Saturday 20th, April 2024
canara news

ಮಲೇಷಿಯಾದಲ್ಲಿ ಜರುಗಿದ 22ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನ

Published On : 09 Nov 2019   |  Reported By : Rons Bantwal


ಸಾಧಕರಿಗೆ ಪುರಸ್ಕಾರ ಪ್ರದಾನ-ರಂಗೇರಿಸಿದ ಭಾರತೀಯ ಸಾಂಸ್ಕೃತಿಕ ವೈಭವ

ಮಲೇಷಿಯಾ, ನ.08: ಇಂಟರ್‍ನ್ಯಾಶನಲ್ ಕಲ್ಚರಲ್ ಫೆಸ್ಟಿವಲ್ ಆಫ್ ಇಂಡಿಯಾ (ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಸಮಿತಿ, ಭಾರತ-ಐಸಿಎಫ್‍ಸಿ) ಸಂಸ್ಥೆಯು ಗ್ಲೋಬಲ್ ಪೀಸ್ ಫೌಂಡೇಶನ್ (ಜಿಪಿಎಫ್) ಸಂಸ್ಥೆಯ ಸಹಯೋಗದಲ್ಲಿ ಇಂದಿಲ್ಲಿ ಶುಕ್ರವಾರ ಸಂಜೆ ಮಲೇಷಿಯಾ ರಾಷ್ಟ್ರದ ರಾಜಧಾನಿ ಕೌಲಾಲಂಪುರ ಇಲ್ಲಿನ ಬಾತು ಕೇವ್ಸ್‍ನ ಕುಯ್ಲ್ ಶ್ರೀ ಶಿವ ಮರಿಯಮ್ಮನ್ ಅಲಾಯಂ ಮಂದಿರ ಸಭಾಗೃಹದಲ್ಲಿ ಆಯೋಜಿಸಿರುವ 22ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷತೆ ಕುಯ್ಲ್ ಶ್ರೀ ಶಿವ ಮರಿಯಮ್ಮನ್ ಅಲಾಯಂ ಮಂದಿರದ ಟ್ರಸ್ಟೀ ಬಾತುಮಲೈ ಪೆÇನ್ನನ್ ವಹಿಸಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ನೆರವೇರಿದ ಸಮಾರಂಭದಲ್ಲಿ ಅತಿಥಿü ಅಭ್ಯಾಗತರುಗಳಾಗಿ ಮೈಕ್ರಾನ್ ಇಲೆಕ್ಟ್ರಿಕಲ್ಸ್ ಬೆಂಗಳೂರು ಇದರ ಯೋಜನಾ ನಿರ್ದೇಶಕ ಡಾ| ವಿ.ನಾಗರಾಜು, ಕುಬೇರ ಇಂಟರ್‍ನೇಶನಲ್ ಸಮೂಹದ ಪ್ರವರ್ತಕ ಡಾ| ಇ.ಆಂಜನೇಯ, ನೆಸ್ಟರ್ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್ ಮುಂಬಯಿ ಸಂಸ್ಥೆಯ ನಿರ್ದೇಶಕ ಹರೀಶ್ ಅವಿೂನ್ ವೇದಿಕೆಯಲ್ಲಿ ಆಸೀನರಾಗಿದ್ದರು.

ಅಂತರಾಷ್ಟ್ರೀಯ ಭಾವೈಕ್ಯತೆ ಮತ್ತು ವಿಶ್ವ ಶಾಂತಿ ಇಂಡಿವಿಜ್ಯುಅಲ್ ಕಾಂಟ್ರಿಬ್ಯೂಶನ್ ಫಾರ್ ಇಂಟರ್‍ನ್ಯಾಶನಲ್ ಇಂಟಿಗ್ರೇಶನ್ ಎಂಡ್ ವರ್ಲ್ಡ್ ಪೀಸ್) ವೈಯಕ್ತಿಕ ಕೊಡುಗೆಯ ಅನುಪಮ ಸೇವೆ ಮನವರಿಸಿ ಸಮಾರಂಭದಲ್ಲಿ ಅತಿಥಿüಗಳು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾಧ್ಯಕ್ಷ, ಬಿಸಿಸಿಐ ನಿರ್ದೇಶಕ ಹರೀಶ್ ಜಿ.ಅವಿೂನ್ (ನೆಸ್ಟರ್ ಹೊಟೇಲ್ಸ್) ಇವರಿಗೆ `ಇಂಟರ್‍ನ್ಯಾಷನಲ್ ಮೆನ್ ಆಫ್ ದ ಈಯರ್' ಪುರಸ್ಕಾರ, ಸಮಾಜ ಸೇವಕಿ, ಲೇಖಕಿ ಪ್ರಭಾ ಎನ್.ಪಿ ಸುವರ್ಣ ಮುಂಬಯಿ ಇವರಿಗೆ `ತೆರೇಸಾ ಇಂಟರ್‍ನ್ಯಾಷನಲ್ ವುಮೆನ್' ಪುರಸ್ಕಾರ, ಡಾ| ಮಲ್ಹಾರ್ ರಾವ್, ಕೆ.ಬಸವನ ಗೌಡ, ಮಾಧವಿ ಡಿ.ಕೆ., ಸಾಗರ್ ಟಿ.ಎಸ್ ತುಮಕೂರು ಇವರಿಗೆ ಪುರಸ್ಕಾರ ಪ್ರದಾನಿಸಿ ಗೌರವಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಾಧವಿ ಡಿ.ಕೆ ನಿರ್ದೇಶನದಲ್ಲಿ ನಮನ ಅಕಾಡೆಮಿ ದಾವಣಗೆರೆ, ಗುರು ಶೈಲಜಾ ನಿರ್ದೇಶನದಲ್ಲಿ ನೃತ್ಯಾಂಜಲಿ ಕಲಾ ನಿಕೇತನ ಚನ್ನರಾಯಪಟ್ಟನ ಬಳಗ, ವಿದ್ವಾನ್ ಶ್ರೀ ಸಾಗರ್ ಟಿ.ಎಸ್ ನಿರ್ದೇಶನದಲ್ಲಿ ಶ್ರೀ ಸಾಯಿ ರಮಣ ನೃತ್ಯ ಕೇಂದ್ರ ತುಮಕೂರು ತಂಡ ತಂಡಗಳು ಶಾಸ್ತ್ರೀಯ ನೃತ್ಯ ಪ್ರಸ್ತುತ ಪಡಿಸಿದವು. ಬಿಂದಿಗನವಿಲೇ ಭಗವನ್ ಮತ್ತು ಶಿವರಾಜ್ ಪಾಂಡೇಶ್ವರ್ ಸಂಗೀತ ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ಎನ್.ಪಿ ಸುವರ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕು| ಎಸ್. ವಿದ್ಯಾಶ್ರೀ ಮತ್ತು ಬಳಗವು ಪ್ರಾರ್ಥನೆ ಹಾಡಿದರು. ಐಸಿಎಫ್‍ಸಿ ಕಾರ್ಯಧ್ಯಕ್ಷ ಇಂ| ಮಂಜುನಾಥ ಸಾಗರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಉದಯ ಟಿವಿ ನಿರೂಪಕಿ ಶುೃತಿ ಎಸ್.ಆನಂದ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದÀರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here