Thursday 28th, March 2024
canara news

15ನೇ ವಾರ್ಷಿಕ ಯಕ್ಷಗಾನ ಕಲಾಪ್ರಶಸ್ತಿ ಪ್ರದಾನಿಸಿದ ಬಿಲ್ಲವರ ಅಸೋಸಿಯೇಶನ್ ಮುಂಬಯಿ

Published On : 25 Aug 2019   |  Reported By : Rons Bantwal


ಭಾಗವತ ಅಂದರೆ ಭಗವದ್ಭಕ್ತ ಎಂದರ್ಥ : ಪೆÇಲ್ಯ ಉಮೇಶ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ,: ಯಕ್ಷಗಾನ ಪರಿಷ್ಕೃತವಾದ ಜಾಗೃತಿಯ ಜಾನಪದ ಕಲೆಯಾಗಿದ್ದು, ಭಾರತೀಯ ಜನಜೀವನದ ಜ್ಞಾನನಿಷ್ಠೆಯನ್ನು ಜನಮಾನಸದಲ್ಲಿ ಪಸರಿಸುವುದಕ್ಕಾಗಿಯೇ ಈ ಕಲೆ ಆರಾಧನೆಗಾಗಿ ಹುಟ್ಟಿದ್ದು. ನಮ್ಮ ಪೂರ್ವಜರ ಕಲ್ಪನೆಯಂತೆ ಸಾಂಸ್ಕೃತಿಕ ಮತ್ತು ಸಾಹಿತಿಕ ಶಕ್ತಿಗಳನ್ನು ನಿರೀಕ್ಷಿಸುವಲ್ಲಿ ಜ್ಞಾನ ನಿರ್ಮಾಣ ಮಾಡುವ ಈ ಕಲೆ ರಾಷ್ಟ್ರದ ಪ್ರತಿಯೊಂದು ಗ್ರಾಮವೂ ಭಾರತೀಯ ಸಂಸ್ಕೃತಿ ಮತ್ತು ಕಲೆಯನ್ನು ರೂಪಿಸುವಂತೆ ಮಾಡುತ್ತಾ ಎಲ್ಲರನ್ನೂ ಕಲಾವಿದರನ್ನಾಗಿಸುವ ಉದ್ದೇಶವಾಗಿ ಹುಟ್ಟುಪಡೆದಿದೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಮೇಳೈಕೆಯುಳ್ಳ ಈ ಕಲೆ ಚಲಿಸುವ ವಿಶ್ವವಿದ್ಯಾಲಯವಾಗಿ ಸಾಗರ ಲೋಕದ ಸಮೃದ್ಧ ಕಲೆ ಇದಾಗಿದೆ. ಎಂದು ಮಹಾನಗರದ ಹೊಟೇಲು ಉದ್ಯಮಿ ಪೆÇಲ್ಯ ಉಮೇಶ್ ಶೆಟ್ಟಿ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀನಾರಾಯಣ ಗುರು ಸಭಾಗೃಹದಲ್ಲಿ ನಿರ್ಮಿತ ಸ್ವರ್ಗೀಯ ಸೂರು ಸಿ.ಕರ್ಕೇರ ವೇದಿಕೆಯಲ್ಲಿ ಜಯ ಸಿ.ಸುವರ್ಣ ತನ್ನ ಮಾತೃಶ್ರೀ ದಿ| ಅಚ್ಚು ಸಿ.ಸುವರ್ಣ ಸ್ಮರಣಾರ್ಥ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಲಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ವತಿಯಿಂದ ವಾರ್ಷಿಕವಾಗಿ ಕೊಡಮಾಡುವ `15ನೇ ವಾರ್ಷಿಕ ಯಕ್ಷಗಾನ ಕಲಾ ಪ್ರಶಸ್ತಿ' ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಉಪಸ್ಥಿತರಿದ್ದು ಉಮೇಶ್ ಶೆಟ್ಟಿ ಮಾತನಾಡಿದರು.

