Sunday 11th, May 2025
canara news

ಹಿರಿಯ ರಂಗಕಲಾವಿದ `ಕಲಾ ಚಕ್ರವರ್ತಿ' ಹ್ಯಾರಿಬಾಯ್ ನಿಧನ

Published On : 30 Aug 2019   |  Reported By : Rons Bantwal


ಮುಂಬಯಿ, ಆ.29: ಮುಂಬಯಿ ಸಾಂತಕ್ರೂಜ್ ಪೂರ್ವದ ವಕೋಲಾ ನಿವಾಸಿ ಕಾಮಿಡಿಕಿಂಗ್ ಪ್ರಸಿದ್ಧ ಕೊಂಕಣಿ ರಂಗಕಲಾವಿದ ಹ್ಯಾರಿಬಾಯ್ ನಾಮಾಂಕಿತ ಹೆರಾಲ್ಡ್ ಡಿಸೋಜಾ (90.) ಕಳೆದ ಗುರುವಾರ ಸಂಜೆ ಉಪನಗರ ನಾಯ್ಗಾಂವ್ ಅಲ್ಲಿನ ಖಾಸಾಗಿ ಆಸ್ಪತ್ರೆಯಲ್ಲಿ ವಯೋವೃದ್ಧ ಸಹಜವಾಗಿ ನಿಧನರಾದರರು.

ಮಂಗಳೂರು ವಾಲೆನ್ಸಿಯಾ ಇಲ್ಲಿ ಜನಿಸಿ ಕುಲ್ಶೇಖರದಲ್ಲಿದ್ದು ಬಾಲ್ಯದಲ್ಲೇ ಮುಂಬಯಿಗೆ ಆಗಮಿಸಿದ್ದ ಹ್ಯಾರಿಬಾಯ್ ಓರ್ವ ಅಪ್ರತಿಮ ರಂಗಕಲಾವಿದ, ಲೇಖಕ ಆಗಿದ್ದರು. ಸುಮಾರು 200 ಕೊಂಕಣಿ ನಾಟಕಗಳಲ್ಲಿ ಅಭಿನಯಿಸಿದ ಹಿರಿಯ ಕಲಾವಿದರು. ಸ್ವತಃ ನಾಲ್ಕು ಕೊಂಕಣಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಪ್ರದರ್ಶಿಸಿದ್ದು, ಕೊಂಕಣಿ ಸಂಗೀತದಲ್ಲೂ ಪಳಗಿದ್ದ ಇವರು ಸಂಗೀತ ನಿರ್ದೇಶಕರಾಗಿದ್ದು, ಸ್ವರಚಿತ 500 ಕೊಂಕಣಿ ಪದ್ಯಗಳನ್ನು ರಚಿಸಿ `ನೆಕೆತ್ರ್' ಕೊಂಕಣಿ ಹಾಡುಗಳ ಸಿಡಿ ಸಹಿತ ಎರಡು ಸಂಗೀತ ಅಲ್ಬಮ್‍ಗಳನ್ನೂ ರಚಿಸಿ ಪ್ರಸಿದ್ಧರಾಗಿದ್ದರು.

ಕೆನಾರಾಯ್ಟ್‍ಸ್ ಯೂತ್ ಅಸೋಸಿಯೇಶನ್ ಮುಂಬಯಿ ಇದರ ಸಕ್ರೀಯ ಸದಸ್ಯರೂ, ಸೈಂಟ್ ಸಾಂತಕ್ರೂಜ್ ಪೂರ್ವದ ಆ್ಯಂಟನಿ'ಸ್ ಇಗರ್ಜಿ ಇಲ್ಲಿನ ವಕೋಲಾಚೊ ತಾಳೊ ಕೊಂಕಣಿ ಅಸೋಸಿಯೇಶನ್‍ನ ಉಪಾಧ್ಯಕ್ಷ ಆಗಿಯೂ ಸೇವೆ ಸಲ್ಲಿಸಿದ್ದರು. ಮುಂಬಯಿಯಲ್ಲಿನ ಹಲವಾರು ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟ್ಟ ಹಿರಿಯ ಕಲಾವಿದರಾಗಿದ್ದ ಇವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಗೌರವ ಪುರಸ್ಕಾರಕ್ಕೆ ಪಾತ್ರವಾಗಿದ್ದು, ಕಲಾ ಕಿರಣ್ ಮುಂಬಯಿ (ಸಾಕಿನಾಕ) ಸಂಸ್ಥೆಯು ಜೀವಮಾನ ಸಾಧಕ ಪ್ರಶಸ್ತಿ ಪ್ರದಾನಿಸಿ ಗೌರವಿಸಿತ್ತು. ಸಯಾನ್‍ನ ಅವರ್ ಲೇಡಿ ಆಫ್ ಗುಡ್ ಕೌನ್ಸಿಲ್ ಇಗರ್ಜಿಯಲ್ಲಿನ ಕೊಂಕಣಿ ವೆಲ್ಫೇರ್ ಅಸೋಸಿಯೇಶನ್ ಸಂಸ್ಥೆಯೂ ಹೆರಿಬೊಯ್ ಅವರಿಗೆ `ಕಲಾ ಚಕ್ರವರ್ತಿ' ಬಿರುದು ಪ್ರದಾನಿಸಿ ಸನ್ಮಾನಿಸಿದ್ದರು.

ಅನೇಕ ದಶಕಗಳಿಂದ ವಕೋಲಾದಲ್ಲೇ ವಾಸವಾಗಿ ಹ್ಯಾರಿಬಾಯ್ ಮೂರು ಗಂಡು, ಎರಡು ಹೆಣ್ಣು ಮತ್ತು ಬಂಧುಬಳಗ, ಅಪಾರ ಕಲಾಭಿಮಾನಿಗಳÀನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ (ಆ.31) ಸಂಜೆ 3.30 ಗಂಟೆಗೆ ಮದರ್ ಆಫ್ ಗಾಡ್ ಚರ್ಚ್, ಪಾಲಿ, ನಾಯ್ಗಾಂವ್ ಪಶ್ಚಿಮ ಇಲ್ಲಿ ನೆರವೇರಲಿದೆ ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here