Sunday 6th, July 2025
canara news

ಕೃಷ್ಣಾವತಾರದಿಂದ ರೂಪುಗೊಳ್ಳುತ್ತಿದೆ ಸಯಾನ್‍ನ ಗೋಕುಲ ಶ್ರೀಕೃಷ್ಣ ಮಂದಿರ

Published On : 29 Oct 2019   |  Reported By : Rons Bantwal


ಬಿಎಸ್‍ಕೆಬಿಎ ಮಂದಿರ ಮುಂಬಯಿನ ಶ್ರೀಕೃಷ್ಣತಾಣವಾಗಲಿದೆ-ಡಾ| ಸುರೇಶ್ ರಾವ್ ಕಟೀಲು

(ಚಿತ್ರ / ಮಾಹಿತಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಅ.27: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಜಿಪಿಟಿ) ಮತ್ತು ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ ಇವುಗಳ `ಗೊಕುಲ' ಮಂದಿರವು ಬರುವ 2020ರ ಜೂನ್‍ನಲ್ಲಿ ಕೃಷ್ಣಾವತಾರ ರೂಪತಾಳಿದ ಶ್ರೀಕೃಷ್ಣ ಮಂದಿರವಾಗಿ ಪುನಃರ್ ಪ್ರತಿಷ್ಠಾಪಿ ಧಾರ್ಮಿಕ ಸೇವೆಗೆ ಸಿದ್ಧಗೊಳಿಸುವ ಆಶಯ ನಮ್ಮದಾಗಿದೆ ಎಂದು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‍ಕೆಬಿಎ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ತಿಳಿಸಿದರು.

ಕಳೆದ ಜೂನ್‍ನಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ದಿವ್ಯ ಹಸ್ತಗಳಿಂದ ಶಿಲಾನ್ಯಾಸ ನೆರವೇರಿಸಲ್ಪಟ್ಟ `ಗೊಕುಲ'ದ ಕಾಮಗಾರಿ ಭರದ ಸಿದ್ಧತೆಯಲ್ಲಿದ್ದು ಬರುವ ಜೂನ್‍ನಲ್ಲಿ ಸೇವೆಗೆ ಸಿದ್ಧಗೊಳ್ಳುವ ಬಗ್ಗೆ ಇಂದಿಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಡಾ| ಸುರೇಶ್ ರಾವ್ ತಿಳಿಸಿದರು.

ದೇವಸ್ಥಾನದ ಸ್ಥಪತಿ (ವಾಸ್ತುಶಿಲ್ಪಿ) ಉಡುಪಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಇವರ ಸಂರಚನೆಯಲ್ಲಿ ವಿಷ್ಣುಮೂರ್ತಿ ಆಚಾರ್ಯ ಎಲ್ಲೂರು ಇವರ ಶಿಲಾಮಯ ಕೆತ್ತನೆಯಲ್ಲಿ ದೇವಸ್ಥಾನದ ಗರ್ಭಗುಡಿಯು ಶಿರಕಲ್ಲುಗಳಲ್ಲಿ ಸಿದ್ಧಗೊಂಡು, 50 ಅಡಿ ಎತ್ತರÀದ ಭವ್ಯ ಗೋಪುರದೊಂದಿಗೆ ಮಂದಿರದ ಪೂರ್ಣ ಪ್ರಮಾಣದ ಕಾಮಗಾರಿ ಕೊನೆಯಂಂತದಲ್ಲಿದೆ. ಮಂದಿರದ ತೀರ್ಥ ಮಂಟಪದ ಕೆಳಭಾಗವು (ಆದಿಸ್ಥಾನ) ಸಂಪೂರ್ಣವಾಗಿ ಬೂದುಕಲ್ಲುಗಳ ಶಿಲಾಮಯವಾಗಿದ್ದು ಕೃಷ್ಣಾವತಾರಕ್ಕೆ ಸಂಬಂಧಿತ 44 ಶಿಲಾಮಯ ಮೂರ್ತಿಗಳು ಇದೀಗಲೇ ಸಿದ್ಧಗೊಂಡಿವೆ. ಮೇಲಿನ ಭಾಗವು ಪರಿಪೂರ್ಣವಾಗಿ ಮರದ ಕೆತ್ತನೆಯಲ್ಲಿ ರಚಿಸಲಾಗುತ್ತಿದೆ. ಶ್ರೀಕೃಷ್ಣ ದೇವರಿಗೆ ಸಂಬಂಧಿತ 25 ಮರದ ಮೂರ್ತಿಗಳನ್ನು ಹರೀಶ್ ಆಚಾರ್ಯ ಪುತ್ತಿಗೆ ಸಿದ್ಧಪಡಿಸಿದ್ದಾರೆ. ಸುಮಾರು 2500 ಚದರ ಅಡಿ ವಿಸ್ತೀರ್ಣದ ಮಂದಿರದ ಮೇಲ್ಛಾವಣಿಯು ಕೂಡಾ ಶ್ರೀ ಕೃಷ್ಣಾವತಾರದ ವಿಶ್ವರೂಪ ದರ್ಶನ, ಗಜೇದ್ರ ಮೋಕ್ಷ, ಕಾಳಿಂಗ ಮರ್ಧನ ಇತ್ಯಾದಿ ಮಹತ್ವದ ಉಪಾಖ್ಯಾನಗಳ ಮನಾಕರ್ಷಕ, ಚೌಬೀನೆ ಕೆತ್ತನೆ ಮತ್ತು ತಾಮ್ರದ ತಗಡುಗಳಲ್ಲಿ ಸಿದ್ಧಪಡಿಸಿ ಸ್ವರ್ಣಲೇಪಿತ ಹತ್ತು ದಶಾವತಾರಗಳ ಚಿತ್ರಣಗಳುಳ್ಳ ಕಲಾಕೃತಿಗಳೊಂದಿಗೆ ರಚಿಸಲಾಗುವುದು. ಈ ಎಲ್ಲಾ ಕೆಲಸಗಳಿಂದ ಮಂದಿರದ ಸಮಗ್ರ ಕೆಲಸಗಳು ಶೀಘ್ರವಾಗಿಯೇ ಕೊನೆಗೊಳಿಸಿ ಪುನರ್ ನಿರ್ಮಾಣದ ಶ್ರೀಕೃಷ್ಣ ಮಂದಿರ ಸದ್ಭಕ್ತರ ಸೇವೆಗೆ ಅಣಿಗೊಳ್ಳುತ್ತಿದೆ ಎಂದೂ ಡಾ| ರಾವ್ ಮಾಹಿತಿ ನೀಡಿದರು.

