Sunday 11th, May 2025
canara news

ಬಂಟರ ಸಂಘ ಮುಂಬಯಿ ಸಂಭ್ರಮಿಸಿದ 73ನೇ ಸ್ವಾತಂತ್ರ್ಯೋತ್ಸವ

Published On : 16 Aug 2019   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಆ.15: ಬೃಹನ್ಮುಂಬಯಿಯಲ್ಲಿನ ಪ್ರಸಿದ್ಧ ಸಂಸ್ಥೆ ಬಂಟರ ಸಂಘ ಮುಂಬಯಿ ಇಂದಿಲ್ಲಿ ಬೆಳಿಗ್ಗೆ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಆವರಣದಲ್ಲಿ ರಾಷ್ಟ್ರದ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮಿಸಿತು. ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ರಾಷ್ಟ್ರ ಧ್ವಜಾರೋಹಣಗೈದು ಸಭಾಧ್ಯಕ್ಷತೆ ವಹಿಸಿ ರಾಷ್ಟ್ರದಿನಾಚರಣೆಗೆ ಶುಭಾರೈಸಿದರು. ಈ ಶುಭಾವಸರದಲ್ಲಿ ವಿಶ್ವಾತ್ ಕೆಮಿಕಲ್ಸ್ ಲಿಮಿಟೆಡ್‍ನ ಪ್ರವರ್ತಕ ಹಾಗೂ ಬಂಟ್ಸ್ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಬಿ.ವಿವೇಕ್ ಶೆಟ್ಟಿ ಮುಖ್ಯ ಅತಿಥಿüಯಾಗಿದ್ದು ದೇಶ ಸಂಭ್ರಮದ ಸಂದೇಶ ತಿಳಿಸಿ ಶುಭೇಚ್ಛ ಕೋರಿದರು.

ಈ ಸಂದರ್ಭದಲ್ಲಿ ಬಂಟ್ಸ್ ಸಂಘದÀ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿಜಯ್ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಮಾತೃಭೂಮಿ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರ ಎಂ.ಭಂಡಾರಿ, ಡಾ| ಸುನೀತಾ ಎಂ.ಶೆಟ್ಟಿ, ಉನ್ನತ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್, ಕೋಶಾಧಿಕಾರಿ ಸಿಎ| ರಮೇಶ್ ಶೆಟ್ಟಿ, ಸಿಟಿ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ, ಸಿಎ| ಸದಾಶಿವ ಶೆಟ್ಟಿ, ಪಿ.ಧನಂಜಯ ಶೆಟ್ಟಿ, ಸಿಇಒ ಪ್ರಕಾಶ್ ಮೋರೆ, ಯುಕೆಎಸ್‍ನ ನಿರ್ದೇಶಕ ಕೃಷ್ಣ ಶೆಟ್ಟಿ, ಆರ್‍ಪಿಹೆಚ್‍ನ ಪ್ರಾಂಶುಪಾಲೆ ಸಂಯೋಜಿತ ಮೋರಾರ್ಜಿ, ಜೂನಿಯರ್ ಕಾಲೇಜ್‍ನ ಪ್ರಾಂಶುಪಾಲೆ ಡಾ| ಪದ್ಮಾ ದೇಶ್‍ಮುಖ್, ಉಪ ಪ್ರಾಂಶುಪಾಲೆ ಶೈಲಾ ಶೆಟ್ಟಿ, ಬಂಟ್ಸ್ ಸಂಘದÀ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಎಸ್.ಶೆಟ್ಟಿ ವಾರಂಗ, ಪ್ರಬಂಧಕ ಸುಕುಮಾರ್ ಶೆಟ್ಟಿ ಸೇರಿದಂತೆ ಸಂಘದ ವಿವಿಧ ಪ್ರಾದೇಶಿಕ ವಿಭಾಗೀಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರನೇಕರು, ಸಂಘದ ಶಿಕ್ಷಣಾಲಯಗಳ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು, ನೂರಾರು ವಿದ್ಯಾಥಿರ್üಗಳು ಹಾಜರಿದ್ದು ರಾಷ್ಟ್ರಕ್ಕೆ ಗೌರವ ಸಮರ್ಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here