Saturday 10th, May 2025
canara news

ಮಂಗಳೂರಿನಲ್ಲಿ ಹಿಂದಿ ದಿವಸ್, ಹಿಂದಿ ಭಾಷಾ ಕಾರ್ಯಾಗಾರ ಸಂಪನ್ನ

Published On : 19 Sep 2019   |  Reported By : Rayee Rajkumar


ಮಂಗಳೂರು: ಸ್ಥಳೀಯ ಜಿಲ್ಲಾ ಶಿಕ್ಷಕ ಶಿಕ್ಷಣ ಸಂಸ್ಥೆ ಕೊಡಿಯಾಲ್ ಬೈಲ್ ನಲ್ಲಿ ದ.ಕ. ಜಿಲ್ಲಾ ಹಿಂದಿ ಶಿಕ್ಷಕ ಸಂಘದ ಆಶ್ರಯದಲ್ಲಿ ಒಂದು ದಿನದ ಹಿಂದಿ ದಿವಸ್ ಮತ್ತು ಹಿಂದಿ ಭಾಷಾ ಕಾರ್ಯಕ್ರಮ ಸಪ್ತಂಬರ್ 16,2019 ರಂದು ಸಂ¥ನÀ್ನಗೊಂಡಿತು. ದ.ಕ.ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರ ಕಚೇರಿ ಹಾಗೂ ಮೈಸೂರಿನ ಕೇಂದ್ರೀಯ ಹಿಂದಿ ಸಂಸ್ಥಾನದ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಡಯಟ್ ಪ್ರಾಂಶುಪಾಲ ವಾಲ್ಟರ್ ಡಿಮೆಲ್ಲೋ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿ ಹಿಂದಿ ಸಂಸ್ಥಾನದ ಯೋಗೇಂದ್ರನಾಥ ಮಿಶ್ರಾ ರವರು ಹಲವಾರು ಉದಾಹರಣೆಗಳ ಮೂಲಕ ಹಿಂದಿ ಭಾಷಾ ಸೌಂದರ್ಯವನ್ನು ತಿಳಿಸಿಕೊಟ್ಟು ಎಲ್ಲರನ್ನೂ ಜೋಡಿಸುವ ಹಿಂದಿ ಭಾಷೆ ಬೆಳೆಯಲಿ ಎಂದು ಆಶಿಸಿದರು. ಹಿಂದಿ ಭಾಷಾ ಪಠ್ಯದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ನೂರು ಶೇಕಡಾ ಫಲಿತಾಂಶ ಪಡೆದ ಶಾಲೆಗಳ ಹಿಂದಿ ಶಿಕ್ಷಕರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

2019 ರ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಹಿಂದಿ ಶಿಕ್ಷಕ ಮಂಗಳೂರಿನ ಮಲ್ಲೇಶ ನಾಯಕ್ ರವರನ್ನು ಮತ್ತು ನಿವೃತ್ತ ಶಿಕ್ಷಕಿ ಶ್ರೀಮತಿ ಗೌರಿ ಹಾಗೂ ಪುತ್ತೂರಿನ ದುಗ್ಗಪ್ಪರವರನ್ನು ಫಲ ಪುಷ್ಪ ಶಾಲು ಸ್ಮರಣಿಕೆ ನೀಡುವ ಮೂಲಕ ಸಂಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಿ.ಡಿ.ಪಿ.ಐ. ಕಚೇರಿಯ ಭಾಷಾ ಪರಿವೀಕ್ಷಕ ಶಮಂತ್, ಹೈದರಾಬಾದ್ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಗಂಗಾಧರ್,, ಡಾ| ಶ್ಯಾಮ್ ಕಿಶೋರ್ ಪಾಂಡೆ, ಸಂಘದ ಖಜಾಂಚಿ ಸುಳ್ಯ ರಮೇಶ್,ಹಾಜರಿದ್ದರು. ಜಿಲ್ಲಾ ಹಿಂದಿ ಶಿಕ್ಷಕ ಸಂಘದ ಅಧ್ಯಕ್ಷ ರಾಯೀ ರಾಜ ಕುಮಾರ್ ಮೂಡುಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳದ ಶಿವಕುಮಾರ್ ಮುಸುಂಡಿ ಸ್ವಾಗತಿಸಿದರು, ಶ್ರೀನಿವಾಸ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು, ಬಂಟ್ವಾಳದ ಮೋಹನ ಬಾಬು ವಂದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here