ಯುವ ಜನತೆ ಯಕ್ಷಕ್ಷೇತ್ರದಲ್ಲಿ ಉತ್ಸುಕರಾಗಬೇಕು: ಡಿ.ಕೆ ಶೆಟ್ಟಿ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ನ.01: ಕರ್ನಾಟಕದ ಗಂಡುಕಲೆ ಪ್ರಸಿದ್ಧಿಯ ಪರಶುರಾಮನ ಸೃಷ್ಠಿಯ ತುಳುನಾಡ ವಿಶ್ವಪ್ರಸಿದ್ಧ ಕಲೆಯಾದ ಯಕ್ಷಗಾನ ಕಲೆಯನ್ನು ಆರ್ಟ್ಸ್ ಎನ್ ಡ್ಯಾನ್ಸ್ ಸೆಂಟರ್‍ನಲ್ಲಿ ಅಭ್ಯಾಸದ ಕಾರ್ಯಗಾರ ನಡೆಸಲಿದ್ದೇಶಿಸಿ ಕಲಾಭಾಸಕ್ಕೆ ಅವಕಾಶ ಕಲ್ಪಿಸಿದ್ದು ಅಭಿನಂದನೀಯ. ಇಂತಹ ಅಭ್ಯಾಸದಲ್ಲಿ ನಮ್ಮ ಯುವ ಜನತೆ ಉತ್ಸಹದಿಂದ ಭಾಗವಹಿಸಬೇಕು. ಆವಾಗಲೇ ಯಕ್ಷಕ್ಷೇತ್ರದ ಸರ್ವೋನ್ನತಿ ಸಾಧ್ಯ ಎಂದು ಡಿ.ಕೆ ಶೆಟ್ಟಿ ಪೆÇವಾಯಿ ತಿಳಿಸಿದರು.
ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಸ್ಥಾಪಕಾಧ್ಯಕ್ಷ ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಸಹಯೋಗದಲ್ಲಿ ಅಂಧೇರಿ ಪೂರ್ವದ ಜೆ.ಬಿ ನಗರದಲ್ಲಿನ ಬೊಂಬೇ ಇನ್‍ಸ್ಟಿಟ್ಯೂಟ್ ಪೆÇೀರ್ ಪರ್ಫಾಮಿಂಗ್ ಆರ್ಟ್ಸ್ ಮತ್ತು ಡ್ಯಾನ್ಸ್ ಸೆಂಟರ್‍ನಲ್ಲಿ ಕಳೆದ ಶನಿವಾರ (ಅ.26) ಅಸ್ತಿತ್ವಕ್ಕೆ ತರಲಾದ ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನಾ ಸರಳ ಕಾರ್ಯಕ್ರಮವನ್ನು ಉದ್ದೇಶಿಸಿ ಡಿ.ಕೆ ಶೆಟ್ಟಿ ಶುಭಾರೈಸಿದರು.
ಆರ್ಟ್ಸ್ ಎನ್ ಡ್ಯಾನ್ಸ್ ಸೆಂಟರ್‍ನ ಮೈಲ್ಥಿ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ನ್ಯಾ| ಮೊರ್ಲ ರತ್ನಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.