Saturday 10th, May 2025
canara news

ಬಿಲ್ಲವರ ಎಸೋಸಿಯೇಶನ್, ಮುಂಬಯಿ ಇದರ ಲೋನಾವಾಲ ಸ್ಥಳೀಯ ಕಚೇರಿಯಲ್ಲಿ 165ನೇ ನಾರಾಯಣ ಗುರುಜಯಂತಿ ಕಾರ್ಯಕ್ರಮ

Published On : 20 Sep 2019   |  Reported By : Rons Bantwal


ಮುಂಬಯಿ, ಸೆ.18: ಬಿಲ್ಲವರ ಎಸೋಸಿಯೇಶನ್, ಮುಂಬಯಿ ಇದರ ಲೋನಾವಾಲ ಸ್ಥಳೀಯ ಕಚೇರಿಯ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ 165ನೇ ಗುರುಜಯಂತ್ಯೋತ್ಸವ ಸೆಪ್ಟೆಂಬರ್ 15ರಂದು ಸುಮಿತ್ರ ಪ್ಯಾಲೇಸ್ ಭಂಗಾರ್‍ವಾಡಿ ಲೋನಾವಾಲ ಇಲ್ಲಿ ವಿಜ್ರಂಬಣೆಯಿಂದ ಆಚರಿಸಲಾಯಿತು.

ಲೋನಾವಾಲ ಮುನಿಸಿಪಾಲ್ ಕಾಪೆರ್Çೀರೇಶನ್‍ನ ಉಪಾಧ್ಯಕ್ಷರಾದ ಶ್ರೀಧರ್ ಪೂಜಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲೋನಾವಾಲ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರಾದ ಶ್ರೀ ಗಣೇಶ್ ಎ. ಪೂಜಾರಿಯವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಶೇಖರ್ ಎಮ್. ಪೂಜಾರಿ, ಶ್ರೀ ಶೇಖರ್ ಬಿ. ಪೂಜಾರಿ, ಶ್ರೀ ಸುರೇಶ್ ಡಿ. ಪೂಜಾರಿಯವರ ನೇತೃತ್ವದಲ್ಲಿ ಜರಗಿತು. ನಂತರ ಗುರುದೇವರ ಸನ್ನಿಧಾನದಲ್ಲಿ ರಾಧ ಕೃಷ್ಣ ಭಜನಾ ಮಂಡಳಿ, ಡೊಂಬಿವಾಲಿಯವರ ಭಜನಾ ಕಾರ್ಯಕ್ರಮ ತದನಂತರ ಗುರುಪೂಜೆ ಮಹಾಮಂಗಳಾರತಿ ಅನ್ನಪ್ರಸಾದ ನಡೆಯಿತು.

ಈ ಸಂದರ್ಭದಲ್ಲಿ ರಾಜಕೀಯ ಗಣ್ಯರಾದ ಲೋನಾವಾಲ ಮುನಿಸಿಪಾಲ್ ಕಾಪೆರ್Çೀರೇಶನ್‍ನ ಅಧ್ಯಕ್ಷೆ ಶ್ರೀಮತಿ ಸುರೇಖಾ ಜಾಧವ್, ಬೃಂದಾ ಗನಂತ್ರ, ಜಯಶ್ರೀ ಅಯ್ಯರ್, ನಾರಾಯಣ ಗುರು ಸೇವಾ ಸಂಘ ಪಿಂಪ್ರಿಯ ಅಧ್ಯಕ್ಷರಾದ ಶರತ್ ಕೋಟ್ಯಾನ್, ಕಾರ್ಯದರ್ಶಿಯಾದ ಪ್ರವೀಣ್ ಅಂಚನ್, ಮಹಿಳಾ ಮಂಡಲದ ಅಧ್ಯಕ್ಷರಾದ ಗುಣ ಪೂಜಾರಿ, ರಂಗ ನಾಯಕ್, ಸುನಿಲ್ ತವಾರೆ, ಹೋಟೆಲ್ ರಂಗೋಲಿಯ ಮಾಲಕರಾದ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಸಮಿತಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಸಹಕರಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here