ಕರ್ನಾಟಕದ ಕರಾವಳಿ ಜನತೆ ಅಸಾಮಾನ್ಯ ಚತುರರು-ಸಿಎ| ಐ.ಆರ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುoಬಯಿ, ನ.೦೩ ದಕ್ಷಿಣ ಭಾರತೀಯರಲ್ಲಿ ಅದರಲ್ಲೂ ಕರ್ನಾಟಕದ ಕರಾವಳಿ ಜನತೆ ಅಸಾಮಾನ್ಯ ಬುದ್ಧಿವಂತರು ಮತ್ತು ಅಪ್ರತಿಮ ಚತುರರು. ಆದರೆ ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ ವಿಶ್ವಪ್ರಿಯವಾಗಿದ್ದರೂ ಅದರ ವ್ಯವಸ್ಥೆ ಅಭಿವೃದ್ಧಿ ಸರಿಯಾಗಿ ಕಾರ್ಯಗತವಾಗದಿರುವುದರಿಂದ ಭಾರತೀಯರಲ್ಲಿನ ಜನಸಂಖ್ಯೆಯ ೫೦% ಸುಶಿಕ್ಷಿತರಿದ್ದರೂ ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ. ಆದುರಿಂದಲೇ ನಮ್ಮವರ ಅರಿವುತನದ ಸದಪಯೋಗ ಸರಿಯಾಗಿ ಆಗುತ್ತಿಲ್ಲ ಅನ್ನುವುದನ್ನು ತಿಳಿಯಬಹುದು. ಭಾರತೀಯರಲ್ಲಿ ಸಾವಿರಾರು ಮೇಧಾವಿಗಳು ವಿಶ್ವದ ಶ್ರೇಷ್ಠ ಉದ್ಯಮಶೀಲರಾಗಿದ್ದಾರೆ. ಅಂದರೆ ವಿದ್ಯೆಯೊಂದಿದ್ದರೆ ಉದ್ಯಮಶೀಲರಾಗಲು ಬಂಡವಾಳದ ಅಗತ್ಯವೂ ಇಲ್ಲ ಅನ್ನುವುದಕ್ಕೆ ಇವರೇ ಸಾಕ್ಷಿ ಎಂದು ಬೃಹನ್ಮುಂಬಯಿಯಲ್ಲಿನ ಪ್ರತಿಷ್ಠಿತ ಲೆಕ್ಕ ಪರಿಶೋಧಕ, ಜುಹೂ ಅಂಧೇರಿ ವರ್ಸೋವಾ ವಿಲೇಪಾರ್ಲೆ ಅಸೋಸಿಯೇಶನ್ ಆಫ್ ಬಂಟ್ಸ್ ಅಧ್ಯಕ್ಷ ಸಿಎ| ಐ.ಆರ್ ಶೆಟ್ಟಿ ತಿಳಿಸಿದರು.
ಶ್ರೀ ಬ್ರಹ್ಮಬೈದರ್ಕಳ ಪಂಚಧೂಮವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಸಂಸ್ಥೆಯು ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್‌ನ ಬಿಲ್ಲವ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಆಯೋಜಿಸಿದ್ದ ಟ್ರಸ್ಟ್ನ ವಿದ್ಯಾನಿಧಿ ಯೋಜನಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ-ವಿದ್ಯಾಥಿüð ವೇತನ ಪ್ರದಾನ ತ್ರಿವಳಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಐ.ಆರ್ ಶೆಟ್ಟಿ ಮಾತನಾಡಿ ಪೂರ್ವಜರು ಪರಂಪರಿಕವಾಗಿ ನಂಬಿ ಶ್ರದ್ಧಾಭಕ್ತಿಯಿಂದ ನಡೆಸಿಬಂದ ಗರೋಡಿಗಳಂತಹ ಧಾರ್ಮಿಕ ಸ್ಥಾನಗಳನ್ನು ಮುನ್ನಡೆಸುವುದು ನಮ್ಮ ಕರ್ತವ್ಯ ಆಗಬೇಕು. ಇಂತಹ ಕಾರ್ಯಕ್ರಮದಿಂದ ಸಾಮರಸ್ಯತ್ವ ಮತ್ತು ಪರಸ್ಪರ ಪ್ರೀತಿಯನ್ನು ಹಂಚಿ ಕೊಳ್ಳುವುದೂ ಪರಸ್ಪರ ತಿಳಿದು ಬಾಳುವುದೂ ನಾವು ತಿಳಿಯಬಹುದಾಗಿದೆ ಎಂದರು.
