ವಾಮಂಜೂರು :- ಸ್ಥಳೀಯ ಮಂಗಳಜ್ಯೋತಿ ಸಮಗ್ರ ಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಹಕ ಮಾಹಿತಿ ಕಾರ್ಯಕ್ರಮ 2019 ರ ನವೆಂಬರ್ 13 ರಂದು ನಡೆಯಿತು. ದ.ಕ. ಜಿಲ್ಲಾ ಗ್ರಾಹಕ ಸಂಘಟನೆ ಒಕ್ಕೂಟದ ಜತೆ ಕಾರ್ಯದರ್ಶಿ ಮೂಡುಬಿದಿರೆಯ ರಾಯೀ ರಾಜ ಕುಮಾರರು ಸಂಪನ್ಮೂಲ ವ್ಯಕ್ತಿಯಾಗಿ 348 ನೇ ಮಾಹಿತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಗ್ರಾಹಕ ಸಂಬಂಧಿ ಹಲವಾರು ಮಾಹಿತಿಗಳನ್ನು ವಿವಿಧ ಉದಾಹರಣೆಗಳೊಂದಿಗೆ ಪ್ರಸ್ತುತ ಪಡಿಸಿದರು. ವಿದ್ಯಾರ್ಥಿಗಳು ಕೂಡಾ ಹಲವಾರು ಪ್ರಶ್ನೆಗಳೊಂದಿಗೆ ಪರಿಹಾರ ಹಾಗೂ ಸೂಕ್ತ ಉತ್ತರವನ್ನು ಪಡೆದುಕೊಂಡರು. ಮಂಗಳಜ್ಯೋತಿ ಸಮಗ್ರ ಶಾಲೆಯ ಆಡಳಿತಾಧಿಕಾರಿ ಗಣೇಶ್ ಭಟ್ ರವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಗ್ರಾಹಕ ಕ್ಲಬ್ ನ ಸಂಚಾಲಕಿ ಶ್ರೀಮತಿ ಸುಖಲತಾರವರು ಸ್ವಾಗತಿಸಿದರು. ಕ್ಲಬ್ ನ ಕಾರ್ಯದರ್ಶಿ ಕು| ಅಪೂರ್ವ ವಂದಿಸಿದರು.