Thursday 25th, April 2024
canara news

ಕಲಾ ಸೌರಭ ಮುಂಬಯಿ ಜರುಗಿಸಿದ ಪಂಚಕವಿ ಸಿಂಚನದಲಿ-ಸಾAಸ್ಕöÈತಿಕ ಸಂಗೀತ ಸಂಭ್ರಮ

Published On : 05 Nov 2019   |  Reported By : Rons Bantwal


ಸ್ವರ ಸೌರಭ ಸುಮಧುರ ಭಕ್ತಿ-ಭಾವ ಗೀತೆಗಳ ಆಲ್ ಇನ್ ಒನ್ ಪೆನ್‌ಡ್ರೆöÊವ್ ಬಿಡುಗಡೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುAಬಯಿ, ನ.೦೨: ಕಲಾ ಸೌರಭ ಮುಂಬಯಿ ಸಂಸ್ಥೆಯು ಸಾಂಸ್ಕöÈತಿಕ ಸಂಗೀತ ಸಂಭ್ರಮ ಮತ್ತು ಪಂಚ ಕವಿ ಸಿಂಚನದಲಿ ಕಾರ್ಯಕ್ರಮ ಹಾಗೂ `ಸ್ವರ ಸೌರಭ ಸುಮಧುರ ಭಕ್ತಿ-ಭಾವ ಗೀತೆಗಳ ಡ್ರೆöÊವ್' ಬಿಡುಗಡೆ ಕಾರ್ಯಕ್ರಮ ಇಂದಿಲ್ಲಿ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ನೆರವೇರಿಸಿತು. ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟç ಸಂಸ್ಥೆಯ ಅಧ್ಯಕ್ಷ ಸುರೇಂದ್ರಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಸಮಾರಂಭ ಉದ್ಘಾಟಿಸಿದರು. ಶ್ರೀಕೃಷ್ಣ ವಿಠಲ ಪ್ರತಿಷ್ಠಾನ (ರಿ.) ಸ್ಥಾಪಕಾಧ್ಯಕ್ಷ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಮತ್ತು ಶ್ರೀ ಪೇಜಾವರ ಮಠ ಮುಂಬಯಿ ಇದರ ಪ್ರಬಂಧಕ ಪ್ರಕಾಶ್ ಆಚಾರ್ಯ ರಾಮಕುಂಜ ಆಶೀರ್ವದಗೈದರು.

ಉದ್ಘಾಟನಾ ಸಮಾರಂಭದಲ್ಲಿ ಅತಿಥಿü ಅಭ್ಯಾಗತರಾಗಿ ಹಿರಿಯ ಸಾಹಿತಿ ಡಾ| ಸುನೀತಾ ಎಂ.ಶೆಟ್ಟಿ, ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಗಾಣಿಗ ಸಮಾಜ ಸೇವಾ ಸಂಘ ಮುಂಬಯಿ ಇದರ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಹಿರಿಯ ಹೊಟೇಲು ಉದ್ಯಮಿ ಕೃಷ್ಣ ವೈ.ಶೆಟ್ಟಿ, ಪತ್ರಕರ್ತ ಚಂದ್ರಶೇಖರ್ ಪಾಲೆತ್ತಾಡಿ, ಬಾಂಬೇ ಬಂಟ್ಸ್ ಎಸೋಸಿಯೇಶನ್ ಇದರ ಮಾಜಿ ಅಧ್ಯಕ್ಷ ನ್ಯಾ| ರತ್ನಾಕರ್ ವಿ.ಶೆಟ್ಟಿ, ಭಾರತ್ ಬ್ಯಾಂಕ್ ಲಿಮಿಟೆಡ್‌ನ ಮಾಜಿ ನಿರ್ದೇಶಕ ಅಶೋಕ್ ಎಂ.ಕೋಟ್ಯಾನ್, ಬಿಲ್ಲವರ ಅಸೋಸಿಯೇಶ ನ್ ಮುಂಬಯಿ ಇದರ ಮಹಿಳಾಧ್ಯಕ್ಷೆ ಜಯಂತಿ ವಿ.ಉಳ್ಳಾಲ್ ಉಪಸ್ಥಿತರಿದ್ದು ಪತ್ರಕರ್ತ ಎಸ್.ಆರ್ ಬಂಡಿಮಾರ್ (ಮಂಗಳೂರು) ಇವರನ್ನು ಗೌರವಿಸಿದರು.

