Saturday 6th, June 2020
canara news

ದಹಿಸರ್‍ನ ಜಿಎಸ್‍ಬಿ ಗಾರ್ಡನ್‍ನ ಮಾಧವೇಂದ್ರ ಸಭಾ ಮಂಟಪದಲ್ಲಿ ಜಿಎಸ್‍ಬಿ ಸಭಾ ದಹಿಸರ್-ಬೊರಿವಲಿ ಸಂಸ್ಥೆಯಿಂದ 12ನೇ ದಹಿಸರ್ ದಸರೋತ್ಸವ

Published On : 09 Oct 2019   |  Reported By : Rons Bantwal


ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.03: ಗೌಡ ಸಾರಸ್ವತ್ ಬ್ರಾಹ್ಮಣ್ ಸಭಾ ದಹಿಸರ್ ಬೊರಿವಲಿ ಸಂಸ್ಥೆ ವರ್ಷಂಪ್ರತಿ ಆಚರಿಸುವಂತೆ ಈ ಬಾರಿ ಹನ್ನೊರಡÀನೇ ವಾರ್ಷಿಕ ನವರಾತ್ರಿ ಉತ್ಸವವನ್ನು ಕುಲಗುರು ದೈವಕ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಗಳ ಕೃಪೆ ಮತ್ತು ಶ್ರೀ ಸಂಸ್ಥಾನ ಕಾಶೀ ಮಠ ವಾರಣಾಸಿ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಶುಭಾಶೀರ್ವಾದಗಳೊಂದಿಗೆ ದಹಿಸರ್ ಪೂರ್ವದ ಎನ್.ಎಲ್ ಕಾಂಪ್ಲೆಕ್ಸ್‍ನ ಸಾರಸ್ವತ ಕಲ್ಚರಲ್ ಎಂಡ್ ರಿಕ್ರಿಯೇಷನ್ ಸೆಂಟರ್ ಜಿಎಸ್‍ಬಿ ಗಾರ್ಡನ್‍ನಲ್ಲಿ ಸಂಭ್ರಮಿಸುತ್ತಿದೆ.

ಪಾವಿತ್ರಿತ್ಯ ಮಾಧವೇಂದ್ರ ಸಭಾ ಮಂಟಪÀದಲ್ಲಿ ರಚಿತÀ ಪುಷ್ಪಾಲಂಕೃತ ಭವ್ಯ ಮಂಟಪದಲ್ಲಿ ರಜತ ಪ್ರಭಾವಳಿಯೊಂದಿಗೆ ಸ್ವರ್ಣಮುಕುಟ, ವಜ್ರ, ಚಿನ್ನಾಭರಣ, ಮಾತೆ ಶ್ರೀದೇವಿಯನ್ನು ಶ್ರೀ ಹರಿ ಗುರು ಸೇವಾ ಪ್ರತಿಷ್ಠಾನ ಗೊಳಿಸಿ ಪ್ರಾಣ ಪ್ರತಿಷ್ಠೆ ನೆರವೇರಿಸಿ ವಾರ್ಷಿಕ `ದಹಿಸರ್ ದಸರೋತ್ಸವ' ಸಂಭ್ರಮಕ್ಕೆ ಭಕ್ತಿಪೂರ್ವಕವಾಗಿ ಚಾಲನೆ ನೀಡಲಾಯಿತು.

ಆ ಪ್ರಯುಕ್ತ ಉತ್ಸವದ ಒಂಬತ್ತು ದಿನಗಳಲ್ಲೂ ದೇವಿಗೆ ವಿಭಿನ್ನ ರೂಪಳಿಂದ ಶೃಂಗಾರಿಸಿ ಇದೀಗಲೇ ಸರಸ್ವತಿದೇವಿ,, ಶಾಂತಾದುರ್ಗಾ, ಚಾಮುಂಡೇಶ್ವರಿ, ಅನ್ನಪೂರ್ಣೇಶ್ವರಿ ಮಾತೆಯನ್ನು ಪೂಜಿಸಲಾಗಿದ್ದು ಇಂದಿಲ್ಲಿ ಗುರುವಾರ ಪಂಚಮಿ ದಿನ ಲಕ್ಷಿ ್ಮೀ ನಾರಾಯಣ ಹೃದಯ ಹವನ, ಪಂಚಾಮೃತ ಅಭಿಷೇಕ, ಚಂಡಿಕಾ ಹವನ, ತುಲಾಭಾರ ಸೇವೆ, ಪಂಚನೈವೇದ್ಯ ಮಹಾಭೋಗ, ಮಧ್ಯಾಹ್ನ ಪೂಜೆ, ದುರ್ಗಾ ನಮಸ್ಕಾರ, ದೀಪಾರಾಧನೆ, ಪುಷ್ಪಾಲಂಕಾರ ಸೇವೆ, ರಂಗಪೂಜೆ, ರಾತ್ರಿ ಪೂಜೆ ಇತ್ಯಾದಿಗಳೊಂದಿಗೆ ಸಂಪ್ರದಾಯಿಕವಾಗಿ ಚಂಡಿಕಾ ದೇವಿಯನ್ನು ಆರಾಧಿಸಲಾಯಿತು.

