Thursday 12th, December 2019
canara news

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ

Published On : 20 Aug 2019   |  Reported By : Rons Bantwal


ಮಹಿಳೆಯರು ಸಮಾಜದಲ್ಲಿ ಗುರುತಿಸಿಕೊಂಡಲ್ಲಿ ಸಂಬಂಧಗಳು ಬೆಳೆಯುತ್ತವೆ : ಶ್ರೇಯಾ ಎಸ್.ರಾವ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಆ.17: ಮಹಿಳೆಯರು ಮುಂದೆ ಬಂದು ಯಶಸ್ವಿ ಕಾಣಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿಕೊಂಡು ಎಲ್ಲರೊಡನೆ ಮೆರೆತು ಸಮಾಜಕ್ಕೆ ಗುರುತಿಸಿಕೊಳ್ಳಬೇಕು. ಆಗ ಸಮಾಜದಲ್ಲಿ ನಮ್ಮ ಸಂಬಂಧಗಳು ಬೆಳೆಯುತ್ತವೆ. ಮುಂಬಯಿನಂತಹ ಅವಿಶ್ರಾಂತಿತ ಸಮಯದಿಂದ ಸ್ವಲ್ಪ ಸಮಯವನ್ನು ಸಂಘಕ್ಕೆ ಸಮಾಜಕ್ಕೆ ನೀಡಿ ಸಂಘದ ಏಳಿಗೆಗಾಗಿ ದುಡಿಯಬೇಕು ಎಂದು ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಇದರ ಮಹಿಳಾ ವಿಭಾಗದಧ್ಯಕ್ಷೆ ಶ್ರೇಯಾ ಎಸ್.ರಾವ್ ನುಡಿದರು.

ಮಹಿಳಾ ವಿಭಾಗವು ಇಂದಿಲ್ಲಿ ಭಾನುವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ಅರಸಿಣ ಕುಂಕುಮ ಕಾರ್ಯಕ್ರಮ, ಸಾಂಪ್ರದಾಯ ನಮ್ಮ ಸಂಪತ್ತು ಕಾರ್ಯಕ್ರಮ, ಕ್ಷತ್ರ ಹಬ್ಬ ಇತ್ಯಾದಿ ಕಾರ್ಯಕ್ರಮಗಳ ಮೇಳೈಕೆಯಲ್ಲಿ ವಾರ್ಷಿಕ ಶ್ರಾವಣೋತ್ಸ-2019ನ್ನು ಸಂಭ್ರಮ ಸಡಗರದೊಂದಿಗೆ ಆಚರಿಸಿದ್ದು ಕಾರ್ಯಕ್ರಮವನ್ನುದ್ದೇಶಿಸಿ ಶ್ರೇಯಾ ರಾವ್ ಮಾತನಾಡಿದರು.

ಮಹಿಳಾ ವಿಭಾಗದ ಮುಂದಾಳುತ್ವ ಹಾಗೂ ಸಂಘದ ಅಧ್ಯಕ್ಷ ರಾಜ್‍ಕುಮಾರ್ ಕಾರ್ನಾಡ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಅತಿಥಿü ಅಭ್ಯಾಗತರಾಗಿ ರಾಜಶ್ರೀ ಅನಿಲ್ ರಾವ್, ಲೀಲಾವತಿ ರತ್ನಾಕರ ರಾವ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಉಪಾಧ್ಯಕ್ಷ ಎನ್.ರವೀಂದ್ರನಾಥ್ ರಾವ್, ಗೌ| ಪ್ರ| ಕಾರ್ಯದರ್ಶಿ ಕೇದರ್‍ನಾಥ ಆರ್.ಬೋಳಾರ್ ವೇದಿಕೆಯಲ್ಲಿದ್ದು, ಸಂಘದ ಮಹಿಳಾ ಗೌ| ಕಾರ್ಯದರ್ಶಿ ಆರತಿ ಎನ್.ರಾವ್, ಗೌ| ಕೋಶಾಧಿಕಾರಿ ಕವಿತಾ ಆರ್.ರಾವ್, ಶುಭಾರೈಸಿದರು.