ಬಂಟರ ಸಂಘ ಅಂಧೇರಿ ಬಾಂದ್ರ ಪ್ರಾದೇಶಿಕ ಅಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಭಕ್ತಿ-ಭಾವ ಗೀತೆಗಳ ಪೆನ್‌ಡ್ರೆöÊವ್ ಬಿಡುಗಡೆ ಸಮಾರಂಭದಲ್ಲಿ ವಿದ್ವಾನ್ ಪೆರ್ಣಂಕಿಲ ಹರಿದಾಸ ಭಟ್, ವಾಸ್ತು ಪಂಡಿತ ಅಶೋಕ ಪುರೋಹಿತ್, ಶ್ಯಾಮ ಎನ್.ಶೆಟ್ಟಿ, ಉಮೇಶ್ ಕಾಪು, ಡಾ| ಶಂಕರ ಶೆಟ್ಟಿ ವಿರಾರ್, ಗಣೇಶ್ ಪೂಜಾರಿ, ಕದ್ರಿ ಸುರೇಶ್ ಕುಮಾರ್, ಸಂತೋಷ್ ಶೆಟ್ಟಿ ಪುಣೆ, ಸಿಎ| ಐ.ಆರ್ ಶೆಟ್ಟಿ, ನ್ಯಾ| ಸುಂದರ್ ಭಂಡಾರಿ, ರಾಜಾ ವಿ.ಸಾಲ್ಯಾನ್, ಕಮಲಾಕ್ಷ ಸರಾಫ್, ನಾರಾಯಣ ಶೆಟ್ಟಿ ಕುರ್ಕಾಲ್, ದಯಾನಂದ ಪೂಜಾರಿ, ವಿಶ್ವನಾಥ ಶೆಟ್ಟಿ ಕಾಪು ಉಪಸ್ಥಿತರಿದ್ದು ಸ್ವರ ಸೌರಭ ಸುಮಧುರ ಭಕ್ತಿ-ಭಾವ ಗೀತೆಗಳ ಎಂಪಿತ್ರೀ ಬಿಡುಗಡೆ ಗೊಳಿಸಿದರು.

ಡಾ| ಸುನೀತಾ ಎಂ.ಶೆಟ್ಟಿ, ಎಂ.ಬಿ.ಕುಕ್ಯಾನ್, ಇಂದಿರಾ ಸಾಲ್ಯಾನ್, ಡಾ| ಕರುಣಾಕರ ಎನ್.ಶೆಟ್ಟಿ, ಸ್ವರ್ಗೀಯ ಬಿ.ಎಸ್ ಕುರ್ಕಾಲ್ ರಚನೆಯ, ಡಿ.ಶ್ರೀನಿವಾಸ ಆಚಾರ್ ಮತ್ತು ಬಿ.ವಿ ಶ್ರೀನಿವಾಸ್ ಬೆಂಗಳೂರು ಇವರÀ ಸಂಗೀತದೊAದಿಗೆ ಕಲಾ ಸೌರಭ ನಿರ್ದೇಶಕ ಪದ್ಮಾನಭ ಸಸಿಹಿತ್ಲು ಇವರ ಪರಿಕಲ್ಪನೆ ಮತ್ತು ನಿರ್ಮಾಣದಲ್ಲಿ ಭಕ್ತಿ-ಭಾವ ಗೀತೆಗ¼ ಪೆನ್‌ಡ್ರೆöÊವ್ ರಚಿಸಲಾಗಿದೆ.

