Monday 23rd, September 2019
canara news

ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ

Published On : 20 Aug 2019   |  Reported By : Rons Bantwal


ವಿತರಣೆಗೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ್ಟ್ರ ಸಂಸ್ಥೆಗೆ ವಹಿಸಿದ ಬಂಟ್ಸ್ ಸಂಘ ಮುಂಬಯಿ

ಮುಂಬಯಿ, ಆ.17: ಬೃಹನ್ಮುಂಬಯಿಯಲ್ಲಿನ ಪ್ರಸಿದ್ಧ ಸಂಸ್ಥೆ ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಕರ್ನಾಟಕ ರಾಜ್ಯದದ್ಯಾಂತ ಪ್ರವಾಹದಿಂದ ಸಂಕಷ್ಟಕ್ಕೊಳಗಾದ (ನೆರೆ ಬಾಧಿತ) ಜನರಿಗೆ ದೈನಂದಿನವಾಗಿ ಬೇಕಾಗುವ ಬಟ್ಟೆಬರೆ, ಗೃಹಪಯೋಗಿ, ಆಹಾರ ವಸ್ತುಗಳನ್ನು ಸಂಗ್ರಹಿಸಿತು.

ಸಂಗ್ರಹಿತ ಒಂದು ಲೋಡ್‍ಗಳಷ್ಟು ವಸ್ತುಗಳನ್ನು ನೆರೆಪೀಡಿತ ಪ್ರದೇಶಗಳಲ್ಲಿ ತಲುಪಿಸಿ ಅರ್ಹಜನರಿಗೆ ವಿತರಿಸುವ ಕಾರ್ಯವನ್ನು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಗೆ ವಹಿಸಲಾಗಿದ್ದು, ಕಳೆದ ಗುರುವಾರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಮಹಿಳಾ ವಸತಿ ಗೃಹದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ ಮುಂದಾಳುತ್ವದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಮತ್ತು ಸಲಹಾ ಸಮಿತಿ ಸದಸ್ಯೆ ಡಾ| ಸುನೀತಾ ಎಂ.ಶೆಟ್ಟಿ ಇವರಿಗೆ ಹಸ್ತಾಂತರಿಸಿ ಸಿ ನಿಜಾರ್ಥದ ಬಡವರಿಗೆ ಯೋಗ್ಯವಾಗಿ ವಿತರಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವಾತ್ ಕೆಮಿಕಲ್ಸ್ ಲಿಮಿಟೆಡ್‍ನ ಪ್ರವರ್ತಕ, ಬಂಟ್ಸ್ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಬಿ.ವಿವೇಕ್ ಶೆಟ್ಟಿ, ಸಂಘದÀ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಗೌ| ಪ್ರ| ಕಾರ್ಯದರ್ಶಿ ಚಿತ್ರಾ ಆರ್.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿಜಯ್ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಕಾರ್ಯದರ್ಶಿ ಭಾಸ್ಕರ್ ಶೆಟ್ಟಿ ಕಾರ್ನಾಡ್, ಮಾತೃಭೂಮಿ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರ ಎಂ.ಭಂಡಾರಿ, ಕೋಶಾಧಿಕಾರಿ ಸಿಎ| ರಮೇಶ್ ಶೆಟ್ಟಿ, ಸಿಟಿ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ ನಲ್ಯಗುತ್ತು ಪ್ರಕಾಶ್ ಟಿ.ಶೆಟ್ಟಿ, ಸಿಎ| ಸದಾಶಿವ ಶೆಟ್ಟಿ, ಕೃಷ್ಣ ವಿ.ಶೆಟ್ಟಿ, ಪಿ.ಧನಂಜಯ ಶೆಟ್ಟಿ, ಬಂಟ್ಸ್ ಸಂಘದÀ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಎಸ್.ಶೆಟ್ಟಿ ವಾರಂಗ, ಪ್ರಬಂಧಕ ಸುಕುಮಾರ್ ಶೆಟ್ಟಿ, ಪತ್ರಕರ್ತರ ಸಂಘದ ಉಪಾಧ್ಯಕ್ಷ ರಂಗ ಎಸ್.ಪೂಜಾರಿ, ವಿಶೇಷ ಆಮಂತ್ರಿತ ಸದಸ್ಯ, ಸಾ.ದಯಾ (ದಯಾನಂದ್ ಸಾಲ್ಯಾನ್), ಸದಸ್ಯರಾದ ಗುರುದತ್ತ್ ಎಸ್.ಪೂಂಜಾ, ಹ್ಯಾರಿ ಆರ್.ಸಿಕ್ವೇರಾ, ಸಿ ಎ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ರಿಜೇನ್ಸಿ ಸಮೂಹ ಮುಂಬಯಿ ಇದರ ನಿರ್ದೇಶಕಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ (ಸುಮಾರು 200 ಹೊಸ ಅತೀ ಬೆಳೆಬಾಳುವ ನೂತನ ಸೀರೆಗಳನ್ನು), ರಂಜನಿ ಸುಧಾಕರ್ ಹೆಗ್ಡೆ, ಚಿತ್ರಾ ಆರ್.ಶೆಟ್ಟಿ, ಸುಜತಾ ಗುಣಪಾಲ್ ಶೆಟ್ಟಿ ಐಕಳ, ಪ್ರಶಾಂತಿ ಡಿ.ಶೆಟ್ಟಿ ಸೇರಿದಂತೆ ಹಲವಾರು ಕೊಡುಗೈದಾನಿಗಳು ಕೊಡಮಾಡಿದ ವಸ್ತುಗಳನ್ನು ಇದೀಗಲೇ ರವಾನಿಸಲಾಗಿದ್ದು ತತ್‍ಕ್ಷಣವೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿü ಅವರ ಸಮಾಕ್ಷಮ ಹಾಗೂ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮತ್ತು ಪದಾಧಿಕಾರಿಗಳ ಸಹಯೋಗದೊಂದಿಗೆ ರೋನ್ಸ್ ಬಂಟ್ವಾಳ್ ಉಪಸ್ಥಿತಿಯಲ್ಲಿ ಸೂಕ್ತ ಮತ್ತು ಅತ್ಯಗತ್ಯ ಜನರಿಗೆ ವಿತರಿಸಲಾಗುವುದು ಎಂದು ಕಪಸಮ ಸಕ್ರೀಯ ಸದಸ್ಯ ಆರೀಫ್ ಕಲ್ಕಟ್ಟಾ ತಿಳಿಸಿದ್ದಾರೆ.

