಸಹಮಿಲನ ಕೊಂಕಣಿ ಮಾತೃಭಾಷೆ ಜಾಗತಿಕವಾಗಿ ಬೆಳೆದಿದೆ : ಡಾ| ಆಸ್ಟಿನ್ ಡಿಸೋಜಾ

Published On : 14 Aug 2019   |  Reported By : Rons Bantwal


ಮುಂಬಯಿ, ಆ.13: ಸಾಹಿತ್ಯ ಮತ್ತು ಸಾಮಾಜಿಕ ಸೇವೆಯ ಮುನ್ನಡೆಯಿಂದ ನಮ್ಮ ಕೊಂಕಣಿ ಮಾತೃಭಾಷೆಯು ಜಾಗತಿಕವಾಗಿ ಬೆಳೆದಿದೆ. ಮಾತೃಭಾಷೆಗಳು ಎಂದೂ ಅಳಿಯಲಾರವು. ಇದೊಂದು ಭ್ರಮೆಯಷ್ಟೇ. ಆದರೂ ಆಯಾ ಸಮಾಅಜದವರು ಮಾತೃಭಾಷೆಯನ್ನು ಮನೆ ಮತ್ತು ಮಾತು ಭಾಷೆಯಾಗಿ ಬಳಸಿದ್ದಲ್ಲಿ ಭಾಷೆಯೊಂದಿಗೆ ಸಂಸ್ಕೃತಿಯು ಜೀವಾಳವಾಗಿ ಉಳಿಯಬಲ್ಲದು ಎಂದು ವೀಜ್ಹ್ ಇ-ಮ್ಯಾಗಜಿನ್‍ನ ಸಂಪಾದಕ ಡಾ| ಆಸ್ಟಿನ್ ಡಿಸೋಜಾ ಪ್ರಭು (ಚಿಕಾಗೋ) ತಿಳಿಸಿದರು.

ಕಳೆದ ಭಾನುವಾರ ಅಂಧೇರಿ ಪೂರ್ವದ ಮಹಾಕಾಳಿ ಅಲ್ಲಿನ ಆತ್ಮದರ್ಶನ್ ಸಭಾಗೃಹದಲ್ಲಿ ಆಶಾವಾದಿ ಪ್ರಕಾಶನ್ ಮತ್ತು ದಿವೋ ಕೊಂಕಣಿ ಸಾಪ್ತಾಹಿಕದ ಆಶ್ರಯದಲ್ಲಿ ಕೊಂಕಣಿ ಲೇಖಕರ ಸಹಮಿಲನ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ಸಹಮಿಲನ ಉದ್ಘಾಟಿಸಿ, ಪಯ್ಣಾರಿಡಾಟ್‍ಕೊಮ್ ವಿಶೇಷಾಂಕ ಬಿಡುಗಡೆ ಗೊಳಿಸಿ ಡಾ| ಆಸ್ಟಿನ್ ಡಿಸೋಜಾ ಮಾತನಾಡಿದರು.


ದಿವೋ ಕೊಂಕಣಿ ವಾರಪತ್ರಿಕೆ ಸಂಪಾದಕ ಲಾರೇನ್ಸ್ ಕುವೆಲ್ಲೋ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗೌರವ ಅತಿಥಿüಯಾಗಿ ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಸಂಸ್ಥೆಯ ಅಧ್ಯಕ್ಷ ಜೋನ್ ಡಿಸಿಲ್ವಾ ಉಪಸ್ಥಿತರಿದ್ದು ಇತ್ತೀಚೆಗೆ ಆಗಲಿದ ಕೊಂಕಣಿ ಲೇಖಕ ವಾಲ್ಟರ್ ಲಸ್ರಾದೋ ಮತ್ತು ಸ್ಟೇನಿ ಡಿಕುನ್ಹಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿ ಕÀನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಉಪಸ್ಥಿತರಿದ್ದು, ಆಶಾವಾದಿ ಪ್ರಕಾಶನ್‍ನ ಪ್ರಕಾಶಕ, ಪಯ್ಣಾರಿಡಾಟ್‍ಕಾಂ ಇದರ ಸಂಪಾದಕ ವಲ್ಲಿ ಕ್ವಾಡ್ರಸ್ ಅಜೆಕಾರು ಅವರ ಕೊಂಕಣಿ ಸಣ್ಣ ಕತೆಗಳ ನಾಲ್ಕನೇ ಸಂಗ್ರಹ `ಕಂಗಾಲ ಕುಕ್ಕೆಹಳ್ಳಿ ಮತ್ತು ಕತೆಗಳು' ಕೃತಿ ಬಿಡುಗಡೆ ಗೊಳಿಸಿದರು.

ಮಧ್ಯಾಂತರದಲ್ಲಿ `ಭವಿಷ್ಯತ್ತಿನಲ್ಲಿ ಮುಂಬಯಿಯ ಕೊಂಕಣಿ' ವಿಷಯದಲ್ಲಿ ಸಮಾಲೋಚನೆ ನಡೆಸಲಾಗಿದ್ದು, ಫೆÇ್ಲೀರಾ ಡಿಸೋಜಾ ಕಲ್ಮಾಡಿ (ಜೆರಿಮೆರಿ), ಫಿಲೋಮೆನಾ ಸಾಂಫ್ರಾನ್ಸಿಸ್ಕೋ, ಡಾ| ರೋಶ್ನಿ ಕ್ರಾಸ್ತ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ಸೆಕುಲರ್ ಸಿಟಿಝನ್ ಸಾಪ್ತಾಹಿಕದ ಪ್ರಕಾಶಕಿ ಸುಜನ್ಹಾ ಎಲ್.ಕುವೆಲ್ಲೋ ಮತ್ತಿತರರು ಹಾಜರಿದ್ದು ಕೊಂಕಣಿಯಲ್ಲಿನ ಅನುಪಮ ಸೇವೆಗಾಗಿ ಫೆÇ್ಲೀರಾ ಡಿಸೋಜಾ ಕಲ್ಮಾಡಿ, ಅಲ್ಫೋನ್ಸೊ ಡಿಸೋಜಾ, ರಿಚಾರ್ಡ್ ಡಿಸೋಜಾ ಸಾನ್ಪಾಡ, ಮೇರಿ ವಾಸ್ ಕಾಂದಿವಿಲಿ ಇವರನ್ನು ಗೌರವಿಸಿ ಅಭಿನಂದಿಸಲಾಯಿತು.

ಬೆನೆಡಿಕ್ತಾ ವಾಲ್ಟರ್ ಲಸ್ರಾದೋ ಅವರು ಸ್ವರ್ಗೀಯ ವಾಲ್ಟರ್ ಲಸ್ರಾದೋ ರಚಿತ ಪಾಟಿಂ ಪರ್ತಲ್ಲಿಂ ಲ್ಹಾರಾಂ ಕೃತಿಯನ್ನು ವಿತರಿಸಿದರು. ವಾಯ್ಲೆಟ್ ಆಳ್ವ ಅತಿಥಿüಗಳನ್ನು ಪರಿಚಯಿಸಿದರು. ವಲ್ಲಿ ಕ್ವಾಡ್ರಸ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here