Saturday 10th, May 2025
canara news

ದಾದರ್ ಪಶ್ಚಿಮದ ಶಾರದಾಶ್ರಮ ವಿದ್ಯಾಮಂದಿರ್ ಮಂಡಳಿಗೆ ಜೋನ್ ಡಿಸಿಲ್ವಾ-ಮೌರಿಸ್ ಪಿಂಟೋ-ಗಜೇಂದ್ರ ಶೆಟ್ಟಿ ಆಯ್ಕೆ

Published On : 04 Oct 2019   |  Reported By : Rons Bantwal


ಮುಂಬಯಿ, ಅ.01: ಬೃಹನ್ಮುಂಬಯಿಯಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೆಂದೆಣಿಸಿದ ಶಾರದಾಶ್ರಮ ವಿದ್ಯಾಮಂದಿರ್ ಇದರ ಆಡಳಿತ ಮಂಡಳಿಗೆ ತುಳು-ಕನ್ನಡಿಗ ಮಹಾನೀಯರು ಆಯ್ಕೆಯಾಗಿದ್ದಾರೆ.

ಭಾರತ ರಾಷ್ಟ್ರದ ಆಥಿರ್üಕ ರಾಜಧಾನಿ ಮಹಾನಗರ ಮುಂಬಯಿಯಲ್ಲಿ ನಾಲೈದು ಸಹಕಾರಿ ಬ್ಯಾಂಕುಗಳನ್ನು ಸ್ಥಾಪಿಸಿ, ಸಹಕಾರಿ ರಂಗದ ಪಿತಾಮಹ ಎಂದೇ ಖ್ಯಾತಿ ಗಿಟ್ಟಿಸಿಕೊಂಡ ಪ್ರಸಿದ್ಧ ಆಥಿರ್üಕತಜ್ಞ ಜೋನ್ ಡಿಸಿಲ್ವಾ ಕಾರ್ಕಳ (ಸರ್ಕಾರದ ಕೌನ್ಸಿಲ್ ಸದಸ್ಯರಾಗಿ) ಹಾಗೂ ಮೌರಿಸ್ ಪಿಂಟೋ ಬೆಳ್ಮಣ್ ಮತ್ತು ಗಜೇಂದ್ರ ಶೆಟ್ಟಿ ಆಯ್ಕೆ ಆಗಿದ್ದಾರೆ. ಸಂಸ್ಥೆಯ 2019-2022ನೇ ಅವಧಿಗೆ ಇತ್ತೀಚೆಗೆ ನಡೆಸಲ್ಪಟ್ಟ ಚುನಾವಣೆ ನಡೆಸಲ್ಪಟ್ಟಿತ್ತು.

    

John DSilva                                     Maurice Pinto                             Gajendra Shetty

ಈ ವಿದ್ಯಾಲಯದಲ್ಲಿ ಜೋನ್ ಡಿಸಿಲ್ವಾ ಕಳೆದ 10 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಮೌರಿಸ್ ಪಿಂಟೋ ಕಳೆದ ಸುಮಾರು 32 ವರ್ಷಗಳಿಂದ ಈ ಸಂಸ್ಥೆಯಲ್ಲಿ ಸಕ್ರೀಯರಾಗಿದ್ದು, ವಿಶ್ವಸ್ಥ, ಕಾರ್ಯದರ್ಶಿ ಆಗಿರುವರು. ಗಜೇಂದ್ರ ಶೆಟ್ಟಿ ¨ಜ್ಪೆ ಅವರು 5 ವರ್ಷಗಳಿಂದಿದ್ದು ಇದೀಗ ಜೊತೆ ಕಾರ್ಯದರ್ಶಿ ಆಗಿ ಸೇವಾ ನಿರತರಾದ್ದಾರೆ.

ಶಾರದಾಶ್ರಮ ವಿದ್ಯಾಮಂದಿರ್:
1949,ಜೂನ್.9ರಂದು ಸ್ಥಾಪನೆಯಾದ `ಶಾರದಾಶ್ರಮ ವಿದ್ಯಾಮಂದಿರ್' ಕಳೆದ ಏಳು ದಶಕಗಳಿಂದ ಶೈಕ್ಷಣಿಕ ಸೇವೆಯಲ್ಲಿ ಶ್ರಮಿಸುತ್ತಿದೆ, ಮುಖ್ಯವಾಗಿ ಕೆಳಮಧ್ಯಮ ವರ್ಗದ ಮತ್ತು ಸಮಾಜದ ಹಿಂದುಳಿದ ವರ್ಗದ ಮಕ್ಕಳಿಗೆ ಉತ್ತಮ ಸೌಲಭ್ಯಗಳೊಂದಿಗೆ ಶೈಕ್ಷಣಿಕ ನೀಡುತ್ತ್ತಿದೆ. ಮಹಾರಾಷ್ಟ್ರದ ಓರ್ವ ಪ್ರಖ್ಯಾತ ಸಮಾಜ ಸೇವಕ (ಅಂದಿನ ಕೇಂದ್ರ ಸರ್ಕಾರದ) ರೈಲ್ವೆ ಸಚಿವ ದಿವಂಗತ ಆಚಾರ್ಯ ಭೀಸೆ ಮತ್ತು ಕಾನೂನು ಸಚಿವ ನ್ಯಾಯಮೂರ್ತಿ ಎಂ.ಸಿ ಛಗಲಾ ಸಾರಥ್ಯದ ವಿದ್ಯಾಲಯ ಇದಾಗಿದೆ.

