Saturday 10th, May 2025
canara news

ಬಿಲ್ಲವರ ಭವನದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‍ಲ್ ಕಾರ್ಯಯೋಜನಾ ಸಮಾಲೋಚನಾ ಸಭೆ

Published On : 27 Oct 2019   |  Reported By : Rons Bantwal


ದೇಯಿ ಬೈದ್ಯೆತಿ ಆರಾಧನಾ ಕ್ಷೇತ್ರ್ರ ಶೀಘ್ರವಾಗಿ ಬೆಳಗಲಿ-ಜಯ ಸಿ.ಸುವರ್ಣ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.25: ಪರಶುರಾಮನ ಸೃಷ್ಠಿಯ ತುಳುನಾಡ ಗರಡಿ ಪ್ರಧಾನ ಬಿಲ್ಲವರಲ್ಲಿ ಸದ್ಯ 20% ಗರೋಡಿಗಳು ಬಿಲ್ಲವರ ಆಡಳಿತ್ವದಲ್ಲಿದ್ದು, ಇವುಗಳ ಉಳಿವು ನಮ್ಮ ಕರ್ತವ್ಯವಾಗಬೇಕು. ಜೊತೆಗೆ ಗೆಜ್ಜೆಗಿರಿ ಕ್ಷೇತ್ರವೂ ವಿಶ್ವ ಬಿಲ್ಲವರ ಆಸ್ತಿಯಾಗಿ ಬೆಳೆಗಿಸಬೇಕು. ಇವೆಲ್ಲವುಗಳ ಸೇವೆಯೊಂದಿಗೆ ದೇಯಿ ಬೈದ್ಯೆತಿ ಆರಾಧನೆಗೂ ಕಾಲ ಸನ್ನಿಹಿತವಾಗಿದೆ. ಆದುದರಿಂದ ಆದಷ್ಟು ಬೇಗ ಈ ಕ್ಷೇತ್ರವನ್ನು ಬೆಳಗಿಸಿ ಮಾತೆ ಬೈದ್ಯೆತಿಯ ಋಣ ಪೂರೈಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಬೇಕು ಎಂದು ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷರೂ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ನುಡಿದರು.

ಪುತ್ತೂರು ಪಡುಮಲೆ ಅಲ್ಲಿನ ಬಡಗನ್ನೂರು ಗ್ರಾಮದಲ್ಲಿ ನಿರ್ಮಾಣ ಗೊಳ್ಳುತ್ತಿರುವ `ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‍ಲ್' ಯೋಜನಾ ಸಭೆ ಇಂದಿಲ್ಲಿ ಗುರುವಾರ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದಲ್ಲಿನ ಸಮಾಲೋಚನಾ ಸಭಾಗೃಹದಲ್ಲಿ ತನ್ನ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟ ಗೆಜ್ಜೆಗಿರಿಯ ಬಾಕಿಯಿರುವ ಜೀರ್ಣೋದ್ಧಾರ ಮತ್ತು ಕಾರ್ಯಯೋಜನೆಯ ಸಭೆಯನ್ನುದ್ದೇಶಿಸಿ ಜಯ ಸುವರ್ಣ ಮಾತನಾಡಿ ಮುಂಬಯಿಯಲ್ಲಿನ ದಾನಿಗಳಿಂದ ನಿಧಿ ಸಂಗ್ರಹಿಸಿ ಶೀಘ್ರವೇ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಲು ವಿನಂತಿಸಿದರು.

ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್ (ಶ್ರೀ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಉಪಾಧ್ಯಕ್ಷ), ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ, ಉಪಾಧ್ಯಕ್ಷ ಶಂಕರ ಡಿ.ಪೂಜಾರಿ, ಶ್ರೀ ಗೆಜ್ಜೆಗಿರಿ ಪ್ರವರ್ತಕ ಮಂಡಳಿ ಪ್ರವರ್ತಕ ಸದಸ್ಯರುಗಳಾದ ಹರೀಶ್ ಜಿ.ಅವಿೂನ್, ದಯಾನಂದ ಆರ್.ಪೂಜಾರಿ ಕಲ್ವಾ, ಭಾಸ್ಕರ್ ಎಂ.ಸಾಲ್ಯಾನ್ (ಭಾರತ್ ಬ್ಯಾಂಕ್‍ನ ನಿರ್ದೇಶಕ), ನಿಕಟಪೂರ್ವಾಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ (ಶ್ರೀ ಗೆಜ್ಜೆಗಿರಿ ಪ್ರವರ್ತಕ ಮಂಡಳಿ ವಿಸ್ವಸ್ಥರು), ಭಾರತ್ ಬ್ಯಾಂಕ್‍ನ ನಿರ್ದೇಶಕರುಗಳಾದ ಎಲ್.ವಿ ಅವಿೂನ್, ಭಾಸ್ಕರ್ ಎಂ.ಸಾಲ್ಯಾನ್, ಪುರುಷೋತ್ತಮ ಎಸ್.ಕೋಟ್ಯಾನ್, ಮೋಹನ್‍ದಾಸ್ ಎ.ಪೂಜಾರಿ, ಬಿಲ್ಲವರ ಅಸೋಸಿಯೇಶನ್‍ನ ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ಮಾಜಿ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರು, ಅಶೋಕ್ ಕುಕ್ಯಾನ್ ಸಸಿಹಿತ್ಲು, ಬೋಳ ರವಿ ಪೂಜಾರಿ, ದಿನೇಶ್ ಬಿ.ಅವಿೂನ್, ರವೀಂದ್ರ ಎಸ್.ಕೋಟ್ಯಾನ್, ರತ್ನಾಕರ ಪೂಜಾರಿ ಭಿವಂಡಿ, ಪ್ರಭಾಕರ್ ಪೂಜಾರಿ ಬೆಳುವಾಯಿ ಸೇರಿಂದಂತೆ ಮತ್ತಿತರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here