Friday 29th, March 2024
canara news

ಶ್ರೀಮತಿ ಯಶವಂತಿ ಸುವರ್ಣರಿಗೆ ಬನ್ನಂಜೆ ಬಾಬು ಅಮೀನ್ ಸಾಹಿತ್ಯ ಪ್ರಶಸ್ತಿ

Published On : 20 Oct 2019   |  Reported By : Rons Bantwal


ಮುಂಬಯಿ, ಅ.19: ಉಡುಪಿ ಜಿಲ್ಲೆಯ ಕಾರ್ಕಳದ ನಕ್ರೆಯವರಾದ ಯಶವಂತಿ ಸದಾಶಿವ ಸುವರ್ಣ ಇವರಿಗೆ ಅರ್ಹವಾಗಿಯೇ ಇತ್ತೀಚೆಗೆ ಉಡುಪಿಯಲ್ಲಿ `ಬನ್ನಂಜೆ ಬಾಬು ಅಮೀನ್ ಸಾಹಿತ್ಯ ಪ್ರಶಸ್ತಿ' ಪ್ರದಾನಿಸಿ ಗೌರವಿಸಲಾಯಿತು. ಯುವವಾಹಿನಿ ಉಡುಪಿ ಘಟಕ ಆಯೋಜಿಸಿದ ಕಾರ್ಯಕ್ರಮದಲ್ಲಿ ತುಳುಕೂಟದ ಗೌರವ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದ್ದು, ಡಾ| ದುಗ್ಗಪ್ಪ ಕಜೆಕಾರ್ ಅಭಿನಂದನಾ ಭಾಷಣ ಮಾಡಿದರು. ಯುವವಾಹಿನಿ ಜಿಲ್ಲಾಧ್ಯಕ್ಷ ನಾರಾಯಣ ಬಿ.ಎಸ್, ಕೇಂದ್ರ ಸಮಿತಿ ಉಪಾಧ್ಯಕ್ಷ ಉದಯ ಅಮೀನ್, ಆಯ್ಕೆ ಸಮಿತಿ ಅಧ್ಯಕ್ಷ ಮುದ್ದು ಮೂಡುಬೆಳ್ಳೆ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ಯಶವಂತಿ ಸದಾಶಿವ ಸುವರ್ಣ:
ಸುಮಾರು 2 ದಶಕಗಳ ಕಾಲ ಮುಂಬಾಯಿಯಲ್ಲಿ ನೆಲೆ ನಿಂತು ಸಾಹಿತ್ಯ ರಚನೆಯಲ್ಲಿ ತೊಡಗಿಸಿ ಕೊಂಡವರು. ಆ ಸಂದರ್ಭದಲ್ಲಿ ಅವರ ಕತೆಗಳು ನವಭಾರತ, ಕೃಷಿಕರ ಸಂಘಟನೆ, ಜನಪ್ರಗತಿ, ಪ್ರಜಾಮತ, ಮೊಗವೀರ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. 1970-80ರ ದಶಕದಲ್ಲಿ ಇವರ ಅನೇಕ ಸಣ್ಣ ಕತೆಗಳು ಈ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವರದಕ್ಷಿಣೆಯ ಕುರಿತಾದ ಇವರ ಪ್ರಥಮ ಲೇಖನವೊಂದು ನವಭಾರತದಲ್ಲಿ 60 ನೆಯ ದಶಕದಲ್ಲಿ ಪ್ರಕಟಗೊಂಡಾಗ ಅನೇಕರು ಮೆಚ್ಚುಗೆಯನ್ನು ಸೂಚಿಸಿದ್ದರು. ತುಳು-ಕನ್ನಡದಲ್ಲಿ ಬರೆಯುವ ಶ್ರ್ರೀಮತಿ ಯಶವಂತಿ ಸುವರ್ಣರು ಎರಡು ಸಣ್ಣ ಕತೆಗಳ ಸಂಕಲನವನ್ನು ಹೊರ ತಂದಿದ್ದಾರೆ. ಆ ಹೆಣ್ಣು ನಾಯಿಯ ಆತ್ಮಕತೆ (1986) ಮತ್ತು ದಾರಿ (1990). ಪಶ್ಚಿಮಕ್ಕೆ ವಾಲಿದ ಸೂರ್ಯ ಆತ್ಮಕತೆಯನ್ನು ಪ್ರಕಟಿಸಿದ್ದಾರೆ (2002). ಮೋಡ ಚದುರಿತು ಇವರ ಅಪ್ರಕಟಿತ ಕಾದಂಬರಿ. ಇವರ ಇತರ ಪುಸ್ತಕಗಳು- ದೇಯಿ ಬೈದೆತಿ (ತುಳು) (ಇದರ ಇಂಗ್ಲೀಷ್ ಭಾಷಾಂತರ ಪೆÇ್ರ| ಎಸ್.ಎನ್.ಡಿ ಪೂಜಾರಿ), ಮಾಯಂದಾಳ್ ಜಾನಪದ ಕೃತಿ ತುಳು-ಕನ್ನಡ-ಇಂಗ್ಲೀಷ್ ಮೂರು ಭಾಷೆಗಳಲ್ಲಿ ಪ್ರಕಟ ಗೊಂಡಿವೆ. ಅಂಕಣದೊಳಗೆ ಮಹಿಳೆ, ಎಳೆಯರಿಗಾಗಿ ಅಬ್ದುಲ್ ಕಲಾಂ, ಆ ಗೋಳಿದ ಮರ, ಶ್ರೀ ಕ್ಶೇತ್ರ ಪಡ್ಯ, ಅನುಭವಾಮ್ರತ ಇವರ ಇತರ ಕೃತಿಗಳು. ಜನಬಿಂಬ, ಉದಯವಾಣಿ, ಅಕ್ಷಯದಲ್ಲಿಯೂ ಕತೆ, ಕವನ, ಲೇಖನಗಳು ಪ್ರಕಟಗೊಂಡಿವೆ. ಅಲ್ಲದೆ ಬಿಡಿ ಲೇಖನಗಳು ಅನೇಕ ಸ್ಮರಣ ಸಂಚಿಕೆಗಳಲ್ಲಿಯೂ ಪ್ರಕಟ ಗೊಂಡಿವೆ.

