Thursday 25th, April 2024
canara news

ರಾಜಭವನದಲ್ಲಿ `ಧಾರ್ಮಿಕ ಸಾಮರಸ್ಯ ಮತ್ತು ಶಾಂತಿ ಪುರಸ್ಕಾರ' ಪ್ರದಾನ

Published On : 06 Nov 2019   |  Reported By : Rons Bantwal


ರಾಜ್ಯಪಾಲರಿಂದ ಗೌರವಿಸಲ್ಪಟ್ಟ ಡಾ| ಶಂಕರ್ ಶೆಟ್ಟಿ ವಿರಾರ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.೦೪: ಭಾರತ ದೇಶದ ರಾಷ್ಟçಪಿತಾ ಮಹಾತ್ಮ ಗಾಂಧಿ ಅವರ ೧೫೦ನೆೆÃ ಜನ್ಮೋತ್ಸವದ ಶುಭಾವಸರ ನಿಮಿತ್ತ ಇಂಡಿಯನ್ ಜರ್ನಲಿಸ್ಟ್ ಕಂಪೆAಡಿಯಮ್ ಸಂಸ್ಥೆ ದೆಹಲಿ ಇಂದಿಲ್ಲಿ ಸೋಮವಾರ ಸಂಜೆ ಮಹಾನಗರದ ಮಲಬಾರ್‌ಹಿಲ್ ಅಲ್ಲಿನ ರಾಜಭವನದಲ್ಲಿ ರಾಜ್ಯಪಾಲರ ಅಧಿಕೃತ ಕಾರ್ಯಾಲಯ ಜಲ್ ಭೂಷಣ್ ಸಮಲೋಚನಾ ಸಭಾಗೃಹದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಗೌರವಿಸಿತು.

ಇದೇ ಶುಭಾವಸರದಲ್ಲಿ ಜರ್ನಲಿಸ್ಟ್ ಕಂಪೆAಡಿಯಮ್ ಸಂಸ್ಥೆ ದೆಹಲಿ ಮತ್ತು ಇಂಡಿಯನ್ ಹಾರ್ಮೋನಿಯಲ್ ರಿಲೀಜಿಯಸ್ ಫೋರಂ ಸಂಯುಕ್ತವಾಗಿ ನಡೆಸಿದ ಸರಳ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಸಮಾಜ ಸೇವಕ ಡಾ| ಶಂಕರ್ ಬಿ.ಶೆಟ್ಟಿ ವಿರಾರ್ ಇವರ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿ, ವಿಶೇಷವಾಗಿ ತನ್ನ ತುಳು ಮಾತೃಭಾಷೆಗಾಗಿನ ಸೇವೆ, ಅತ್ಯಮೂಲ್ಯ ಜಿಜ್ಞಾಸೆ, ಅನ್ಯೋನ್ಯತೆ, ಧಾರ್ಮಿಕ ಮತ್ತು ಸಾಮಾಜಿಕ ಸೇವೆಯನ್ನು ಪರಿಗಣಿಸಿ ಗೌರವಿಸಿತು. ಶಂಕರ್ ಶೆಟ್ಟಿ ಇವರಿಗೆ ರಾಜ್ಯಪಾಲ ಕೊಶ್ಯಾರಿ ಅವರು `ಧಾರ್ಮಿಕ ಸಾಮರಸ್ಯ ಮತ್ತು ಶಾಂತಿ ಪುರಸ್ಕಾರ' ಫಲಕ ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.

ಕರ್ನಾಟಕ ಸರಕಾರದ ದ.ಕ ಜಿಲ್ಲಾಡಳಿತವು ಮಂಗಳೂರುನಲ್ಲಿ ಸಂಭ್ರಮಿಸಿದ ಕನ್ನಡನಾಡು ನುಡಿಯ ಕರ್ನಾಟಕ ರಾಜ್ಯೋತ್ಸವ-೨೦೧೮ ಸಂಭ್ರಮದಲ್ಲಿ ದ.ಕ ಜಿಲ್ಲಾ `ರಾಜ್ಯೋತ್ಸವ ಪ್ರಶಸ್ತಿ', ಕಳೆದ ವರ್ಷ ಅಮೆರಿಕಾದ ಡಾಲಸ್‌ನಲ್ಲಿ ಅಸೋಸಿಯೇಶನ್ ಆಫ್ ಕನ್ನಡ ಕೂಟ'ಸ್ ಆಫ್ ಅಮೇರಿಕಾ ಸಂಸ್ಥೆ ಜರುಗಿಸಿದ ವಿಶ್ವ ಕನ್ನಡ ಅಕ್ಕ ಸಮ್ಮೇಳನದಲ್ಲಿ ಗೌರವ, ವಾಷಿಂಟನ್‌ನಲ್ಲಿ ಗ್ಲೋಬಲ್ ಪೀಸ್ ಫೌಂಡೇಶನ್ ಮತ್ತು ಇಂಟರ್‌ನೇಶನಲ್ ಕಲ್ಚರಲ್ ಫೆಸ್ಟ್ ಸಂಸ್ಥೆಗ ಳು ಪ್ರದಾನಿಸಿದ `ಇಂಟರ್‌ನೇಶನಲ್ ಮ್ಯಾನ್ ಆಫ್ ದ ಈಯರ್' ಪ್ರಶಸ್ತಿ, ಪೀಪಲ್'ಸ್ ಆರ್ಟ್ ಸೆಂಟರ್ (ರಿ.) ಮುಂಬಯಿ ಪ್ರಾಪ್ತಿಸಿದ `ಛತ್ರಪತಿ ಶಿವಾಜಿ ಮಹಾರಾಜ್ ಸಾಧನಾ ಪುರಸ್ಕಾರ ೨೦೧೮'ಕ್ಕೆ ಇತ್ಯಾದಿ ನೂರಾರು ಪ್ರತಿಷ್ಠಿತ ಪುರಸ್ಕಾರಗಳಿಗೆ ಭಾಜನರಾದ ತೆರೆಮರೆಯ ಸಮಾಜ ಸೇವಕ ಡಾ| ಶಂಕರ್ ಶೆಟ್ಟಿ ವಿರಾರ್ ಇವರ ಅಸಾಮಾನ್ಯ ಸಮಾಜ ಸೇವೆ ಪರಿಗಣಿಸಿ ಅಭಿನಂದಿಸಲಾಯಿತು. ಗೌರವಕ್ಕಾಗಿ ಶಂಕರ್ ಶೆಟ್ಟಿ ಅವರು ರಾಜ್ಯಪಾಲ ರಿಗೆ ಶಾಲು ಹೊದಿಸಿ ಅಭಿವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here