ಪೆÇಲ್ಯ ಅವರು ಅಭಿನಂದನಾ ಭಾಷಣಗೈದು ಭಾಗವತ ಅಂದರೆ ಭಗವದ್ಭಕ್ತ ಎಂದರ್ಥ. ಓದು ಬಾರದ ಮಂದಿಯ ಮುಂದೆ ಮೌಲ್ಯಯುತವಾಗಿ ಮಂಡಿಸುವ ಸಾಧ್ವಿ ಶಿರೋಮಣಿಗಳ ಸಮಸ್ತ ಜೀವನ ಚಿತ್ರಣವನ್ನು ಬಿಡಿಬಿಡಿ, ಎಳೆಎಳೆಯಾಗಿ, ಧಾರೆಧಾರೆಯಾಗಿ ಚಿತ್ರಿಸಿ ಜೀವನವನ್ನು ಎತ್ತರಕ್ಕೇರಿಸುವ ಈ ಕಲೆಯನ್ನು ಪ್ರಸ್ತುತ ಪಡಿಸುವಲ್ಲಿ ಭಾಗವತನ ಪಾತ್ರ ಹಿರಿದಾಗಿದೆ. ಭಗವಂತನಿಗೆ ಸಂಬಂಧಪಟ್ಟವನೇ ಓರ್ವ ಭಾಗತವನಾಗಲು ಸಾಧ್ಯ. ಭಾಗವತ ಎಂದು ಕರೆಯಲ್ಪಡುವುದು ಅಂದರೆ ಪೂರ್ವಜನ್ಮಗಳ ಹಿಂದಿನ ಒಂದು ಪಲಯಾಂಜನ ಹೇಳಬೇಕಾಗುತ್ತದೆ. ಭಾಗವತನು ಆಸ್ತಿಕನಾಗಿದ್ದು ಪುರಾತನಗಳ ಜ್ಞಾನÀವುಳ್ಳವನಾಗಿರಬೇಕು. ಆಗಿದ್ದಾಗ ಮಾತ್ರ ಕಲೆಯು ನಿಜಾರ್ಥದ ಮೌಲ್ಯವನ್ನು ಹೊಂದಿ ಪಾವಿತ್ರ ್ಯತೆಯ ಕಲೆಯಾಗಿ ವಿಶ್ವಮಾನ್ಯವಾಗಿ ಬೆಳೆಯಬಲ್ಲದು. ಇದನ್ನು ಕನ್ನಡಿಕಟ್ಟೆ ಕರಗತಗೊಳಿಸಿದ ಕಾರಣ ಇಂತಹ ಪುರಸ್ಕಾರಕ್ಕೆ ಅರ್ಹರು. ಪರಮ ಭಾಗವತನ ಈ ಸನ್ಮಾನ ಸ್ತುತ್ಯರ್ಹ ಎಂದು ಎನ್ನುತ್ತಾ ಪ್ರಶಸ್ತಿ ಪುರಸ್ಕೃತರಿಗೆ ಶುಭರೈಸಿದರು.

ಬಿಲ್ಲವರ ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿü ಅಭ್ಯಾಗತರಾಗಿ ಪ್ರಶಸ್ತಿಯ ಪ್ರಾಯೋಜಕರೂ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಗೌರವ ಅತಿಥಿüಗಳಾಗಿ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ, ಭಾರತ್ ಬ್ಯಾಂಕ್‍ನ ನಿರ್ದೇಶಕಿ ಶಾರದ ಸೂರು ಕರ್ಕೇರ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಕಾರ್ಯಕ್ರಮದ ಪ್ರಾಯೋಜಕ ಸದಾನಂದ್ ಅಂಚನ್ ಕಾಪು (ಥಾಣೆ), ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಹರೀಶ್ ಜಿ.ಅವಿೂನ್, ಶ್ರೀನಿವಾಸ ಆರ್.ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ವೇದಿಕೆಯಲ್ಲಿದ್ದು ಗಾನಸುರಭಿ ಬಿರುದಾಂಕಿತ ಯಕ್ಷಗಾನದ ಪ್ರಸಿದ್ಧ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಅವರಿಗೆ `ಯಕ್ಷಗಾನ ಕಲಾ ಪ್ರಶಸ್ತಿ-2019'ನ್ನು ಪ್ರದಾನಿಸಿ ಅಭಿನಂದಿಸಿದರು.

ಜಯ ಸುವರ್ಣರ ದೂರದೃಷ್ಠಿಯಂತೆ ಯಕ್ಷಗಾನ ಉಳಿವಿಗೆ ನಾವು ಏನು ಮಾಡಬಹುದು ಅನ್ನುವ ಚಿಂತನೆ ಫಲಪ್ರದವಾಗಿದೆ. ಗುರುನಾರಾಯಣ ಯಕ್ಷಗಾನ ಮಂಡಳಿಯನ್ನು ಬಿಲ್ಲವರ ಅಸೋಸಿಯೇಶನ್ ವಹಿಸಿ ಕೊಂಡು ಆ ಮೂಲಕ ಇಂತಹ ಪ್ರಶಸ್ತಿಯನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಅನ್ನುವ ಆಶಯ ಕೂಡಾ ಫಲಿಸಿದೆ. ಪ್ರಶಸ್ತಿಯ ಮೊತ್ತ ಕೂಡಾ ಕಡಿಮೆಯಲ್ಲ. ಕೊಡಮಾಡುವ ಸಂಸ್ಥೆಯೂ ಸಣ್ಣದಲ್ಲ. ಯಕ್ಷಲೋಕದ ಇತಿಹಾಸವನ್ನು ಯಾವೊತ್ತು ಉಳಿಸುವ ಪ್ರಯತ್ನ ಈ ಸಂಸ್ಥೆ ಮಾಡಿದೆ ಎಂದು ಪಾಲೆತ್ತಾಡಿ ನುಡಿದರು.

