ಬೆಸ್ಟ್ ಮೊಬಾಯ್ಲ್ ಆ್ಯಪ್-ಬೆಸ್ಟ್ ಡೆಬಿಟ್ ಕಾರ್ಡ್ ಇನೀಶಿಯೇಟಿವ್ ಪುರಸ್ಕಾರ
ಮುಂಬಯಿ, ಅ.31: ರಾಷ್ಟ್ರದ ಸಹಕಾರಿ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಸಂಸ್ಥೆಯು ಮತ್ತೆ ಬೆಸ್ಟ್ ಮೊಬಾಯ್ಲ್ ಆ್ಯಪ್ ಆವಾರ್ಡ್ ಮತ್ತು ಬೆಸ್ಟ್ ಡೆಬಿಟ್ ಕಾರ್ಡ್ ಇನೀಶಿಯೇಟಿವ್ ಆವಾರ್ಡ್‍ಗೆ ಭಾಜನವಾಗಿದ್ದು ಇತ್ತೀಚಿಗೆ (ಅ.29) ಗೋವಾದಲ್ಲಿನ ಹೊಟೇಲ್ ಹಾಲಿಡೆ ಇನ್ ಸಭಾಗೃಹದಲ್ಲಿ ನಡೆಸಲ್ಪಟ್ಟ ರಾಷ್ಟ್ರೀಯ ಮಟ್ಟದ ಸಹಕಾರಿ ರಂಗದ ಸಮಾವೇಶದಲ್ಲಿ ಈ ಪುರಸ್ಕಾರವನ್ನು ಭಾರತ್ ಬ್ಯಾಂಕ್ ತನ್ನ ಮುಡಿಗೇರಿಸಿ ಕೊಂಡಿತು.
ಬ್ಯಾಂಕಿಂಗ್ ಗಡಿ (ಬ್ಯಾಂಕಿಂಗ್ ಫ್ರಾಂಟಿಯರ್) ಆಯೋಜಿಸಿದ ಬೃಹತ್ ಉಪನಗರ ಸಹಕಾರಿ ರಂಗದ (ಹಾರ್ಬನ್ ಕೋ.ಅಪರೇಟಿವ್ ಬ್ಯಾಂಕ್ಸ್) ವಿಭಾಗದಲ್ಲಿ ಭಾರತ್ ಬ್ಯಾಂಕ್ ಜಾಗತಿಕವಾಗಿ ಹೊಂದಿಕೊಂಡು ತನ್ನ ಗ್ರಾಹಕರಿಗೆ ಒದಗಿಸುತ್ತಿರುವ ಅತ್ಯಾಧುನಿಕ ತಾಂತ್ರಿಕ ಸೇವೆಗಳಿಗಾಗಿನ ಬೆಸ್ಟ್ ಮೊಬಾಯ್ಲ್ ಆ್ಯಪ್ ಮತ್ತು ಬೆಸ್ಟ್ ಡೆಬಿಟ್ ಕಾರ್ಡ್ ಇನೀಶಿಯೇಟಿವ್ ಪ್ರಶಸ್ತಿಗಳಿಗೆ ಪಾತ್ರವಾಯಿತು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬ್ಯಾಂಕಿಂಗ್ ಫ್ರಾಂಟಿಯರ್ ಸಮೂಹದ ಸಂಪಾದಕ ಮನೋಜ್ ಅರ್ಗವಲ್, ಬಾಬು ನಾಯರ್, ಡಿಸಿಸಿಬಿ ಬ್ಯಾಂಕ್‍ನ ಮಾಜಿ ಪ್ರಧಾನ ಪ್ರಬಂಧಕ ಡಾ| ಎಂ ರಾಮನ್ನುನಿ, ರವಿಕಿರಣ್ ಮನಿಕ್ಕರ್ ಉಪಸ್ಥಿತರಿದ್ದು, ಪುರಸ್ಕಾರ ಪ್ರದಾನಿಸಿದ್ದು ಭಾರತ್ ಬ್ಯಾಂಕ್‍ನ (ನಿಯೋಜಿತ) ಆಡಳಿತ ನಿರ್ದೇಶಕÀ ವಿದ್ಯಾನಂದ ಎಸ್.ಕರ್ಕೇರಾ ಮತ್ತು ಬ್ಯಾಂಕ್‍ನ ಪ್ರಧಾನ ಪ್ರಬಂಧಕ ನಿತ್ಯಾನಂದ ಎಸ್.ಕಿರೋಡಿಯನ್ (ಮುಖ್ಯ ಮಾಹಿತಿ ಅಧಿಕಾರಿ) ಉಪಸ್ಥಿತರಿದ್ದು ಪುರಸ್ಕಾರ ಫಲಕ ಸ್ವೀಕರಿಸಿದರು.