ಮಂಗಳೂರು:- ಸ್ಥಳೀಯ ಕಪಿತಾನಿಯೊ ಪ್ರೌಢಶಾಲೆಯಲ್ಲಿ ನಡೆಯುತ್ತಿದ್ದ ಹಿಂದಿ ವಿಷಯದ ಹತ್ತು ದಿನಗಳ ಪುನಶ್ಚೇತನ ಶಿಬಿರಕ್ಕೆ ದ.ಕ.ಜಿಲ್ಲಾ ಹಿಂದಿ ಅಧ್ಯಾಪಕರ ಸಂಘದ ಅಧ್ಯಕ್ಷ ರಾಯೀ ರಾಜ ಕುಮಾರ್, ಮೂಡುಬಿದಿರೆಯವರು 2019 ನವೆಂಬರ್ 13 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಿಬಿರದಲ್ಲಿದ್ದ ಹಿಂದಿ ಭಾಷಾ ಶಿಬಿರಾರ್ಥಿಗಳೊಂದಿಗೆ ಸಂಘದ ಚಟುವಟಿಕೆಗಳ ಬಗೆಗೆ ಚರ್ಚಿಸಿದರು.
ಶಿಬಿರದಲ್ಲಿ ಜಿಲ್ಲಾ ಸಂಘದ ರಾಜ್ಯ ಪ್ರತಿನಿಧಿ ಗೀತಾ ಪುತ್ತೂರು, ಉಪಾಧ್ಯಕ್ಷ ಗೋಪಾಲಕೃಷ್ಣ ತುಳುಪುಲೆ ನಾರಾವಿ, ಖಜಾಂಚಿ ರಮೇಶ್ ಸುಳ್ಯ ಹಾಗೂ ಇತರರು ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.