Friday 29th, May 2020
canara news

ಸಿಪ್ರಿಯನ್ ಅಲ್ಬುಕರ್ಕ್ ಸಂಪಿಗೆ ನಿಧನ

Published On : 20 Sep 2019   |  Reported By : Rons Bantwal


ಮುಂಬಯಿ, ಸೆ.20: ಮಹಾನಗರ ಮುಂಬಯಿಯಿಂದ ಪ್ರಕಾಶಿತ ಕೊಂಕಣಿ ಸಾಪ್ತಾಹಿಕ `ದಿವೊ' ಪತ್ರಿಕಾ ಸಮೂಹ ಸಂಸ್ಥೆ `ದಿವೊ ಸಾಹಿತ್ಯ ಪುರಸ್ಕಾರ 2005' ಪ್ರಶಸ್ತಿ ಪುರಸ್ಕೃತÀ ಸಿಂಪ್ರಿ ಸಂಪಿಗೆ ನಾಮಾಂಕಿತ ಸಿಪ್ರಿಯನ್ ಅಲ್ಬುಕರ್ಕ್ (71.) ಅಲ್ಪಕಾಲದ ಅನಾರೋಗ್ಯದಿಂದ ಕಳೆದ ಗುರುವಾರ ಸಂಜೆ ಮಲಾಡ್ ಪಶ್ಚಿಮದ ಓರ್ಲೆಮ್ ಅಲ್ಲಿನ ಸ್ವನಿವಾಸದಲ್ಲಿ ನಿಧನರಾದರು.

ಅನೇಕ ವರ್ಷಗಳಲ್ಲಿ ಕುವೇಯ್ಟ್‍ನಲ್ಲಿದ್ದು ಮಂಗಳೂರು ಸ್ಟೋರ್ ನಡೆಸುತ್ತಾ ಕನ್ನಡ, ಕೊಂಕಣಿ, ತುಳು ಪ್ರತಿಕೆಗಳು, ಸಿಡಿ, ಕ್ಯಾಸೆಟ್ ಮಾರಾಟಗೈದು ಪ್ರಸಿದ್ಧರಾಗಿದ್ದರು. ಬಳಿಕ ಮುಂಬಯಿ ಸೇರಿದ್ದ ಇವರು ಓರ್ವ ಲೇಖಕ, ಕವಿಯಾಗಿ ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್, ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಸೇರಿದಂತೆ ಹತ್ತಾರು ಸಂಘ, ಸಂಸ್ಥೆಗಳಲ್ಲಿ ಸಕ್ರೀಯಯಾಗಿದ್ದರು. ಮುಂಬಯಿನಲ್ಲಿ ಕನ್ನಡ, ಕೊಂಕಣಿ ಪ್ರತಿಕೆಗಳ ಜಾಹೀರಾತುಗಳನ್ನು ಸಂಗ್ರಹಿಸುವುದರ ಜೊತೆಗೆ ಪ್ರಸಾರಣದ ಲ್ಲೂ ತೊಡಗಿಸಿ ಕೊಂಡಿದ್ದರು.

ದಕ್ಷಿಣ ಕನ್ನಡಜಿಲ್ಲೆಯ ಮೂಡಬಿದ್ರೆ ಸಂಪಿಗೆ ಮೂಲತಃ ಮೃತ ಸಿಪ್ರಿಯನ್ ಪತ್ನಿ, ಎರಡು ಗಂಡು, ಎರಡು ಹೆಣ್ಣು ಸೇರಿದಂತೆ ಬಂಧು-ಬಳಗ ಅಗಲಿದ್ದಾರೆ.
More News

ಶ್ರೀರಾಮ ಮಂದಿರ ವಡಲಾ ; ವಾರ್ಷಿಕ ಸಾರ್ವಜನಿಕ ಗಣೇಶೋತ್ಸವ ಮುಂದೂಡುವಿಕೆ
ಶ್ರೀರಾಮ ಮಂದಿರ ವಡಲಾ ; ವಾರ್ಷಿಕ ಸಾರ್ವಜನಿಕ ಗಣೇಶೋತ್ಸವ ಮುಂದೂಡುವಿಕೆ
ಧ್ವನಿ ಪ್ರತಿಷ್ಠಾನದ ಸಮಗ್ರ ಹೊತ್ತಿಗೆಗೆ ಲೇಖಕರಿಂದ ಬರಹಗಳಿಗೆ ಆಹ್ವಾನ
ಧ್ವನಿ ಪ್ರತಿಷ್ಠಾನದ ಸಮಗ್ರ ಹೊತ್ತಿಗೆಗೆ ಲೇಖಕರಿಂದ ಬರಹಗಳಿಗೆ ಆಹ್ವಾನ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಬಡ ಕಲಾವಿದರಿಗೆ ಸಹಾಯಧನ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಬಡ ಕಲಾವಿದರಿಗೆ ಸಹಾಯಧನ

Comment Here