Sunday 6th, July 2025
canara news

ಅಂಧೇರಿ ಪೂರ್ವದ ಸೆಕ್ರೇಡ್ ಹಾರ್ಟ್ ಇಗರ್ಜಿಯಲ್ಲಿನ ಕೊಂಕಣಿ ಕಮಿಟಿ ಸಂಸ್ಥೆ

Published On : 18 Sep 2019   |  Reported By : Rons Bantwal


ಸಾಂಸ್ಕೃತಿಕ ವೈಭವದೊಂದಿಗೆ ಸಂಭ್ರಮಿಸಿದ `ಮೊಂತಿ ಫೆಸ್ತ್-2019'
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಸೆ.16: ಉಪನಗರ ಅಂಧೇರಿ ಪೂರ್ವದ ಮಹಾಕಾಳಿ ಕೇವ್ಸ್ ರೋಡ್ ಇಲ್ಲಿನ ಸೆಕ್ರೇಡ್ ಹಾರ್ಟ್ ಇಗರ್ಜಿಯಲ್ಲಿನ ಕೊಂಕಣಿ ಕಮಿಟಿ ಸಂಸ್ಥೆಯು ತೃತೀಯ ವಾರ್ಷಿಕ ಹಬ್ಬವನ್ನು ಮಾತೆ ಮರಿಯಮ್ಮ ಅವರ ಜನ್ಮೋತ್ಸವದ `ಮೊಂತಿ ಫೆಸ್ತ್-ತೆನೆ ಹಬ್ಬ'ವನ್ನು ಸಾಂಸ್ಕೃತಿಕ ವೈಭವದೊಂದಿಗೆ ವಿಜೃಭಣೆಯಿಂದ ಆಚರಿಸಿತು.

 

ಕಳೆದ ಭಾನುವಾರ ಬೆಳಿಗ್ಗೆ ಇಗರ್ಜಿ ಆವರಣದಲ್ಲಿನ ಪುಷ್ಫಾಲಂಕೃತ ಗವಿಯ ಸಮ್ಮುಖದಲ್ಲಿ ಸಂಪ್ರದಾಯ -ದಂತೆ ನೆರೆದ ಮಾತೆ ಭಕ್ತರು ಧಾರ್ಮಿಕ ವಿಧಿಗಳಂತೆ ಮರಿಯಮ್ಮರ ಅಲಂಕರಿತ ಪ್ರತಿಮೆಗೆ ಆರಾಧಿಸಿ, ಪೂಜೆ ಸಲ್ಲಿಸಿದರು. ಜನ್ಮೋತ್ಸವ ಸಂಭ್ರಮದಲ್ಲಿ ಮುಖ್ಯ ಅತಿಥಿüಯಾಗಿ ಉಪಸ್ಥಿತ ಕಾರ್ಮೆಲಿತ್ ಧರ್ಮಗುರು ರೆ| ಫಾ| ಪೀಟರ್ ಪಿರೇರಾ (ಒಸಿಡಿ) ಬತ್ತದ ತೆನೆಗಳನ್ನು ಆಶೀರ್ವಾದಿಸಿ ಅನುಗ್ರಹಿಸಿದರು. ಬಳಿಕ ಪುಟಾಣಿಗಳು ಮಾತೆಯ ಪ್ರತಿಮೆಗೆ ಪುಷ್ಫವೃಷ್ಠಿಗೈದು ಗೌರವಿಸಿದರು.