ಸಮಾಜದ ಅಭಿವೃದ್ಧಿಗೆ ಮಹಿಳಾ ವಿಭಾಗದ ಸೇವೆ ಅತಿಮುಖ್ಯ. ಎರಡು ಕೈ ತಟ್ಟಿದರೆ ಚಪ್ಪಾಳೆ ಬಂದ ಹಾಗೇ ಪುರುಷರು ಮಹಿಳೆಯರು ಸಮಾನರಾಗಿ ಸೇರಿ ನಿಸ್ವಾರ್ಥ ಸೇವೆ ಮಾಡಿದರೆ, ಸಂಘ ನಿರಂತರವಾಗಿ ಸಾಗಲು ಸಾಧ್ಯ. ಅಷ್ಟೆ ಅಲ್ಲ ಯುವ ವಿಭಾಗವು ಇದರಲ್ಲಿ ಕೈಜೋಡಿಸಿಕೊಳ್ಳಬೇಕು. ನಾಲ್ಕು ವರ್ಷಗಳಿಂದ ಶ್ರವಣ ಸಮಾರಂಭವು ವಿಜೃಂಭಣೆಯಿಂದ ನಡೆಯುತ್ತಾ ಬಂದಿದೆ ಅದಕ್ಕೆ ಇಲ್ಲಿ ಸೇರಿದಂತ ಬಂದು ಭಗಿನಿಯರು ಸಾಕ್ಷಿ. ಕರ್ನಾಟಕದಲ್ಲಿ ಅತಿವೃಷ್ಠಿಯಿಂದ ಬಹಳ ಕಡೆಗಳಲ್ಲಿ ಪ್ರವಾಹ ಬಂದಿದೆ. ಅವರ ಕಷ್ಟ ಕಾಲದಲ್ಲಿ ನೆರವು ನೀಡುವುದು ನಮ್ಮ ಕರ್ತವ್ಯ. ಇವತ್ತು ಬಹಳಷ್ಟು ಸಮಾಜ ಬಾಂಧವರು, ದಾನಿಗಳ ಸಹಾಯಹಸ್ತ ಸುಮಾರು 1 ಲಕ್ಷ ಮೊತ್ತದ ಸಾಮಾಗ್ರಿಗಳನ್ನು ನಿರಾಶ್ರಿತರಿಗೆ ಕಳುಹಿಸುತ್ತಿದ್ದೇವೆ ಎಂದು ಅಧ್ಯಕ್ಷೀಯ ಮಾತುಗಳನ್ನಾಡಿ ರಾಜ್‍ಕುಮಾರ್ ಕಾರ್ನಾಡ್ ತಿಳಿಸಿದರು.

ಮಾಜಿ ಮಹಿಳಾ ವಿಭಾಗಧ್ಯಕ್ಷೆ ರೀನಾ ಕೇದರ್‍ನಾಥ ಬೋಳಾರ್ ಸಂಪ್ರದಾಯಿಕ ಶ್ರಾವಣ ಆಚರಣೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರಾಜಶ್ರೀ ಅನಿಲ್ ಅವರಿಂದ ಯೋಗ, ಕುಟುಂಬ ನಿರ್ವಾಹಣಾ ಮಾಹಿತಿ ಬಗ್ಗೆ ಲತಾ ಶೆಟ್ಟಿ ಮಾಹಿತಿ, ಧನಲಕ್ಷ್ಮೀ ರಾಜ್‍ಕುಮಾರ್ ಕಾರ್ನಾಡ್ ಅವರಿಂದ ಅಡುಗೆಯ ಬಗ್ಗೆ ಥಟನಾ ಅಂತಾ ಮಾಡಿ ಕಾರ್ಯಕ್ರಮ ನಡೆಯಿತು. ಹರಟೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಸದಸ್ಯರು, ಮಹಿಳಾ ಸದಸ್ಯೆಯರು ಹಾಗೂ ಮಕ್ಕಳು ವಿವಿಧ ವಿನೋದಾವಳಿಗಳನ್ನು ಪ್ರಸ್ತುತ ಪಡಿಸಿದ್ದು, ಜೊತೆ ಜೊತೆಯಾಗಿ ಹಾಡೋಣ ಕಾರ್ಯಕ್ರಮದಲ್ಲಿ ತಂದೆ-ಮಗ, ಅತ್ತಿಗೆ-ಸೊಸೆ, ತಾಯಿ-ಮಗಳು ಇಂತಹ ಅನೇಕ ಜೋಡಿ ಸೇರಿ ಹಾಡಿದರು.

