Saturday 10th, May 2025
canara news

ಘಾಟ್ಕೋಪರ್ ಪಶ್ಚಿಮದ ಹವ್ಯಕರ ಸಭಾಗೃಹದಲ್ಲಿ ಹವ್ಯಕ ವೆಲ್ಫೇರ್ ಟ್ರಸ್ಟ್ ಆಚರಿಸಿದ ದಸರೋತ್ಸವ ಆಚರಣೆ

Published On : 03 Oct 2019   |  Reported By : Rons Bantwal


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಸೆ.29: ಹವ್ಯಕ ವೆಲ್ಫೇರ್ ಟ್ರಸ್ಟ್ ಮುಂಬಯಿ ನವರಾತ್ರಿ ಉತ್ಸವವನ್ನು ಇಂದಿಲ್ಲಿ ಭಾನುವಾರ ಘಾಟ್ಕೋಪರ್ ಪಶ್ಚಿಮದ ದೀಪ್ತಿ ಸೊಲಿಟೇರ್ ಕಟ್ಟಡದಲ್ಲಿನ ಹವ್ಯಕರ ಸಭಾಗೃಹದಲ್ಲಿ ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ದಸರೋತ್ಸವ ವಿಧಿವತ್ತಾಗಿ ಆಚರಿಸಲಾಯಿತು.

ಶ್ರೀ ಗೋಪಾಲ ಭಟ್ ಗಾಯತ್ರಿ ಇವರ ಪೌರೋಹಿತ್ಯದಲ್ಲಿ ಡಾ| ಎನ್.ಜಿ ಭಟ್ ಹಾಗೂ ಶಾಂತಾ ಭಟ್ ದಂಪತಿ ಮುಂದಾಳುತ್ವದಲ್ಲಿ ದುರ್ಗಾಪೂಜೆಯ ಸಂಕಲ್ಪ ನಡೆಸಲಾಯಿತು. ನಂತರ ಸುಮಂಗಲೆಯರಿಂದ ಲಲಿತಾ ಸಹಸ್ರನಾಮ ಮತ್ತು ಕುಂಕುಮಾರ್ಚನೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡ್ಡವು. ಹವ್ಯಕ ಭಜನಾ ಮಂಡಳಿ ಡೊಂಬಿವಲಿ ಇದರ ಸದಸ್ಯರು ಸುಶ್ರಾವ್ಯವಾಗಿ ಭಜನೆ ನಡೆಸಿಸಿದ್ದು, ನಂತರ ದೇವಿಯ ವಿಧ್ಯುಕ್ತಪೂಜೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆಯೊಂದಿಗೆ ದಸರೋತ್ಸವ ಆಚರಿಸಲಾಯಿತು.

ಅಪರಾಹ್ನ ಸಮಾಜದ ಹಿರಿಯ ನಾಗರಿಕರಾದ ಡಾ| ಎನ್.ಜಿ ಭಟ್, ಎಂ.ಎಸ್ ಭಟ್, ಎನ್.ಎಸ್ ಹೆಗಡೆ ಹಾಗೂ ಆರ್ ಜಿ. ಹೆಗಡೆ ಇವರನ್ನು ಶಾಲು ಹೊದೆಸಿ ಫಲಪುಷ್ಪ ಕಾಣಿಕೆಗಳನಿತ್ತು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಅಂತೆಯೇ ಪ್ರತಿಭಾನ್ವಿತ ವಿದ್ಯಾಥಿರ್üಗಳಿಗೆ ಪ್ರಮಾಣಪತ್ರ ಹಾಗೂ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನಿತ ಹಿರಿಯನಾಗರಿಕರು ಮತ್ತು ಪುರಸ್ಕøತರು ತಮ್ಮ ಮನದಾಳದ ಅನಿಸಿಕೆ, ಅನುಭವಗಳನ್ನು ಹಂಚಿಕೊಂಡು ಆಯೋಜಕರಿಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ಸದಸ್ಯೆಯರಾದ ಶಶಿಕಲಾ ಹೆಗಡೆ, ತನುಜಾ ಹೆಗಡೆ, ಶಾಂತಾ ಭಟ್ ಹಾಗೂ ಪೂರ್ಣಿಮಾ ಅಕ್ಕದಾಸ ಇವರು ಸಮ್ಮಾನಿತ ಹಿರಿಯ ನಾಗರಿಕರನ್ನು ಪರಿಚಯಿಸಿದರು.

ಸಾಂಸ್ಕøತಿ ಕಾರ್ಯಕ್ರಮದ ಅಂಗವಾಗಿ ಶ್ರೀಪಾದ ಭಟ್, ಕಡತೋಕಾ ಹಾಗೂ ಡಾ| ಜಿ.ಕೆ ಹೆಗಡೆ, ಹರಿಕೇರಿ ಕನ್ನಡದಲ್ಲಿ ಗೀತರಾಮಾಯಣ ನಡೆಸಿಕೊಟ್ಟರು. ಶ್ರೀಪಾದ ಭಟ್ ಇವರ ಹಾರ್ಮೋನಿಯಂ ಜೊತೆಗಿನ ಸುಶ್ರಾವ್ಯಕಂಠ ಸಿರಿ ಮರಾಠಿ ಗೀತರಾಮಾಯಣಕ್ಕೆ ಸರಿಸಮಾನವಾಗಿದ್ದು, ಜಿ.ಕೆ ಭಟ್ ಇವರ ತಬಲಾ ವಾದನ ಹಾಗೂ ಕಥಾ ವ್ಯಾಖ್ಯಾನ ಸಭಿಕರನ್ನು ಮೋಡಿಮಾಡಿತ್ತು.

ಟ್ರಸ್ಟ್‍ನ ಅಧ್ಯಕ್ಷ ಶಿವಕುಮಾರ ಭಾಗವತ್, ಉಪಾಧ್ಯಕ್ಷ ಸಂಜಯ ಭಟ್, ಗೌರವ ಕಾರ್ಯದರ್ಶಿ ನಾರಾಯಣ ಅಕ್ಕದಾಸ, ಹವ್ಯಕ ಸಂದೇಶ ಮಾಸಿಕದ ಸಂಪಾದಕಿ ನ್ಯಾ| ಅಮಿತಾ ಎಸ್.ಭಾಗವತ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಸದಸ್ಯರ ಸಹಯೋಗದಿಂದ ನಡೆಸಲ್ಪಟ್ಟ ಕಾರ್ಯಕ್ರಮವನ್ನು ಶಶಿಕಲಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here