Saturday 10th, May 2025
canara news

ಮಹಾರಾಷ್ಟ್ರ ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್ ಫೆಡರೇಶನ್‍ನ ವಾರ್ಷಿಕ ಬ್ಯಾಂಕ್ ಪುರಸ್ಕಾರ ಪ್ರದಾನ

Published On : 27 Sep 2019   |  Reported By : Rons Bantwal


`ಸರ್ವೋತ್ಕೃಷ್ಟ ಸಾಧಕ ಬ್ಯಾಂಕ್'ಪುರಸ್ಕಾರ ಮುಡಿಗೇರಿಸಿದ ಭಾರತ್ ಬ್ಯಾಂಕ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ.ಸೆ.24: ದಿ.ಮಹಾರಾಷ್ಟ್ರ ಅರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್ ಕೊಡಮಾಡುವ ಸಹಕಾರಿ ಕ್ಷೇತ್ರದ ಮಹಾರಾಷ್ಟ್ರ ರಾಜ್ಯದ `ಸರ್ವೋತ್ಕೃಷ್ಟ ಬ್ಯಾಂಕ್' ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದ್ದು, ಬೃಹನ್ಮುಂಬಯಲ್ಲಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಸಂಸ್ಥೆಗೆ `ಸರ್ವೋತ್ಕೃಷ್ಟ ಸಾಧಕ ಬ್ಯಾಂಕ್ ಪುರಸ್ಕಾರ-2019' ಪ್ರದಾನಿಸಿ ಗೌರವಿಸಿತು.

ಬ್ಯಾಂಕ್ಸ್ ಫೆಡರೇಶನ್ ಲಿಮಿಟೆಡ್‍ನ 40ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕ ಪಾರಿತೋಷಕ ವಿತರಣಾ ಸಮಾರಂಭ ಇಂದಿಲ್ಲಿ ಮಂಗಳವಾರ ವಡಲಾ ಇಲ್ಲಿನ ಭಾರತೀಯ ಕ್ರೀಡಾ ಮಂದಿರ ಸಂಕುಲದ ಸಭಾಗೃಹದಲ್ಲಿ ನಡೆಸಿದ್ದು, ಮಹಾರಾಷ್ಟ್ರ ರಾಜ್ಯ ಸಹಕಾರಿ ಆಯುಕ್ತ ಡಾ| ಜಗದೀಶ್ ಪಾಟೀಲ್ ಮುಖ್ಯ ಅತಿಥಿüಯಾಗಿದ್ದು, ಭಾರತ್ ಬ್ಯಾಂಕ್‍ನ ಆಡಳಿತ ನಿರ್ದೇಶಕ-ಸಿಇಒ ಸಿ.ಆರ್ ಮೂಲ್ಕಿ, ಬ್ಯಾಂಕ್‍ನ (ನಿಯೋಜಿತ) ಆಡಳಿತ ನಿರ್ದೇಶಕ ವಿದ್ಯಾನಂದ ಎಸ್.ಕರ್ಕೇರಾ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ.ಸಾಲ್ಯಾನ್ ಅವರಿಗೆ ಪುರಸ್ಕಾರ ಫಲಕ ಪ್ರದಾನಿಸಿ ಶುಭಾರೈಸಿದರು.

ಫೆಡರೇಶನ್‍ನ ಕಾರ್ಯಾಧ್ಯಕ್ಷ ವಿದ್ಯಾಧರ್ ಅನಸ್ಕರ್, ಉಪ ಕಾರ್ಯಾಧ್ಯಕ್ಷ ರಮಾಕಾಂತ್ ಖೇತನ್ ಹಾಗೂ ಸಂಚಾಕಲರು ವೇದಿಕೆಯಲ್ಲಿದ್ದು ಭಾರತ್ ಬ್ಯಾಂಕ್‍ನ ಆಥಿರ್sಕ ಸೇವೆÀಯನ್ನು ಪ್ರಶಂಶಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್ಸ್ ಫೆಡರೇಶನ್‍ನ ಸಂಚಾಲಕರಾದ ಆನಂದ್‍ರಾವ್ ಅಡ್ಸೂಲ್ (ಸಂಸದ), ಸತೀಶ್ ಗುಪ್ತಾ, ಸಂದೀಪ್ ಘಂದಟ್, ಜ್ಞಾನೇಶ್ವರ್ ವಾಂಗಡೆ, ಅಮೃತ್ ಜೋಶಿ, ದಾಮೋದರ್ ಮಾಜ್‍ಗಾಂವ್ಕರ್, ಸುನೀಲ್ ದೆವಡಾ, ಜಗದೀಶ್ ತುಳಜಾಪೂರ್ಕÀರ್, ಕೈಲಾಶ್ಚಂದ್ರ ಅಗ್ರವಾಲ್, ಜಯವಂತ್ ಜಲಗಾಂವ್ಕರ್, ಅಶೋಕ್ ಶೇಳ್ಕೆ, ಪ್ರಕಾಶ್ ಗಾವ್ಳಿ, ಭಾಸ್ಕರ್ ರಾವ್ ಕೊಠಾವದೆ, ಶೋಭಾ ಸಾವಂತ್, ಡಾ| ಶಶಿ ಅಯಿರೆ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಫೆಡರೇಶನ್‍ನ ಸಿಇಒ ಸಾಯಿಲೀ ಭೋಯಿರ್ ಕಾರ್ಯಕ್ರಮ ನಿರೂಪಿಸಿದರು. ರಮಾಕಾಂತ್ ಖೇತನ್ ಕೃತಜ್ಞತೆ ಸಮರ್ಪಿಸಿದರು.

ಈ ಗೌರವಕ್ಕೆ ಭಾರತ್ ಬ್ಯಾಂಕ್ ಭಾಜನವಾಗಿರುವುದು ಅಭಿನಂದನೀಯ. ಇದು ಗ್ರಾಹಕರು ಮತ್ತು ಷೇರುದಾರರು, ನಿರ್ದೇಶಕ ಮಂಡಳಿ ಹಾಗೂ ನೌಕರ ವೃಂದದ ಅವಿರತ ಶ್ರಮಕ್ಕೆ ಸಂದ ಗೌರವ ಎಂದು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ತಿಳಿಸಿದ್ದಾರೆ. ಬ್ಯಾಂಕ್‍ನ ಉಪಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್ ಹಾಗೂ ನಿರ್ದೇಶಕರು ಪ್ರಶಸ್ತಿಗಾಗಿ ಹರ್ಷ ವ್ಯಕ್ತಪಡಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here