ಸಂಘದ ಮಹಿಳಾ ವಿಭಾಗದ ಸದಸ್ಯರಾದ ಚಿತ್ರಾ ಎಂ.ರಾವ್, ಪ್ರಜ್ಞ ಎಸ್.ರಾವ್, ಕಾಂತಿ ವಿ.ರಾವ್, ಧನಲಕ್ಷ್ಮಿ ಆರ್.ಕಾರ್ನಾಡ್, ಸಾರಿಕ ಡಿ.ಶೇರೆಗಾರ್, ಅನುಪಮ ಎಸ್.ರಾವ್, ನಿಶಾ ಎಸ್.ರಾವ್, ಗಾಯತ್ರಿ ರಾವ್ ಸೇರಿದಂತೆ ಇತರ ಪದಾಧಿಕಾರಿಗಳು, ಸದಸ್ಯರನೇಕರು, ಸಮಾಜ ಬಾಂಧವರು ಉಪಸ್ಥಿತರಿದ್ದು ಸಂಭ್ರಮವನ್ನಾಚರಿಸಿದರು.


ಕುಲದೇವರು ಶ್ರೀ ರಾಮ ದೇವರಿಗೆ ಆರಾಧಿಸಿ ಸ್ತೋತ್ರದೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಮಹಿಳಾ ವಿಭಾಗದ ಸದಸ್ಯೆಯರು ಭಜನೆಗೈದು ಅರಸಿನ ಕುಂಕುಮ ಕಾರ್ಯಕ್ರಮ ನೆರವೆರಿಸಿದರು. ಶ್ರೇಯಾ ರಾವ್ ಸ್ವಾಗತಿಸಿದರು. ರಾಜ್‍ಕುಮಾರ್ ಕಾರ್ನಾಡ್ ಗಣ್ಯರಿಗೆ ಪುಷ್ಫಗುಪ್ಚವನ್ನಿತ್ತು, ಸ್ಪರ್ಧಾ ವಿಜೇತರಿಗೆ ಬಹುಮಾನ ಪ್ರದಾನಿಸಿ ಅಭಿನಂದಿಸಿದರು. ಸಪ್ನಾ ಉದಯಕುಮಾರ್ ಬೇಕಲ್ ಅತಿಥಿüಗಳನ್ನು ಕಾರ್ಯಕ್ರಮ ನಿರೂಪಿಸಿದರು. ದೀಪಿಕಾ ರಾವ್ ಧನ್ಯವಾದ ಸಮರ್ಪಿಸಿದರು.
More News

ಮೈಸೂರು ಅಸೋಸಿಯೇಷನ್‍ನಲ್ಲಿ ಪ್ರದರ್ಶಿಸಲ್ಪಟ್ಟ `ಚಂದ್ರನಖಾಯಣ' ಕನ್ನಡ ನಾಟಕ
ಮೈಸೂರು ಅಸೋಸಿಯೇಷನ್‍ನಲ್ಲಿ ಪ್ರದರ್ಶಿಸಲ್ಪಟ್ಟ `ಚಂದ್ರನಖಾಯಣ' ಕನ್ನಡ ನಾಟಕ
ಸಾಹಿತ್ಯ ಬಳಗ ಮುಂಬಯಿ-ರಜತೋತ್ಸವ ಸಮಾರೋಪ-ಸಾಧಕರಿಗೆ ನಮನ ಕೃತಿಗಳ ಅನಾವರಣ
ಸಾಹಿತ್ಯ ಬಳಗ ಮುಂಬಯಿ-ರಜತೋತ್ಸವ ಸಮಾರೋಪ-ಸಾಧಕರಿಗೆ ನಮನ ಕೃತಿಗಳ ಅನಾವರಣ
ಸಾಹಿತ್ಯ ಬಳಗ ಮುಂಬಯಿ-ರಜತೋತ್ಸವ ಸಮಾರೋಪ-ಅಭಿನಂದನಾ ಗೌರವ
ಸಾಹಿತ್ಯ ಬಳಗ ಮುಂಬಯಿ-ರಜತೋತ್ಸವ ಸಮಾರೋಪ-ಅಭಿನಂದನಾ ಗೌರವ

Comment Here