ಬಳಿಕ ಸೆಕ್ರೇಡ್ ಹಾರ್ಟ್ ಇಗರ್ಜಿಯ ಪ್ರಧಾನ ಧರ್ಮಗುರು ರೆ| ಫಾ| ಇನ್ನೊಸ್ಸೆಂಟ್ ಫೆರ್ನಾಂಡಿಸ್ ಮಾರ್ಗದರ್ಶನದಂತೆ ಫಾ| ಪೀಟರ್ ಅಭಿವಂದನಾ ದಿವ್ಯಪೂಜೆ ನೇರವೇರಿಸಿ ಪ್ರಸಂಗವನ್ನಿತ್ತು ಅನುಗ್ರಹಿಸಿ ದರು. ಅತಿಥಿüಯಾಗಿ ರೆ| ಫಾ| ಜೊಸ್ಸೀ ಫೆರ್ನಾಂಡಿಸ್ (ಎಸ್‍ವಿಡಿ), ರೆ| ಫಾ| ಸುನೀಲ್ ಡಿ.ಸಿರಿಲ್ ಸಂಭ್ರಮಿಕ ಬಲಿಪೂಜೆಯಲ್ಲಿ ಸಹಭಾಗಿತ್ವ ವಹಿಸಿ ಪ್ರಾರ್ಥನೆ ನಡೆಸಿದರು. ಕೊನೆಯಲ್ಲಿ ಸಂಪ್ರಾದಾಯಿಕ ಅಡುಗೆಯಂತೆ ತಯಾರಿಸಿದ ಶುದ್ಧ ಶಾಖಾಹಾರಿ ಭೋಜನ ಆಶೀರ್ವಾಸಲಾಯಿತು.

ಸೆಕ್ರೇಡ್ ಹಾರ್ಟ್ ಸಭಾಗೃಹದಲ್ಲಿ ನಡೆಸಲಾಗಿದ್ದ ಧಾರ್ಮಿಕ ಸಮಾರಂಭದಲ್ಲಿ ಫಾ| ಇನ್ನೊಸ್ಸೆಂಟ್ ಫೆರ್ನಾಂಡಿಸ್ ಹಬ್ಬದ ಸಂದೇಶವನ್ನಿತ್ತು ಆಶೀರ್ವಾದಿಸಿದ ತೆನೆಗಳನ್ನು ನೆರೆದ ಭಕ್ತರಿಗೆ ವಿತರಿಸಿದರು ಹಾಗೂ ದಾನಿಗಳಿಗೆ ಪುಷ್ಫಗುಪ್ಚವನ್ನೀಡಿ ಗೌರವಿಸಿದರು. ಅಸೋಸಿಯೇಶನ್‍ನ ಕಾರ್ಯದರ್ಶಿ ಫ್ರಾನ್ಸಿಸ್ ಕಾಸ್ತೆಲಿನೋ ಸ್ವಾಗತಿಸಿದರು. ಅಧ್ಯಕ್ಷೆ ಟ್ರೆಸ್ಸಿ ರಿಚಾರ್ಡ್ ಪೆರಿಸ್ ಪ್ರಸ್ತಾವನೆಗೈದರು. ವಿನ್ಸೆಂಟ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಆನೆಲ್ಲಾ ಕ್ವಾಡ್ರಸ್ ದಾನಿಗಳ ಯಾದಿ ವಾಚಿಸಿ ವಂದಿಸಿದರು.

ಕೊಂಕಣಿ ಕಮಿಟಿ ಸಂಸ್ಥೆಯ ಆಲ್ವಿನ್ ಡಿಸೋಜಾ ಮತ್ತು ಬಳಗ ಹಾಸ್ಯ ಪ್ರಹಸನ ಪ್ರಸ್ತುತ ಪಡಿಸಿದರು ಹಾಗೂ ಮಂಗಳೂರು ಸಂಸ್ಕೃತಿಯನ್ನು ಅನಾವರಣ ಗೊಳಿಸಿದರು. ಸದಸ್ಯರ ಮಕ್ಕಳು ಸ್ವಾಗತನೃತ್ಯದ ಮೂಲಕ ಸುಖಾಗಮನ ಬಯಸಿದರು. ಮಹಿಳೆರು ಮತ್ತು ಪುಟಾಣಿಗಳು ಸಂಗೀತ ಮತ್ತು ವಿವಿಧ ನೃತ್ಯಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here