ವಿದ್ಯಾಥಿರ್ü ದೆಸೆಯಲ್ಲಿ ರೂಢಿಸುವ ಅರಿವು ಶಾಸ್ವತವಾದದು : ದೆಲೀಲಾ ಸಿಕ್ವೇರಾ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ನ.01: ವಿದ್ಯಾಥಿರ್ü ದೆಸೆಯಲ್ಲಿ ರೂಢಿಸುವ ಅರಿವು ಶಾಸ್ವತವಾದದು ಎಂದು ನಗರದಲ್ಲಿನ ಪ್ರತಿಷ್ಠಿತ ಸಂಸ್ಥೆ ಜಿಸಿಐ ಇದರ ಸಹಾಯಕ ಮುಖ್ಯ ವ್ಯವಸ್ಥಾಪಕಿ ದೆಲೀಲಾ ಸಿಕ್ವೇರಾ ತಿಳಿಸಿದರು.
ಸಯಾನ್ ಧಾರಾವಿ ಅಲ್ಲಿನ ದಿ ಹೋಪ್ ಫೌಂಡೇಶನ್ ನಡೆಸುತ್ತಿರುವ ಉಚಿತ ಬೋಧನಾ ತರಗತಿಗಳಿಗೆ ಭೇಟಿ ನೀಡಿ ಸಿಕ್ವೇರಾ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾಥಿರ್üಗಳನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿಎಸ್‍ಆರ್ ಸಂಸ್ಥೆಯ ವರಿಷ್ಠ ವ್ಯವಸ್ಥಾಪಕ ಡಾ| ಪ್ರಕಾಶ್ ಕುಮಾರ್ ಮೂಡಬಿದ್ರಿ ಮತ್ತು ಉಪ ವ್ಯವಸ್ಥಾಪಕ ಪಂಕಜ್ ಕುಮಾರ್ ಮತ್ತು ಸಾಮಾಜಿಕ ಕಾರ್ಯಕರ್ತೆ ಯಶೋಧರಾ ದೇವಿ ಮತ್ತಿತರÀರು ಅಭ್ಯಾಗತರಾಗಿದ್ದು ಜಿಸಿಐ ಮತ್ತು ಸಿಎಸ್‍ಆರ್ ಸಂಸ್ಥೆಯ ಮುಖ್ಯಸ್ಥರು ಸೇವಾ ನಿರತ ಸ್ವಯಂಸೇವಕರು ಹಾಗೂ ವಿದ್ಯಾಥಿರ್üಗಳೊಂದಿಗೆ ಸಂವಹನ ನಡೆಸಿದರು.
ಈ ಸಂದರ್ಭದಲ್ಲಿ ಸಿಎಸ್‍ಆರ್ ಸಂಸ್ಥೆಯ ವರಿಷ್ಠರು ಭ್ರಷ್ಟಾಚಾರವು ನಮ್ಮ ಆಥಿರ್üಕತೆಯನ್ನು ಹೇಗೆ ನಾಶಪಡಿಸುತ್ತದೆ ಎಂಬುದನ್ನು ವಿವರಿಸಿದರು. ಸ್ವಯಂಸೇವಕರು ಸಮಗ್ರತೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಸಮಗ್ರತೆ ಮತ್ತು ನಮ್ಮ ಜೀವನದಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ಅಮೂಲ್ಯವಾದ ಜ್ಞಾನ ಕ್ರೋಢೀಕರಿಸುವ ಬಗ್ಗೆ ವಿದ್ಯಾಥಿರ್üಗಳಿಗೆ ಮಾರ್ಗದರ್ಶನ ನೀಡಿ ಸ್ವಯಂ ಸೇವಕರ ಸೇವಾಕಾರ್ಯ ಮತ್ತು ವಿದ್ಯಾಥಿರ್üಗಳ ಪ್ರಯತ್ನ ಶ್ಲಾಘಿಸಿದರು. ಹಾಗೂ ವಿದ್ಯಾಥಿರ್üಗಳಿಗೆ ಅಧ್ಯಯನ ಸಾಮಗ್ರಿಗಳನ್ನು ವಿತರಿಸಿದರು.
ರಾಕೇಶ್ ಬಡಿಗೆರಿ, ರವಿ ದಂಡು, ಗಣೇಶ್ ವಸುಮನಿ, ಡ್ಯಾನಿಯಲ ಜಗಲಿ, ಗೋವರ್ಧನ ರವುರ್ಕರ್, ಆಂಜನೇಯ ದಾಸರು, ಕೆ.ಸುರೇಶ್ ಉಪಸ್ಥಿತರಿದ್ದು ಹೋಪ್ ಫೌಂಡೇಶನ್‍ನ ಮಕ್ಕಳು ವಿವಿಧ ಸಾಮಾಜಿಕ ಸಮಸ್ಯೆಗಳ ಕುರಿತು ಭಾಷಣ ಮಾಡಿದರು. ಅನಿಲ ಬೊಡಲ್ ಸ್ವಾಗತಿಸಿದರು. ತಾಯಪ್ಪ ಅನ್ಮೊಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಷ್ಟ್ರಗೀತೆಯೊ ಂದಿಗೆ ಕಾರ್ಯಕ್ರಮ ಸಮಾನಪನ ಗೊಂಡಿತು.