ಗರೋಡಿ ಸೇವಾ ಟ್ರಸ್ಟ್ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿ ಮತ್ತು ಬಿಲ್ಲವರ ಅಸೋಸಿಯೇಶ ನ್ ಮುಂಬಯಿ ಇದರ ಉಪಾಧ್ಯಕ್ಷ ಹರೀಶ್ ಜಿ.ಅವಿÆನ್ ಉಪಸ್ಥಿತರಿದ್ದು ಟ್ರಸ್ಟ್ನ ವಿದ್ಯಾನಿಧಿ ಯೋಜನೆಗೆ ಚಾಲನೆಯನ್ನಿತ್ತರು. ಅತಿಥಿüವರ್ಯರು ಹಿರಿಯ ಸಾಧಕರಾದ ವಿದ್ಯಾದಾಯಿನಿ ಸಭಾ ಮುಂಬಯಿ ಇದರ ಅಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್, ರಾಷ್ಟಿçÃಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್.ಕೋಟ್ಯಾನ್, ತೋನ್ಸೆಯ ಸಾಧಕರಾದ ಎಂಟಿಎನ್‌ಎಲ್‌ನ ನಿವೃತ್ತ ಅಧಿಕಾರಿ ಗೋಪಾಲ್ ಪಾಲನ್ ಕಲ್ಯಾಣ್ಫುರ ಮತ್ತು ಸರಸ್ವತಿ ಗೋಪಾಲ್, ಆರ್‌ಬಿಐ ಇದರ ನಿವೃತ್ತ ಅಧಿಕಾರಿ ವಿ.ಸಿ ಪೂಜಾರಿ ಮತ್ತು ಗಿರಿಜಾ ವಿ.ಪೂಜಾರಿ, ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಿನೆಮಾ ವಿಭಾಗದ ಅಧಿಕಾರಿ ಭಾರತಿ ಎಸ್.ಸುವರ್ಣ ಮತ್ತು ಸುವಿಧಿ ಎಸ್.ಸುವರ್ಣ ದಂಪತಿಯ್ಯನ್ನು ಸನ್ಮಾನಿಸಿದರು ಹಾಗೂ ಗತ ಎಸ್‌ಎಸ್‌ಸಿ-ಹೆಚ್‌ಎಸ್‌ಸಿಯ ಪ್ರತಿಭಾನ್ವಿತ ವಿದ್ಯಾಥಿüðಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾಥಿüð ವೇತನ ಪ್ರದಾನಿಸಿದ್ದು, ಪುರಸ್ಕöÈತರು ಸಂದರ್ಭೋಚಿತವಾಗಿ ಮಾತನಾಡಿ ಅಭಿವಂದಿಸಿದರು.
ವಿದ್ಯಾದಾನವು ಒಂದು ಪುಣ್ಯಾಧಿ ಕಾಯಕ ಅದಕ್ಕಾಗಿನ ವಿದ್ಯಾನಿಧಿ ಕಾರ್ಯಕ್ರಮ ಪೂರಾವಾದದು. ಹಲವು ಸಂಘ ಸಂಸ್ಥೆಗಳಲ್ಲಿ ಶೈಕ್ಷಣಿಕ ನೆರವನ್ನು ನೀಡುತ್ತಾ ನಾವು ಶಿಕ್ಷಣ ಪ್ರೋತ್ಸಹಿಸಿದವರು. ಮಕ್ಕಳು ಎಷ್ಟು ಶಿಕ್ಷಿತರಾಗಿರುತ್ತಾರೋ ಅಷ್ಟು ದೇಶ ಅಭಿವೃದ್ಧಿಯಾಗುವುದು. ಆದುದರಿಂದ ಶಿಕ್ಷಣ ಪ್ರೋತ್ಸಾಹವನ್ನು ನೀಡಬೇಕು. ಈ ದೃಷ್ಠಿಯಲ್ಲಿ ಶ್ರಮಿಸುವ ತೋನ್ಸೆ ಬ್ರಹ್ಮ ಬೈದರ್ಕಳ ಗರೋಡಿ ಮುಂಬಯಿ ಸಂಸ್ಥೆ ನಿತ್ಯಾನಂದ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದÀÄ ಹರೀಶ್ ಅವಿÆನ್ ನುಡಿದರು.
