Saturday 10th, May 2025
canara news

ಅ.12: ಸ್ಪರ್ಶಾದಲ್ಲಿ `ನಮ್ಮ ಮಕ್ಕಳು ನಾಳೆಯ ಸಂಪತ್ತು' ಘೋಷವಾಕ್ಯದಲ್ಲಿ ಎಸ್‍ಬಿಎಸ್ ಜಿಲ್ಲಾ ಪ್ರತಿನಿಧಿ ಸಮಾವೇಶ-ಲಾಂಛನ ಬಿಡುಗಡೆ

Published On : 02 Oct 2019   |  Reported By : Rons Bantwal


ಮುಂಬಯಿ (ಮಂಗಳೂರು), ಸೆ.28: ಸುನ್ನಿ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲೆ (ಪಶ್ಚಿಮ) ಇದರ ಸುನ್ನೀ ಬಾಲ ಸಂಘ SಃS ಇದರ ಪ್ರತಿನಿಧಿ ಸಮಾವೇಶ ಇದೇ ಅ.12ರ ಶನಿವಾರ ಬಿ.ಸಿ.ರೋಡ್ ಸ್ಪರ್ಶಾ ಸಭಾಂಗಣದಲ್ಲಿ ಬೆಳಿಗ್ಗೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ನಡೆಯಲಿದೆ.

`ನಮ್ಮ ಮಕ್ಕಳು ನಾಳೆಯ ಸಂಪತ್ತು' ಎಂಬ ಘೋಷವಾಕ್ಯದೊಂದಿಗೆ ನಡೆಯುವ ಸಮಾವೇಶದ ಈ ಲಾಂಛನ (ಲೋಗೋ) ವನ್ನು ಪಡೀಲಿನಲ್ಲಿ ನಡೆದ ಸಭೆಯಲ್ಲಿ ಶಿಕ್ಷಕ ಒಕ್ಕೂಟದ ಉಪಾಧ್ಯಕ್ಷ ಒ.ಕೆ ಸಈದ್ ಮುಸ್ಲಿಯಾರ್ ಬಿಡುಗಡೆ ಗೊಳಿಸಿದರು
ಈ ಸಮಾವೇಶದಲ್ಲಿ ಜಿಲ್ಲೆಯ ಪ್ರತಿ ಮದ್ರಸಗಳಿಂದ ನಿಗದಿತ 3 ಮಂದಿ ಭಾಗವಹಿಸಲಿದ್ದು ಸಂಪನ್ಮೂಲ ವ್ಯಕ್ತಿಗಳಿಂದ 2 ತರಗತಿಗಳು ನಡೆಯಲಿದ್ದು ಸಮಾವೇಶ ಜಿಲ್ಲಾಧ್ಯಕ್ಷ ಪಿ.ಎಂ ಮುಹಮ್ಮದ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸುನ್ನೀ ಸಂಘ ಕುಟುಂಬದ ನಾಯಕರು ಗಣ್ಯರು ಭಾಗವಹಿಸಲಿದ್ದಾರೆ.

ಅಪರಾಹ್ನ 2:30 ಬಿ.ಸಿ. ರೋಡಿನಲ್ಲಿ SಃS ವಿದ್ಯಾಥಿರ್üಗಳಿಂದ ಆಕರ್ಷಕ ಬಾಲ ಸಂಚಯನ ಜಾಥಾ ನಡೆಯಲಿದೆ ಎಂದು ಶಿಕ್ಷಕರ ಒಕ್ಕೂಟ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here