ವೇದಮೂರ್ತಿ ಲಕ್ಷ್ಮೀ ನಾರಾಯಣ ಭಟ್ ತಮ್ಮ ಪೌರೋಹಿತ್ಯದಲ್ಲಿ ವಿವಿಧ ಪೂಜಾಧಿಗಳನ್ನು ನೆರವೇರಿಸಿ ಸದ್ಭಕ್ತರನ್ನು ಹರಸಿದರು. ಪುರೋಹಿತರಾದ ವೇ| ಮೂ| ಉಲ್ಲಾಸ್ ಭಟ್, ವೇ| ಮೂ| ಮಂಜುನಾಥ್ ಪುರಾಣಿಕ್, ವೇ| ಮೂ| ಪ್ರಶಾಂತ್ ಭಟ್, ವೇ| ಮೂ| ವಿನಾಯಕ ಭಟ್, ವೇ| ಮೂ| ಹರೀಶ್ ಭಟ್ ಬೆಳಗಾಂ ಮತ್ತಿತರ ವಿದ್ವಾನರು ಪೂಜಾಧಿಗಳ ಸಹಭಾಗಿತ್ವರಾಗಿದ್ದು, ರಾಜಾರಾವ್ ದಂಪತಿ ಹಾಗೂ ಎಚ್.ಪಿ ಪ್ರಭು ದಂಪತಿಗಳು ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ಜಿಎಸ್‍ಬಿ ಸಭಾದ ಸಂಚಾಲಕರಾದ ಕೆ.ಶ್ರೀನಿವಾಸ ಪ್ರಭು, ಜಿ.ಡಿ ರಾವ್, ಗಣೇಶ್ ವಿ.ಪೈ, ಶೋಭಾ ವಿ.ಕುಲ್ಕರ್ಣಿ, ಸಗುಣಾ ಕೆ.ಕಾಮತ್, ಗೌರವ ಕಾರ್ಯಾಧ್ಯಕ್ಷ ಕೆ.ಆರ್.ಮಲ್ಯ, ಅಧ್ಯಕ್ಷ ಎಂ.ಉದಯ ಪಡಿಯಾರ್, ಉಪಾಧ್ಯಕ್ಷ ಸಾಣೂರು ಮನೋಹರ್ ವಿ.ಕಾಮತ್, ಗೌ| ಪ್ರ| ಕಾರ್ಯದರ್ಶಿ ವಿಷ್ಣು ಆರ್.ಕಾಮತ್, ಗೌ| ಕೋಶಾಧಿಕಾರಿ ಮೋಹನ್ ಎ.ಕಾಮತ್, ಜೊತೆ ಕಾರ್ಯದರ್ಶಿಗಳಾದ ಗುರುಪ್ರಸಾದ್ ವಿ.ಪೈ ಮತ್ತು ಜಯೇಶ್ ಹೆಚ್.ಪ್ರಭು, ಜೊತೆ ಕೋಶಾಧಿಕಾರಿ ಪಿ.ಎಸ್ ಕಾಮತ್ ಹಾಗೂ ಸದಸ್ಯರ ಸೇವೆಯೊಂದಿಗೆ ನಡೆಸಲ್ಪಡುವ ಈ ಉತ್ಸವದಲ್ಲಿ ನಾಡಿನ ನೂರಾರು ಗಣ್ಯರು, ಸೇವಾಕರ್ತರು, ಸಾವಿರಾರು ಭಕ್ತರÀನೇಕರು ಚಿತ್ತೈಸಿ ಗಂಧಪ್ರಸಾದ ಸ್ವೀಕರಿಸಿ ಶ್ರೀ ದೇವಿಯ ಕೃಪೆಗೆ ಶ್ರೀದೇವಿಯ ಕೃಪೆಗೆ ಪಾತ್ರರಾದರು.

