Sunday 11th, May 2025
canara news

ಮಾಜಿ ಶಾಸಕ ಜಗನ್ನಾಥ ಎ.ಶೆಟ್ಟಿ ನಿಧನ

Published On : 14 Sep 2019   |  Reported By : Rons Bantwal


ಮುಂಬಯಿ, ಸೆ.13: ಮಹಾರಾಷ್ಟ್ರ ಸರಕಾರದ ಮಹಾನಗರ ಮುಂಬಯಿ ಸಯಾನ್-ಕೋಲಿವಾಡ ಕ್ಷೇತ್ರದ ಮಾಜಿ ಶಾಸಕ ಜಗನ್ನಾಥ ಎ.ಶೆಟ್ಟಿ (75.) ಇಂದಿಲ್ಲಿ ಶುಕ್ರವಾರ ಬೆಳಿಗ್ಗೆ ಬಾಂದ್ರ ಅಲ್ಲಿನ ಲೀಲಾವತಿ ಆಸ್ಪತ್ರೆಯಲ್ಲಿ ನಿಧನರಾದರು.

ಉಡುಪಿ ಜಿಲ್ಲೆಯ ಕಾಪು ಶಿರ್ವಾ ಅಲ್ಲಿನ ಮಾಣಿಬೆಟ್ಟು ಶಿವಪ್ರಸಾದ್ ನಿವಾಸದ ಅಚ್ಚಣ್ಣ ಶೆಟ್ಟಿ ಮತ್ತು ಶ್ರೀಮತಿ ಕಲ್ಯಾಣಿ ಎ.ಶೆಟ್ಟಿ ಸುಪುತ್ರ ಆಗಿದ್ದ ಜಗನ್ನಾಥ ಶೆಟ್ಟಿ ಬಾಲಕಾರ್ಮಿಕನಾಗಿ ಬೆಳೆದು ಘಾಟ್ಕೋಪರ್ ಪೂರ್ವದÀಲ್ಲಿ ಹೊಟೇಲು ಹೊಂದಿ ಮಾಲಕರಾಗಿ ಬೆಳೆದವರು. ಕರ್ನಾಟಕ ಫ್ರೀ ನೈಟ್ ಹೈಸ್ಕೂಲು ಹಳೆ ವಿದ್ಯಾಥಿರ್üಯಾಗಿ ರಾತ್ರಿ ಶಾಲೆ ಓದಿದ ಇವರು 2004ರ ವಿಧಾನ ಸಭೆಗೆ ಮಾಟುಂಗಾ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೇಸ್ (ಐ) ಪಕ್ಷದಿಂದ ಶಾಸಕರಾಗಿದ್ದರು. ಬಳಿಕ 2009ರಲ್ಲಿ ಕ್ಷೇತ್ರ ವಿಗಂಡನೆಯಿಂದ ಅಸ್ತಿತ್ವಕ್ಕೆ ಬಂದ ಸಯಾನ್-ಕೋಲಿವಾಡ ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಬಾರಿ ಮಹಾರಾಷ್ಟ್ರ ಸರಕಾರದಲ್ಲಿ ಎಂಎಲ್‍ಎ ಆಗಿಯಾಗಿದ್ದು, 2014ರಲ್ಲೂ ತೃತೀಯ ಬಾರಿಯೂ ಸ್ಪÀರ್ಧಿಸಿದ್ದರು.

ಮಾಜಿ ಕೇಂದ್ರ ಸಚಿವ (ಸ್ವರ್ಗೀಯರಾದ) ಗುರುದಾಸ್ ಕಾಮತ್ ಅವರ ನಿಕಟವರ್ತಿಯಾಗಿ, ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ತನ್ನ ಅವಿರತ ಶ್ರಮದಿಂದಲೇ ಗುರುತಿಸಿ ಕೊಂಡ ಜಗನ್ನಾಥ್ ಶೆಟ್ಟಿ ಮುಂಬಯಿಯಲ್ಲಿನ ಸಮಾಜ ಸೇವಕ, ಪ್ರಭಾವಿ ನೇತಾರರಾಗಿ ಜನಾನುರಾಗಿದ್ದರು.

ಮೃತರು ಪತ್ನಿ, ಎರಡು ಗಂಡು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಜಗನ್ನಾಥ ಶೆಟ್ಟಿ ನಿಧನಕ್ಕೆ ಮಹಾನಗರದಲ್ಲಿನ ಹಲವು ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಗಣ್ಯರನೇಕರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು (ಸೆ.13) ಶುಕ್ರವಾರ ಸಂಜೆ ಸಯಾನ್ ರುಧ್ರಭೂಮಿಯಲ್ಲಿ ನೆರವೇರಿಸಲ್ಪಟ್ಟಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here