Sunday 11th, May 2025
canara news

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್-ಬಿಎಸ್‍ಕೆಬಿಎ (ಗೋಕುಲ) ಸಂಸ್ಥೆಗಳಿಂದ

Published On : 27 Aug 2019   |  Reported By : Rons Bantwal


ಆಶ್ರಯದ ಶ್ರೀ ಕೃಷ್ಣ ಬಾಲಾಲಯದಲ್ಲಿ ಸಂಭ್ರಮಿಸಲ್ಪಟ್ಟ ಶ್ರೀ ಕೃಷ್ಣ ಜನ್ಮಾಷ್ಟಮಿ

ಮುಂಬಯಿ, ಆ.25: ನೆರೂಲ್ ಅಲ್ಲಿನ ತನ್ನ ಹಿರಿಯ ನಾಗರಿಕರ ಆಶ್ರಯಧಾಮ ಆಶ್ರಯದ `ಶ್ರೀ ಕೃಷ್ಣ ಬಾಲಾಲಯ'ದಲ್ಲಿ ಕಳೆದ ಶನಿವಾರ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಸಂಸ್ಥೆಯ ಸಹಯೋಗದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸಿತು.

ಗೋಕುಲ ಸ್ಥಾಪಕ ಸದಸ್ಯರಲ್ಲಿ ಓರ್ವರಾದ ದಿ| ಯು.ವಿ ಉಪಾಧ್ಯ ಅವರ ಕುಟುಂಬ ಸದಸ್ಯರ ಪುಷ್ಪಾಲಂಕಾರದೊಂದಿಗೆ ಗೋಕುಲದ ನಿಕಟಪೂರ್ವ ಅರ್ಚಕ ಹರಿ ಭಟ್ ಮುಂಡ್ಕೂರು ಅವರ ಮುಂದಾಳತ್ವದಲ್ಲಿ ಬಾಲಾಲಯ ಅರ್ಚಕ ಶ್ರೀ ಕೃಷ್ಣಪ್ರಸಾದ್ ಕೆದಿಲಾಯ ಅವರು ಬಾಲಾಲಯ ಹಾಗೂ ಶ್ರೀ ಗೋಪಾಲಕೃಷ್ಣ ದೇವರ ದಿವ್ಯಮೂರ್ತಿ ವಿಶೇಷವಾಗಿ ಸಜ್ಜುಗೊಳಿಸಿ ಪೂಜಾಧಿಗಳನ್ನು ನೆರವೇರಿಸಿದರು.

ಗೋಕುಲ ಭಜನಾ ಮಂಡಳಿ, ಶ್ರೀ ಹರಿಕೃಷ್ಣ ಭಜನಾ ಮಂಡಳಿ, ಶ್ರೀಕೃಷ್ಣ ಭಜನಾ ಮಂಡಳಿ ಹಾಗೂ ಬಾಲ ಕಲಾವೃಂದ ಶ್ರೀಕೃಷ್ಣ ಭಜನೆ ನೆರವೇರಿತು. ನಂತರ ಅರ್ಚಕ ವರ್ಗ ಹಾಗೂ ಭಜನಾ ಮಂಡಳಿ ವಿಷ್ಣು ಸಹಸ್ರ ನಾಮ ಪಠನೆ, ಪುಷ್ಪಾರ್ಚನೆ, ಶ್ರೀ ಕೃಷ್ಣಾಷ್ಟೋತ್ತರ ಸ್ತೋತ್ರ ಪಠನೆಗಳೊಂದಿಗೆ ಪೂಜಾ ವಿಧಿಗಳನ್ನು ನೆರವೇರಿದರು.

ಅರ್ಚಕ ಹರಿ ಭಟ್ ಪ್ರಾರ್ಥನೆಗೈದು ಶ್ರೀ ಕೃಷ್ಣನ ಜನ್ಮದಿನವನ್ನು ಭಕ್ತಿ, ಶ್ರದ್ಧಾ ಪೂರ್ವಕವಾಗಿ ಭಜನೆ, ಕೀರ್ತನೆ, ಸ್ತೋತ್ರ ಪಠನೆ, ಮಂತ್ರ ಪುಷ್ಪಾರ್ಚನೆಗಳಿಂದ ಶ್ರೀಕೃಷ್ಣನ ಆರಾಧನೆ ನಡೆಸಿದರು. ಹಾಗೂ ಅಸೋಸಿಯೇಶನ್‍ನ ನೂತನ ಶ್ರೀ ಕೃಷ್ಣ ಮಂದಿರ ಹಾಗೂ ಗೋಕುಲ ಕಟ್ಟಡ ನಿರ್ಮಾಣದ ಬೃಹತ್ ಯೋಜನೆ ಹಮ್ಮಿಕೊಂಡಿದ್ದು, ಸದ್ಯ ಬಾಲಾಲಯದಲ್ಲಿರುವ ಶ್ರೀ ದೇವರನ್ನು ಮೂಲಾಲಯದ ಭವ್ಯ ಮಂದಿರದಲ್ಲಿ ಅತಿ ಶೀಘ್ರದಲ್ಲಿ ಪುನರ್ ಪ್ರತಿಷ್ಠಾಪಿಸುವಂತೆ ಭಗವಂತ ಅನುಗ್ರಹಿಸಲಿ ಎಂದು ಪ್ರಾಥಿರ್üಸಿದರು.

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿಎಸ್‍ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಉಪಾಧ್ಯಕ್ಷ ವಾಮನ್ ಹೊಳ್ಳ, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಕೋಶಾಧಿಕಾರಿ ಹರಿದಾಸ್ ಭಟ್, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಪೂಜಾ ಸಮಿತಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡು ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನಗೈದರು. ತೀರ್ಥ ಪ್ರಸಾದ ವಿತರಣೆಯೊಂದಿಗೆ ವಾರ್ಷಿಕ ಜನ್ಮಾಷ್ಟಮಿ ಸಂಭ್ರಮ ಸಂಪನ್ನಗೊಂಡಿತು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here