ದಾದರ್ ಪಶ್ಚಿಮದ ಭವಾನಿಶಂಕರ್ ರಸ್ತೆಯಲ್ಲಿನ ಶಾರದಾಶ್ರಮ ವಿದ್ಯಾಮಂದಿರ್ ಇಂದು ಟ್ರಸ್ಟ್ ಕೈಗಾರಿಕಾ ತರಬೇತಿ ಕೇಂದ್ರ ತಾಂತ್ರಿಕ ಪ್ರೌಢಶಾಲೆ ಸೇರಿದಂತೆ ಮಾಂಟೆಸ್ಸರಿ ಯಿಂದ ಜೂನಿಯರ್ ಕಾಲೇಜು ಸೇರಿದಂತೆ 13 ಶಿಕ್ಷಣಾಲಯಗಳÀನ್ನು ನಡೆಸುತ್ತಿದೆ. ಬಾಲಕರ ಪ್ರೌಢಶಾಲೆ ಮತ್ತು ಜೂನಿಯರ್ ಕಾಲೇಜ್ ಆಫ್ ಕಾಮರ್ಸ್, ಬಾಲಕಿಯರ ಹೈಸ್ಕೂಲು, ಇಂಗ್ಲಿಷ್ ಮಧ್ಯಮ ಪ್ರೌಢಶಾಲೆ, ತಾಂತ್ರಿಕ ಪ್ರೌಢಶಾಲೆ ಮತ್ತು ಜೆಆರ್ ಕಾಲೇಜ್ ಆಫ್ ಸೈನ್ಸ್ (ವಿಒಸಿ), ಪ್ರಾಥಮಿಕ ಮರಾಠಿ/ ಪ್ರಾಥಮಿಕ ಇಂಗ್ಲಿಷ್ ಶಾಲೆ, ಬಾಲಕ್ಮಂದಿರ್, ಕಿಂಡರ್ ಗಾರ್ಡನ್ ಇಂಗ್ಲಿಷ್, ಕೈಗಾರಿಕಾ ತರಬೇತಿ ಕೇಂದ್ರ ಇತ್ಯಾದಿಗಳನ್ನು ಹೊಂದಿದೆ.

ಪ್ರಸ್ತುತ ಸುಮಾರು 300 ಸುಶಿಕ್ಷಿತ ಅನುಭವಿ ಬೋಧಕ ಮತ್ತು ಇತರ ಸಿಬ್ಬಂದಿಗಳ ಮಾರ್ಗದರ್ಶನದಲ್ಲಿ ಶಾಲೆಗಳು ಮಾನ್ಯತೆ ಪಡೆದಿವೆ. ನಡೆಸುವ ಕೋರ್ಸ್‍ಗಳಿಂದ ಸುಮಾರು 5500 ವಿದ್ಯಾಥಿರ್üಗಳು ಪ್ರಯೋಜನ ಪಡೆಯುತ್ತಾರೆ. ಆಚಾರ್ಯ ಭೀಸೆ ಅವರು ರೂಪಿಸಿದ ನಿಸ್ವಾರ್ಥ ಸೇವೆ ಮತ್ತು ಪ್ರಜಾಪ್ರಭುತ್ವದ ಕಾರ್ಯ ಚಟುವಟಿಕೆಯ ಸಂಪ್ರದಾಯವು ಟ್ರಸ್ಟ್ ನಿರ್ವಹಣೆಯಲ್ಲಿ ಪ್ರತಿಫಲಿಸುತ್ತದೆ, ಇದನ್ನು ಅರ್ಹ ಮತ್ತು ಅನುಭವಿ ವೃತ್ತಿಪರರು ನೋಡಿಕೊಳ್ಳುತ್ತಾರೆ. ಈ ಟ್ರಸ್ಟ್ ವಿದ್ಯಾಥಿರ್üಗಳ ಸರ್ವತೋಮುಖ ಅಭಿವೃದ್ಧಿಗೆ ಬಹುಕಾರ್ಯ ಚಟುವಟಿಕೆಗಳಿಗೆ ಒತ್ತು ನೀಡಿತ್ತಾ ಗ್ರಂಥಾಲಯಗಳು, ಪ್ರಯೋಗಾಲಯಗಳು, ಕಂಪ್ಯೂಟರ್ ಕೇಂದ್ರಗಳು, ಅಂಚಿನ ತಂತ್ರಜ್ಞಾನಗಳು / ವಿಷಯ ಮತ್ತು ಹೌಸ್ ಮ್ಯಾಗಜೀನ್ ಹೊಂದಿದ ಸ್ಮಾರ್ಟ್ ತರಗತಿ ಕೊಠಡಿ ಇತ್ಯಾದಿಗಳನ್ನೂ ಹೊಂದಿದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here