ಒಂದು ಸಂಸ್ಥೆ ನಡೆಸಲು ಒಬ್ಬರು ಯಾ ಇಬ್ಬರಿಂದ ಸಾಧ್ಯವಿಲ್ಲ ಎಲ್ಲರ ಪ್ರೋತ್ಸಾಹವಿದ್ದಾಗಲೇ ಸಂಸ್ಥೆಯ ಮುನ್ನಡೆ ಸಾಧ್ಯವಾಗುವುದು. ಒಗ್ಗಟ್ಟಿನಿಂದ ಐಕ್ಯತೆಯಿಂದ ಸೇವಾನಿರತವಾಗಿ ಶ್ರಮಿಸುವ ಉತ್ಸಾಹವೇ ತುಂಬಾ ತೃಪ್ತಿ ತರುವಂತದು. ನಮ್ಮೆಲ್ಲರ ಸಹೃದಯಿ ಬಂಧು ವಿಠಲ್ ಎಸ್.ಪೂಜಾರಿ ಉಪಸ್ಥಿತಿ ಇಂದು ಅಸಾಧ್ಯವಾದರೂ ಅವರ ಪ್ರೋತ್ಸಾಹಕ್ಕೆ ಮತ್ತು ವಿದ್ಯಾನಿಧಿಗೆ ಪ್ರೋತ್ಸಾಹಿಸಿದ ಎಲ್ಲಾ ದಾನಿಗಳಿಗೆ ವಂದಿಸುತ್ತೇವೆ. ಮುಂದೆಯೂ ಎಲ್ಲರೂ ಜೊತೆಗೂಡಿ ಒಗ್ಗಟ್ಟಿನಿಂದ ಕೆಲಸ ಮಾಡಿ ಸಮಾಜಸೇವೆಯೊಂದಿಗೆ ಮುನ್ನಡೆಯೋಣ ಎಂದÀÄ ನಿತ್ಯಾನಂದ ಕೋಟ್ಯಾನ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಅತಿಥಿüವರ್ಯರು ಮತ್ತು ಸನ್ಮಾನಿತರು ಸಂದರ್ಭೋಚಿತವಾಗಿ ಮಾತನಾಡಿ ಟ್ರಸ್ಟ್ನ ಸೇವೆ ಪ್ರಶಂಸನೀಯ ಎಂದರು. ಸಚಿನ್ ಪೂಜಾರಿ ಭಿವಂಡಿ ಮತ್ತು ಚಿಣ್ಣರ ಬಳಗವು ತುಳುನಾಡ ವೈಭವ ಸಾಂಸ್ಕöÈತಿಕ ಕಾರ್ಯಕ್ರಮ ಮತ್ತು ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ, ರಂಗ್‌ದ ರಾಜೆ ಲ| ಸುಂದರ್ ರೈ ಮಂದಾರ ನಿರ್ದೇಶಿಸಿ ಪ್ರಧಾನ ಭೂಮಿಕೆಯಲ್ಲಿ ಗಡಿನಾಡ ಕಲಾನಿಧಿ ಕೃಷ್ಣ ಜಿ.ಮಂಜೇಶ್ವರ ಸಾರಥ್ಯ ಮತ್ತು ಕುಸಲ್ದರಸೆ ನವೀನ್ ಡಿ.ಪಡೀಲ್ ಸಹಕಾರದಲ್ಲಿ ಶಾರದಾ ಆರ್ಟ್್ಸ ತಂಡದ ಐಸಿರಿ ಕಲಾವಿದೆರ್ ಮಂಜೇಶ್ವರ ಬಳಗವು ಅಭಿನಯಿಸುವ `ಗಿರ್‌ಗಿಟ್ ಗಿರಿಧರೆ' ತುಳು ನಾಟಕ ಪ್ರದರ್ಶಿಸಿ ಮನೋರಂಜನೆ ನೀಡಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಗೌ| ಪ್ರ| ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್, ಜೊತೆ ಕಾರ್ಯದರ್ಶಿ, ಕರುಣಾಕರ ಬಿ.ಪೂಜಾರಿ, ಜೊತೆ ಕೋಶಾಧಿಕಾರಿ ವಿಜಯ್ ಸನಿಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಎಂ.ಕೋಟ್ಯಾನ್, ಆನಂದ್ ಜತ್ತನ್, ಸುರೇಶ್ ಅಂಚನ್, ಸದಾನಂದ ಬಿ.ಪೂಜಾರಿ, ವಿಜಯ್ ಪಾಲನ್, ಕೃಷ್ಣ ಪಾಲನ್, ಸಮಿತಿಯ ಹಿರಿಯರಾದ ಶಂಕರ್ ಸುವರ್ಣ, ಲಜ್ಹಾರ್ ಟಿ.ಮುತ್ತಪ್ಪ ಕೋಟ್ಯಾನ್, ಲಕ್ಷಿ ್ಮÃ ದಿವಾಕರ್ ಅಂಚನ್, ಶಶಿ ನಿತ್ಯಾನಂದ ಕೋಟ್ಯಾನ್, ಸುಶೀಲಾ ವಿ.ಪೂಜಾರಿ ಸೇರಿದಂತೆ ಸದಸ್ಯರನೇಕರು ಹಾಜರಿದ್ದರು.
ಕು| ಸಾಯಿಮಯಿ ಕೋಟ್ಯಾನ್ ಸ್ವಾಗತ ನೃತ್ಯಗೈದರು. ಕು| ವಿಭೂತಿ ಕಲ್ಯಾಣ್ಪುರ್ ಪ್ರಾರ್ಥನೆಯನ್ನಾಡಿದರು. ವಿಠಲ ಎಸ್.ಪೂಜಾರಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಡಿ.ಬಿ ಅವಿÆನ್ ಮತ್ತು ರೂಪ್‌ಕುಮಾರ್ ಕಲ್ಯಾಣ್ಪುರ್ ಅತಿಥಿüಗಳನ್ನು ಪರಿಚಯಿಸಿದರು. ಉಪಾಧ್ಯಕ್ಷ ಡಿ.ಬಿ ಅವಿÆನ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ವಂದನಾರ್ಪಣೆಗೈದರು.