ಬರವಣಿಗೆಯ ಜೊತೆಗೆ ಕೃಷಿ ಕಾರ್ಯ, ಸಾಮಾಜಿಕ- ರಾಜಕೀಯ ರಂಗದಲ್ಲೂ ಗುರುತಿಸಿಕೊಂಡಿರುವ ಮಹಿಳೆ. ಒರ್ವ ಸಂವೇದನಾಶೀಲ ಮಹಿಳೆ ಯಾಗಿ ಅನೇಕ ಜನಪರ ಕಾರ್ಯಗಳನ್ನು ನಡೆಸಿದ್ದಾರೆ. ತಮ್ಮ ಕೃಷಿ ಕೆಲಸಗಾರರಿಗಾಗಿ ಮನೆಯಲ್ಲಿ ವಯಸ್ಕರ ಶಿಕ್ಷಣ ಕೇಂದ್ರ ತೆರೆದು ರಾತ್ರಿ 7-9ರವರೆಗೆ ಶಿಕ್ಷಣ ನೀಡಿ ಕ್ರತಾರ್ಥರಾದವರು. ನಕ್ರೆಯಲ್ಲಿ ಹೈಸ್ಕೂಲು ಇಲ್ಲದನ್ನು ಗಮನಿಸಿ ಶಾಲೆಯನ್ನು ಆರಂಭಿಸುವಲ್ಲಿ ದುಡಿದವರಲ್ಲಿ ಮೊದಲಿಗರು. ಅನೇಕ ವರ್ಷಗಳ ಕಾಲ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಶಿಕ್ಷಕರಿಗೆ ಸಂಬಳವನ್ನೂ ನೀಡುತ್ತಿದ್ದುದನ್ನು ಊರವರು ನೆನಪಿಸಿಕೊಳ್ಳುತ್ತಾರೆ. ಎರಡು ಬಾರಿ ಪಂಚಾಯತ್ ಸದಸ್ಯರಾಗಿ, ಉಪ ಪ್ರಧಾನರಾಗಿ, ತಾಲೂಕು ಪಂಚಾಯತ್ ಸದಸ್ಯರಾಗಿ, ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿರುತ್ತಾರೆ. ನೂರಾರು ಸೂರಿಲ್ಲದ ಬಡಬಗ್ಗರಿಗೆ ಮನೆ ಒದಗಿಸಿಕೊಡುವಲ್ಲಿ, ವಿಧ್ಯುತ್ ದೀಪ ಒದಗಿಸಿಕೊಡುವಲ್ಲಿ, ನ್ಯಾಯ-ತೀರ್ಮಾನ ಮಾಡುವಲ್ಲಿ ಯಶಸ್ವಿಯಾದವರು. ಯುವ ಶಿಕ್ಷಣಾಥಿರ್üಗಳಿಗೆ ಪೆÇ್ರ್ರೀತ್ಸಾಹ ಧನ ನೀಡುತ್ತಿದ್ದುದನ್ನು ಅತ್ಯಂತ ಗೌರವದಿಂದ ನೆನಪಿಸಿಕೊಳ್ಳುತ್ತಾರೆ ಅವರಿಂದ ಪ್ರೇರಣೆ ಪಡೆದು ಯಶಸ್ವಿಯದವರು.

ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಆರಂಭಗೊಂಡಾಗ ಅದರ ಏಕೈಕ ಮಹಿಳಾ ಸದಸ್ಯೆಯಾಗಿ ನೇಮಕಗೊಂಡಿದ್ದರು. ಕರಾವಳಿ ಲೇಖಕಿ-ವಾಚಕಿಯರ ಸಂಘ, ಕಾರ್ಕಳ ಸಾಹಿತ್ಯ ಬಳಗದಲ್ಲಿ ಸಕ್ರೀಯವಾಗಿ ಕಾಣಿಸಿಕೊಂಡವರು.ಯಾವುದೆ ಸದ್ದುಗದ್ದಲವಿಲ್ಲದೆ, ಎಲೆಮರೆಕಾಯಿಯಾಗಿ ನಕ್ರೆಯಲ್ಲಿ ನೆಲೆನಿಂತು ತಮ್ಮ ನಿವ್ರತ್ತ ಜೀವನವನ್ನು ಸಾಗಿಸುತ್ತಿರುವ ಶ್ರೀಮತಿ ಯಶವಂತಿ ಸುವರ್ಣರಿಗೆ ಇದೀಗ 78ರ ಹರೆಯ (31-01-1941). ಇಬ್ಬರು ಉಪನ್ಯಾಸಕಿ ಪುತ್ರಿಯರನ್ನು ಹೊಂದಿರುವ ಯಶವಂತಿ ಸುವರ್ಣರು, ದಿ| ಸದಾಶಿವ ಎಂ.ಸುವರ್ಣರ ಧರ್ಮಪತ್ನಿ. ಈ ಹಿಂದೆ ಡಾ| ಅಮೃತ ಸೋಮೇಶ್ವರ, ಪೆÇ್ರ| ಬಿ.ಎ ವಿವೇಕ ರೈ, ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್, ಪೆÇ್ರ| ಎ.ವಿ ನಾವಡ, ಮುದ್ದು ಮೂಡುಬೆಳ್ಳೆ, ಯು.ಪಿ ಉಪಾಧ್ಯಾಯ ದಂಪತಿಗಳ ಸಾಲಿನಲ್ಲಿ ಇದೀಗ ಯಶವಂತಿ ಸುವರ್ಣ ಸೇರಿರುವುದು ಅಭಿಮಾನದ ಸಂಗತಿ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here