Sunday 6th, July 2025
canara news

ವೇಣುಗೋಪಾಲ್ ಎಲ್.ಶೆಟ್ಟಿ ಥಾಣೆ ಬಂಟ್ಸ್ ಅಸೋಸಿಯೇಶನ್‍ನ ನೂತನ ಅಧ್ಯಕ್ಷ

Published On : 28 Sep 2019   |  Reported By : Rons Bantwal


ಮುಂಬಯಿ,ಸೆ.25: ಥಾಣೆ ಬಂಟ್ಸ್ ಅಸೋಸಿಯೇಶನ್ ಇದರ 15ನೇ ವಾರ್ಷಿಕ ಮಹಾಸಭೆಯು ಕಎದ ಶನಿವಾರ ಸಂಜೆ ಉಪನಗರ ಥಾಣೆ ಪಶ್ಚಿಮದ ಮುಲುಂಡ್ ಅಲ್ಲಿನ ಹೊಟೇಲ್ ವುಡ್‍ಲ್ಯಾಂಡ್ ರಿಟ್ರೀಟ್‍ನ ಸಭಾಗೃಹದಲ್ಲಿ ಥಾಣೆ ಬಂಟ್ಸ್‍ನ ಅಧ್ಯಕ್ಷ ಕುಶಲ್ ಸಿ.ಭಂಡಾರಿ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ನೂತನ ಪದಾಧಿಕಾರಿ ಗಳ ಆಯ್ಕೆ ಪ್ರಕ್ರಿಯೆ ನಡೆಸಲ್ಪಟ್ಟಿದ್ದು, ಥಾಣೆ ಬಂಟ್ಸ್ ಅಸೋಸಿಯೇಶನ್ ಇದರ 2019-21ನೇ ಸಾಲಿನ ನೂತನ ಅಧ್ಯಕ್ಷರಾಗಿ ವೇಣುಗೋಪಾಲ್ ಎಲ್.ಶೆಟ್ಟಿ ಅವರನ್ನು ಸಭೆಯು ಅವಿರೋಧವಾಗಿ ಆಯ್ಕೆಗೊಳಿಯಿತು.

ಈ ತನಕ ವೇಣುಗೋಪಾಲ್ ಶೆಟ್ಟಿ ಥಾಣೆ ಬಂಟ್ಸ್‍ನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಥಾಣೆ ಬಂಟ್ಸ್‍ನ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ ಆಗಿ ಕುಶಲಾ ನವೀನ್ ಶೆಟ್ಟಿ ಹಾಗೂ ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷೆ ಆಗಿ ದೃಶ್ಯ ಎಸ್.ಶೆಟ್ಟಿ ಆಯ್ಕೆಗೊಂಡರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here