ಸಾಂತಾಕ್ರೂಜ್‍ನ ಪೇಜಾವರ ಮಠದ ದೀಪಾವಳಿ ಆಚರಣೆಯಲ್ಲಿ ಶ್ರೀ ಈಶ ಪ್ರಿಯ ತೀರ್ಥರು
ಮುಂಬಯಿ, ಅ.28: ನಮ್ಮಲ್ಲಿನ ಕೆಲವು ಕಡೆ ಪವಿತ್ರಗ್ರಂಥ ಭಗವದ್‍ಗೀತೆ ಮನೆಯಲ್ಲೂ ಇದ್ದರೆ. ಮನೆಯಲ್ಲಿ ಜಗಳನಿಮಿತ್ತ ಈ ಗ್ರಂಥ ಮನೆಯಲ್ಲಿ ಬೇಡ ಎನ್ನುವವರಿದ್ದಾರೆ. ಆದರೆ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡು ಎಂದು ಕೃಷ್ಣನ ಉಪದೇಶವಾದ. ಈ ಪಾವಿತ್ರ್ಯತಾ ಗ್ರಂಥ ಎಲ್ಲಾ ಕಡೆ ಇರಬೇಕು. ಇದರ ಒಬ್ಬ ಸೈನಿಕ ತನ್ನ ಕರ್ತವ್ಯ ಮಾಡಲೇಬೇಕಾಗುತ್ತದೆ. ನಿಷ್ಠೆಯಿಂದ ಕರ್ತವ್ಯ ನಿಭಾಯಿಸದೇ ನಾನು ಯಾರನ್ನು ಹಿಂಸೆ ಮಾಡುವುದಿಲ್ಲ ಎಂದರೇ ದೇಶ ಉಳಿದೀತೇ. ಆದ್ದರಿಂದ ಕರ್ತವ್ಯನಿಷ್ಠೆ ಮನುಕುಲದ ಶಾಸ್ತ್ರವಾಗಬೇಕು. ನಮಗೆ ಅಲ್ಪ ತೃಪ್ತಿ, ಸುಖ ನೀಡುವ ಈ ಸಂಸಾರಕ್ಕಿಂತ ಎಲ್ಲಾ ಸುಖವನ್ನು ನೀಡುವ ಭಗವಂತನೇ ಸರ್ವಸ್ವ ಎಂದು ಶ್ರೀ ಅದಮಾರು ಮಠದ ಕಿರಿಯ ಪಟ್ಟಾಧೀಶ, ಭಾವೀ ಪರ್ಯಾಯ ಪಟ್ಟಾಧೀಶ ಶ್ರೀ ಈಶ ಪ್ರಿಯತೀರ್ಥ ಶ್ರೀಪಾದರು ತಿಳಿಸಿದರು.
ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠವು ಆಯೋಜಿಸಿದ್ದ ದೀಪಾವಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಠದ ಶಿಲಾಮಯ ಮಂದಿರದಲ್ಲಿ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿದರು. ಬಳಿಕ ಪಟ್ಟದ ದೇವರಿಗೆ ಶ್ರೀಗಳು ಪೂಜಾಧಿಗಳನ್ನು ನೆರವೇರಿಸಿ ನೆರೆದ ಸದ್ಭಕ್ತರನ್ನು ಅನುಗ್ರಹಿಸಿದರು.
ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರುಗಳಾದ ವಿದ್ವಾನ್ ಪ್ರಕಾಶ ಆಚಾರ್ಯ ರಾಮಕುಂಜ, ಡಾ| ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ, ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥ ಮಂಡಳಿಯ ಡಾ| ಎ.ಎಸ್ ರಾವ್, ಅವಿನಾಶ್ ಶಾಸ್ತ್ರಿ ಉಪಸ್ಥಿತರಿದ್ದು ಸಂಪ್ರದಾಯಿಕವಾಗಿ ಶ್ರೀಗಳನ್ನು ಮಠಕ್ಕೆ ಬರಮಾಡಿ ಕೊಂಡರು. ನಳೀನಿ ರಾವ್ (ಗೋಕುಲ ಭಜನಾ ಮಂಡಳಿ), ಶ್ಯಾಮಲಾ ಶಾಸ್ತ್ರಿ (ಮಧ್ವೇಶ ಭಜನಾ ಮಂಡಳಿ), ಭಾರತಿ ಉಡುಪ (ವಿಠಲಾ ಭಜನಾ ಮಂಡಳಿ ವಿೂರಾರೋಡ್) ಮುಂದಾಳುತ್ವದಲ್ಲಿ ಭಜನೆ ನಡೆಸಲ್ಪಟ್ಟಿತು.
ಕಾರ್ಯಕ್ರಮದಲ್ಲಿ ಅದಮಾರು ಮಠದ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್, ಗೋವಿಂದ ಭಟ್, ಪರೇಲ್ ಶ್ರೀನಿವಾಸ ಭಟ್, ಬಿಎಸ್‍ಕೆಬಿ ಎಸೋಸಿಯೇಶನ್‍ನ ಮಹಿಳಾ ವಿಭಾಗಧ್ಯಕ್ಷೆ ಐ.ಕೆ ಪ್ರೇಮಾ ಎಸ್. ರಾವ್, ಸ್ಮೀತಾ ಭಟ್, ಶಾಕುಂತಳಾ ಸಾಮಗ, ಗಿರಿಜಾ ಆನಂದತೀರ್ಥ, ಶಾಂತಳಾ ಎಸ್.ಎನ್ ಉಡುಪ, ವನಿತಾ ರಾವ್ ಸಹಿತ ನೂರಾರು ಭಕ್ತಾದಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಸೇವಾಥಿರ್üಗಳಿಗೆ ಹಾಗೂ ನೆರೆದ ಭಕ್ತಾದಿಗಳಿಗೆ ಶ್ರೀಪಾದರು ಮಂತ್ರಾಕ್ಷತೆ ನೀಡಿ, ವಿದ್ವಾನ್ ವಿಷ್ಣುತೀರ್ಥ ಸಾಲಿ ತೀರ್ಥ ಪ್ರಸಾದ ನೀಡಿ ಹರಸಿದರು.