Sunday 11th, May 2025
canara news

ಭಾರತ್ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರದ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

Published On : 17 Aug 2019   |  Reported By : Rons Bantwal


ಮುಂಬಯಿ, ಆ.16: ದಿ. ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಕಳೆದ ಗುರುವಾರ ಗೋರೆಗಾಂವ್ ಪಶ್ಚಿಮದಲ್ಲಿನ ಕೇಂದ್ರ ಕÀಚೇರಿ ಮಾರುತಿಗಿರಿ ಇಲ್ಲಿ ರಾಷ್ಟ್ರದ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮಿಸಿತು. ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ಧ್ವಜಾರೋಹಣಗೈದರು. ಬಳಿಕ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಕ್ಕೆ ಗೌರವಿಸಿ ರಾಷ್ಟ್ರಹಬ್ಬ ಆಚರಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮತ್ತು ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ, ಬ್ಯಾಂಕ್‍ನ ಪ್ರಧಾನ ಪ್ರಬಂಧಕರಾದ ವಿದ್ಯಾನಂದ ಎಸ್.ಕರ್ಕೇರಾ, ದಿನೇಶ್ ಬಿ.ಸಾಲ್ಯಾನ್, ಉಪ ಪ್ರಧಾನ ಪ್ರಬಂಧಕರಾದ ಮಹೇಶ್ ಬಿ.ಕೋಟ್ಯಾನ್, ಪ್ರಭಾಕರ ಜಿ.ಪೂಜಾರಿ, ನಿವೃತ್ತ ಉನ್ನತಾಧಿಕಾರಿ ಶೋಭಾ ದಯಾನಂದ್, ಬ್ಯಾಂಕ್ ಉಪ ಪ್ರಧಾನ ಪ್ರಬಂಧಕರು, ಸಹ ಪ್ರಧಾನ ಪ್ರಬಂಧಕರು, ಭಾರತ್ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ದಿನೇಶ್ ಎ.ಪೂಜಾರಿ, ಭಾರತ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ಕಾರ್ಯದರ್ಶಿ ದಿನೇಶ್ ಕೆ. ಸನಿಲ್, ಭಾರತ್ ಬ್ಯಾಂಕ್ ಸ್ಟಾಫ್ ವೆಲ್ಫೇರ್ ಕ್ಲಬ್‍ನ ಕಾರ್ಯದರ್ಶಿ ಮೋಕ್ಷ ಕುಂದರ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here