ತುಳುನಾಡÀ ಪ್ರಸಿದ್ಧ ವಾಸ್ತುತಜ್ಞರ ಸಲಹೆ, ನುರಿತ ಶಿಲ್ಪಿಗಳ ಮಾರ್ಗದರ್ಶನದಂತೆ ಪ್ರತ್ಯೇಕ ಗರ್ಭ ಗುಡಿಯೊಂದಿಗೆ ಮಂದಿರ ನಿರ್ಮಾಣವಾಗಲಿರುವ ಮಂದಿರದಲ್ಲಿ ಶ್ರೀ ಕೃಷ್ಣ ಅವತಾರಕ್ಕೆ ಸಂಬಂಧ ಪಟ್ಟಂತಹ, 44 ಕೇಶವಾದಿ ಕೃಷ್ಣ ಶೀಲಾ ದೇವತಾ ಮೂರ್ತಿಗಳನ್ನೊಳಗೊಂಡ ಗರ್ಭಗುಡಿಯ ಸುತ್ತು ಪೌಳಿ, ತೀರ್ಥ ಪ್ರಸಾದ ವಿತರಣೆಗಾಗಿ ಪ್ರತ್ಯೇಕ ಮುಖ ಮಂಟಪ, ದೇವಳದ ಮುಂಭಾಗದಲ್ಲಿ ಧಾರ್ಮಿಕ ಕಾರ್ಯಗಳಿಗೆ ಅನುಕೂಲವಾಗುವಂತೆ, ಸರಿ ಸುಮಾರು 3500 ಚದರ ಅಡಿಗಳಷ್ಟು ವಿಶಾಲವಾದ ಸಭಾಗೃಹ, ಸುಮಾರು 36 ಅಡಿ ಎತ್ತರದ ಗೋಪುರ, ಸಭಾಗೃಹದ ಛಾವಣಿಯ ಒಳಮೈಯ್ಯಲ್ಲಿ ಶ್ರೀ ಕೃಷ್ಣನ ಲೀಲೆಗಳಾಧಾರಿತ ಮರದ ಕುಸುರಿ ಕೆತ್ತನೆಗಳು ಮುಂತಾದ ವಿಶಿಷ್ಟತೆಗಳೊಂದಿಗೆ ನೂತನ ಮಂದಿರದ ಗರ್ಭ ಗುಡಿಯಲ್ಲಿ ಶ್ರೀ ಕೃಷ್ಣನ ಪ್ರತಿಷ್ಠೆ ನಡೆಸಲಾಗುವುದು ಎಂದರು.

ಈ ಎಲ್ಲಾ ಸೇವೆಗಳÀಲ್ಲಿ ಬಿಎಸ್‍ಕೆಬಿಎ ಸಂಸ್ಥೆಯ ಉಪಾಧ್ಯಖ್ಶರಾದ ವಾಮನ ಹೊಳ್ಳ ಮತ್ತು ಶೈಲಿನಿ ರಾವ್, ಗೌ| ಪ್ರ| ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಕೋಶಾಧಿಕಾರಿ ಹರಿದಾಸ್ ಭಟ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಕಾರ್ಯದರ್ಶಿ ಎ.ಶ್ರೀನಿವಾಸ ರಾವ್ ಹಾಗೂ ಉಭಯ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ನೂರಾರು ಗಣ್ಯರು ಸೇವಾ ನಿರತರಾಗಿದ್ದಾರೆ ಎಂದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here