ಪ್ರಸಕ್ತ ಕಾಲಘಟ್ಟದಲ್ಲಿ ಯಕ್ಷಗಾನ ಅಂದರೆ ಸಾಧನೆಯೇ ಸರಿ. ಸಾಮಾನ್ಯನಿಗೆ ಈ ಕ್ಷೇತ್ರದಲ್ಲಿ ಈಜಲು ಸಾಧ್ಯವಿಲ್ಲ. ಇದರ ಕೀರ್ತಿಯ ಶಿಖರದ ಕೆಳಮೆಟ್ಟಲಿನಲ್ಲಿ ನಾನು ಕಾಲಿರಿಸುತ್ತಿದ್ದೇನೆಯಷ್ಟೇ. ನಾನು ಇನ್ನೂ 90% ಪಳಗಬೇಕಾಗಿದೆ. ಹಳೆಕಾಲದ ಯಕ್ಷಗಾನ ಮತ್ತೆ ತಲೆಯಿತ್ತಿ ನಿಂತಿದ್ದು ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕಲಾಭಿಮಾನಿಗಳದ್ದಾಗಿದೆ. ಕಲಾವಿದರಕ್ಕಿಂತ ಅನುಭವ ಸಭಿಕರು ತಿಳಿದಿರುವ ಈ ಕಾಲದಲ್ಲಿ ಕಲಾವಿದನನ್ನು ತಿದ್ದಿ ಮಾರ್ಗದರ್ಶನ ಮಾಡುವ ಕೆಲಸ ಸಭಿಕರು ಮಾಡಬೇಕಾಗಿದೆ. ನಿವೃತ್ತಿ ಹಂತದ ಹಿರಿಯ ಕಲಾವಿದರನ್ನು ಸನ್ಮಾನಿಸಿದರೆ ಸಾಧಕ ಸಂದೇಶ ಸಾರಿದರೆ ಯುವ ಕಲಾವಿದರನ್ನು ಗೌರವಿಸಿದರೆ ನೀವು ಮಾಡಬೇಕಾದ ಕೆಲಸ ಇನ್ನಷ್ಟಿದೆ ಎಂದು ಕಾರ್ಯಭಾರ ಹೆಚ್ಚಿಸುತ್ತದೆ ಎಂದು ಪ್ರಶಸ್ತಿಗೆ ಉತ್ತರಿಸಿ ರವಿಚಂದ್ರ ಕನ್ನಡಿಕಟ್ಟೆ ತಿಳಿಸಿದರು.

ಚಂದ್ರಶೇಖರ್ ಪೂಜಾರಿ ಅಧ್ಯಕ್ಷೀಯ ಭಾಷಣಗೈದು ಶ್ರೀ ಗುರುನಾರಾಯಣರ ಪ್ರೇರಣೆ ಹಾಗೂ ಮುಂಬಯಿಗರ ಸಹಕಾರ ಮತ್ತು ಕಲಾಭಿಮಾನಿಗಳ ಆಶೀರ್ವಾಚನ ಗುರುನಾರಾಯಣ ಯಕ್ಷಗಾನ ಮಂಡಳಿ ಈ ಮಟ್ಟಕ್ಕೆ ಬೆಳೆದಿದೆ. ಯಕ್ಷರಂಗದಲ್ಲಿ ಇನ್ನೂ ಪಳಗಿ, ಕಲಾಸೇವೆಯೊಂದಿಗೆ ಶತಮಾನಗಳತ್ತ ಸಾಗಲಿ ಎಂದು ಹಾರೈಸಿದರು.

ಭಾಗವತ ಮುದ್ದು ಅಂಚನ್ ಅವರು ಭಾಗವತಿಕೆ ಶೈಲಿಯಲ್ಲಿ ಪ್ರಾರ್ಥನೆಗೈದರು. ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಯಾನಂದ್ ಆರ್.ಪೂಜಾರಿ ಸ್ವಾಗತಿಸಿದರು. ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್.ಶಾಂತಿ ಪ್ರಸ್ತಾವನೆಗೈದÀು ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಬಾಬು ಎಲ್.ಸಾಲ್ಯಾನ್, ವಿನೋದ್ ಅವಿೂನ್, ಸದಾನಂದ್ ಅಂಚನ್ ಕಾಪು ಪ್ರಾಯೋಜಕತ್ವದಲ್ಲಿ ಕರ್ನಾಟಕ ಜಾನಪದ, ಯಕ್ಷಗಾನ ಅಕಾಡೆಮಿ ಸಾಹಿತ್ಯ ಪ್ರಶಸ್ತಿ ಹಾಗೂ ಶ್ರೀ ವಿಶ್ವೇಶ್ವರ ತೀರ್ಥ ಪ್ರಶಸ್ತಿ ಪುರಸ್ಕೃತ ಹಾಗೂ ಅತಿಥಿs ಕಲಾವಿದರಿಂದ `ಬೌಮಾಸುರ-ರಾಜಾ ಪರೀಕ್ಷಿತÀ' ಯಕ್ಷಗಾನ ಬಯಲಾಟ ಪ್ರದರ್ಶಿಸಿದರು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here