ಇಂದು (ಅ.04) ಮಹಾಲಕ್ಷ್ಮೀ, ಬಳಿಕ ದುರ್ಗಾ ಪರಮೇಶ್ವರಿ, ಅ.06ರಂದು ಮಹಾಕಾಳಿ ದೇವಿಯ ಆರಾಧನೆ, ಪೂರ್ವಾಹ್ನ ಸಾಮೂಹಿಕ ಕುಂಕುಮಾರ್ಚನೆ ಸೇವೆ, ಸಂಜೆ ದಿಪೆÇೀತ್ಸವ ಮತ್ತು ಪ್ರಸಾದ ಸೇವೆ, ಅ.07ರಂದು ನವÀಮಿ ದಿನ ಮಹಾ ಚಂಡಿಕ ಹವನ, ಸಂಜೆ ವಾಹನ ಪೂಜೆ (ಆಯುಧ ಪೂಜೆ) ಇತ್ಯಾದಿಗಳು ನೆರವೇರಿಸಿ ವೈಷ್ಣೋದೇವಿಯನ್ನು ಪೂಜಿಸಲಾಗುವುದು. (ಅ.08) ಮಂಗಳವಾರ ವಿಜಯದಶಮಿ ದಿನ ಬೆಳಿಗ್ಗೆ ವಿದ್ಯಾಥಿರ್üಗಳಿಗೆ ಪುಸ್ತಕ ವಿತರಣೆ ನಡೆಸಲಾಗುವುದು. ಅಂದು ಶಾರದಾ ದೇವಿಯನ್ನು ಸಂಭ್ರಮ ಸಡಗರದಿಂದ ಪೂಜಿಸಿ ಸಂಜೆ 5.00 ಗಂಟೆಗೆ ವಿಸರ್ಜನಾ ಮೆರವಣಿಗೆ ಮೂಲಕ ಜಲಸ್ತಂಭನ ನಡೆಸಲಾಗುವುದು ನೇರವೇರಲಿದೆ. ಅ.07ರ ತನಕ ದಿನಾಸಂಜೆ 7.00 ಗಂಟೆಯಿಂದ ರಾತ್ರಿ 10.00 ಗಂಟೆ ವರೇಗೆ ಗರ್ಭಾ, ದಾಂಡಿಯಾರಾಸ್ ನೃತ್ಯ ಆಯೋಜಿಸಲಾಗಿದ್ದು, ದಿನಂಪ್ರತೀ ಆಗಮಿಸುವ ಸಾವಿರಾರು ಭಕ್ತರಿಗೆ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಉಪಾಧ್ಯಕ್ಷ ಮನೋಹರ್ ವಿ.ಕಾಮತ್ ತಿಳಿಸಿದ್ದಾರೆ.

 
More News

 ಸ್ವಾಸ್ಥ ್ಯ ಸಮಾಜದ ಹೊಣೆ ಎಲ್ಲಾ ನಾಗರಿಕರದ್ದು : ರೋಲ್ಫಿ ಡಿಕೊಸ್ಟಾ
ಸ್ವಾಸ್ಥ ್ಯ ಸಮಾಜದ ಹೊಣೆ ಎಲ್ಲಾ ನಾಗರಿಕರದ್ದು : ರೋಲ್ಫಿ ಡಿಕೊಸ್ಟಾ
ಟ್ರೆಸ್ಸಿ ಡೋಲ್ಫಿ ಮಾರ್ಟಿಸ್ ನಿಧನ
ಟ್ರೆಸ್ಸಿ ಡೋಲ್ಫಿ ಮಾರ್ಟಿಸ್ ನಿಧನ
ಕವತ್ತಾರು ಬಾಲಗುತ್ತು ಅನಿತಾ ಬಿ.ಶೆಟ್ಟಿ ನಿಧನ
ಕವತ್ತಾರು ಬಾಲಗುತ್ತು ಅನಿತಾ ಬಿ.ಶೆಟ್ಟಿ ನಿಧನ

Comment Here