ಸಾಂಸ್ಕöÈತಿಕ ಕಾರ್ಯಕ್ರಮದ ಅಂಗವಾಗಿ ವಿದೂಷಿ ಡಾ| ಶ್ಯಾಮಲಾ ಪ್ರಕಾಶ್, ಕು| ಶ್ರದ್ಧಾ ಬಂಗೇರ, ಕು| ಸುನೀತಾ ಭಟ್, ಶ್ರೀಮತಿ ಶೈಲಜಾ ಶೆಟ್ಟಿ, ರಾಜ್‌ಕುಮಾರ್ ಕಾರ್ನಾಡ್, ಪೇರಾಡಿ ಸದಾಶಿವ್ ಪೂಜಾರಿ, ಶೇಖರ್ ಸಸಿಹಿತ್ಲು ಇವರು ಸಾಂಸ್ಕöÈತಿಕ ಸೌರಭ ಭಕ್ತಿ ಭಾವ ಸಂಗೀತ ಸಂಪದ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಬಳಿಕ ಪದ್ಮಾನಭ ಸಸಿಹಿತ್ಲು ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಸಮೂಹ ವೃಂದಗಾನ ನಡೆಸಲ್ಪಟ್ಟಿದ್ದು ಆಶಾ ನಾಯ್ಕ್ ಅವರ ಸಾರಸ್ವತ ತಂಡ ಡೊಂಬಿವಲಿ ಬಳಗ, ಭಾರತಿ ಉಡುಪ ಅವರ ಶ್ರೀ ವಿಠ್ಠಲಾ ಭಜನಾ ಮಂಡಳಿ ಮೀರಾರೋಡ್, ಚಂದ್ರಕಲಾ ಶೆಟ್ಟಿ ಅವರ ವಿÆರಾ ಡಹಾಣು ಬಂಟ್ಸ್ ಬಳಗ, ಶೈಲಜಾ ಶೆಟ್ಟಿ ಅವರ ಇಂಚರಾ ಬಳಗ ಕಾಂದಿವಲಿ, ಶ್ರದ್ಧಾ ಬಂಗೇರ ಬಳಗ ಮತ್ತು ಸುಶೀಲ ದೇವಾಡಿಗ ಬಳಗ ಮತ್ತು ಕಲಾ ಸೌರಭ ಮುಂಬಯಿ ತಂಡಗಳು ಭಾಗವಹಿಸಿ ಸಂಗೀತ ಸಂಪದ ಸಾದರಪಡಿಸಿದರು. ನಳಿನಿ ಪ್ರಸಾದ ಮತ್ತು ಕೃಷ್ಣರಾಜ್ ಶೆಟ್ಟಿ ಸಂಪದ ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ `ಕವಿಮನಸು-ಗಾನಸೊಗಸು' ಕವಿ ಗೋಷ್ಠಿ ನಡೆಸಲಾಗಿದ್ದು ಡಾ| ಸುನೀತಾ ಎಂ.ಶೆಟ್ಟಿ, ಇಂದಿರಾ ಸಾಲ್ಯಾನ್, ನ್ಯಾ| ಅಮಿತಾ ಎಸ್.ಭಾಗ್ವತ್, ಚಂದ್ರಹಾಸ ಸುವರ್ಣ ಶಿಮಂತೂರು, ಡಾ| ಕರುಣಾಕರ ಎನ್.ಶೆಟ್ಟಿ, ಡಾ| ಕೆ.ಗೋವಿಂದ ಭಟ್, ಶಾರದಾ ಎ.ಅಂಚನ್, ಪ್ರಭಾ ಎನ್.ಪಿ ಸುವರ್ಣ, ಶೈಲಜಾ ಹೆಗ್ಡೆ, ಅನಿತಾ ಪೂಜಾರಿ ತಾಕೊಡೆ, ಡಾ| ಜಿ.ಪಿ ಕುಸುಮ, ಪ್ರಮೋದ ಮಾಡ, ಅಶೋಕ್ ಕುಮಾರ್ ವಳದೂರು ಭಾಗವಹಿಸಿ ತಮ್ಮ ಕವಿತೆಗಳನ್ನು ಪ್ರಸ್ತುತಪಡಿಸಿದರು. ಕು| ಶ್ರದ್ಧಾ ಬಂಗೇರ ಮತ್ತು ಬಳಗ ಪ್ರಾರ್ಥನೆಯನ್ನಾಡಿದರು. ಕೃಷ್ಣರಾಜ್ ಶೆಟ್ಟಿ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಪದ್ಮಾನಭ ಸಸಿಹಿತ್ಲು ಅಭಾರ ಮನ್ನಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here