 
More News

ಶ್ರೀ ಧರ್ಮಸ್ಥಳ ಮ0ಜುನಾಥೇಶ್ವರ ಭಜನಾ ಪರಿಷತ್ ಭಜನಾ ತರಬೇತಿಗೆ ಶಿಬಿರ ಮತ್ತು ಸ0ಸ್ಕೃತಿ ಸ0ವರ್ಧನಾ ಕಾರ್ಯಗಾರ
ಶ್ರೀ ಧರ್ಮಸ್ಥಳ ಮ0ಜುನಾಥೇಶ್ವರ ಭಜನಾ ಪರಿಷತ್ ಭಜನಾ ತರಬೇತಿಗೆ ಶಿಬಿರ ಮತ್ತು ಸ0ಸ್ಕೃತಿ ಸ0ವರ್ಧನಾ ಕಾರ್ಯಗಾರ
  ಸಿಪ್ರಿಯನ್ ಅಲ್ಬುಕರ್ಕ್ ಸಂಪಿಗೆ ನಿಧನ
ಸಿಪ್ರಿಯನ್ ಅಲ್ಬುಕರ್ಕ್ ಸಂಪಿಗೆ ನಿಧನ
ಬಿಲ್ಲವರ ಎಸೋಸಿಯೇಶನ್, ಮುಂಬಯಿ ಇದರ ಲೋನಾವಾಲ ಸ್ಥಳೀಯ ಕಚೇರಿಯಲ್ಲಿ 165ನೇ ನಾರಾಯಣ ಗುರುಜಯಂತಿ ಕಾರ್ಯಕ್ರಮ
ಬಿಲ್ಲವರ ಎಸೋಸಿಯೇಶನ್, ಮುಂಬಯಿ ಇದರ ಲೋನಾವಾಲ ಸ್ಥಳೀಯ ಕಚೇರಿಯಲ್ಲಿ 165ನೇ ನಾರಾಯಣ ಗುರುಜಯಂತಿ ಕಾರ್ಯಕ್ರಮ

Comment Here