Sunday 11th, May 2025
canara news

ಮುಂಬಯಿಯಲ್ಲಿ ಸುನಿಲ್ ಮಿಶ್ರಾ ಅವರ ಮಿಶ್ರ ದೃಶ್ಯ ರೂಪಕ

Published On : 18 Nov 2019   |  Reported By : Rons Bantwal


ಮುಂಬಯಿ, ನ. 16: ಕನ್ನಡಿಗ ಕಲಾವಿದ ಸುನಿಲ್ ಮಿಶ್ರಾ ರಚಿಸಿದ ವಿನೂತನ ಕಲಾಕೃತಿಗಳ ಪ್ರದರ್ಶನ ನವೆಂಬರ್ 12 ರಂದು ಮುಂಬಯಿಯ ಕಾಲಾಘೋಡಾದಲ್ಲಿರುವ ಆರ್ಟಿಸ್ಟ್ ಸೆಂಟರ್ ಗ್ಯಾಲರಿಯಲ್ಲಿ ಉಧ್ಘಾಟನೆ ಗೊಂಡಿತು . ಗೌರವ ಅತಿಥಿsಗಳಾಗಿ ಚಿತ್ರಕರಾ ಹಾಗೂ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್ ಇದರ ಮಾಜಿ ಮುಖ್ಯಸ್ಥ ಪೆÇ್ರ. ಪ್ರಭಾಕರ್ ಕೋಲ್ಟೆ, ಚಿತ್ರ ಕಲಾ ಪರಿಷತ್ ಬೆಂಗಳೂರು ಇದರ ಚಿತ್ರ ಕಲಾ ಚರಿತ್ರೆ ಉಪನ್ಯಾಸಕ ಡಾ| ಆರ್ . ಎಚ್ . ಕುಲಕರ್ಣಿ , ಎಸ್.ಎಂ . ಶೆಟ್ಟಿ ಕಾಲೇಜ್‍ನ ಪ್ರಾಂಶುಪಾಲರ ಡಾ. ಶ್ರೀಧರ್ ಶೆಟ್ಟಿ , ಸಾಮಾಜಿಕ ಕಾರ್ಯಕರ್ತ ಸೈಮನ್ ಡಿಸೋಜ ಉಪಸ್ಥಿತರಿದ್ದರು.

 

ಕನ್ನಡಿಗ ಕಲಾವಿದ ಸುನಿಲ್ ಮಿಶ್ರಾ ರಚಿಸಿದ ವಿನೂತನ ಕಲಾಕೃತಿಗಳ ಪ್ರದರ್ಶನ ವನ್ನು ಉದ್ಘಾಟಿಸುತ್ತಾ ಜನರ ಮತ್ತು ಕೃತಿಕಾರ ರ ನಡುವೆ ಇರುವ ಅಂತರವನ್ನು ಶಿಲ್ಪಗಳು ಕೊನೆಗೊಳಿಸಬೇಕು, ಕೃತಿಕಾರನು ಸಮಾಜದಲ್ಲೇ ಇರುವ ವಾಸ್ತವವನ್ನು ಅವನ ಮಾಧ್ಯಮದ ಮೂಲಕ ಚಿತ್ರಿಸುತ್ತಾನೆ ಪೆÇ್ರ. ಪ್ರಭಾಕರ್ ಕೋಲ್ಟೆ ಅಭಿಪ್ರಾಯ ಪಟ್ಟಿದ್ದಾರೆ .

ಕುಲಕರ್ಣಿ ಮಾತನಾಡಿ ಕ್ಯಾನವಾಸ್ - ವರ್ಣಗಳಲ್ಲಿ ಕಲಾಕೃತಿಗಳನ್ನು ರಚಿಸುತ್ತಿದ್ದ ಸುನಿಲ್ ಮಿಶ್ರ ಅವರು ಲೋಹ ಮತ್ತು ಮರದ ಮಾಧ್ಯಮಉಪಯೋಗಿಸಿ ರಚಿಸಿದ ಕಲಾಕೃತಿಗಳು ಇನ್ನೂ ಹೆಚ್ಚಿನ ನೀರೀಕ್ಷೆಯನ್ನು ಹುಟ್ಟಿಸಿವೆ ಎಂದು ಅಭಿಪ್ರಾಯ ಪಟ್ಟರು .

ಸಾಮಾಜಿಕ ಕಾರ್ಯಕರ್ತ ಸೈಮನ್ ಡಿಸೋಜ Àು ಮಾತನಾಡಿ ಕರ್ನಾಟಕದ ಗ್ರಾಮೀಣ ಪ್ರದೇಶ ಶಿರ್ವದ ಪ್ರತಿಭೆಯೊಂದು ಮಾಡಿರುವ ಸಾಧನೆಯು ಪ್ರಶಂಸನೀಯವಾದುದು . ಇಂತಹ ಪ್ರತಿಭೆಯನ್ನು ಗುರುತಿಸಿ ಪೆÇ್ರೀತ್ಸಾಹಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಅಭಿಪ್ರಾಯ ಪಟ್ಟರು .

ಡಾ. ಶ್ರೀಧರ್ ಶೆಟ್ಟಿ ಮಾತನಾಡಿ ಒಂದು ಗ್ರಾಮೀಣ ಪ್ರತಿಭೆ ಶಿರ್ವದಿಂದ ಬೆಳೆದು ಬೆಂಗಳೂರು,ಮುಂಬಯಿ ಯಂತಹ ಮಹಾನಗರಗಳಲ್ಲಿ ಪ್ರದರ್ಶನ ನೀಡುವುದು ನಾವು ಹೆಮ್ಮೆ ಪಡುವಂತಹದು . ಇಂತಹ ಪ್ರತಿಭೆಯನ್ನು ನಾವು ಬೆಂಬಲಿಸಬೇಕಿದೆ ಎಂದು ಅಭಿಪ್ರಾಯ ಪಟ್ಟರು .

ಈ ಸಂದರ್ಭ ದಲ್ಲಿ ಸಂತ ಮೇರಿ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಶ್ರೀಧರ್ ಮೂರ್ತಿ, ಸುನಿಲ್ ಎಸ್,ಸಂತ ಮೇರಿ ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಶಿರ್ವ, ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಶಿರ್ವ ಇದರ ಹಳೆ ವಿದ್ಯಾರ್ಥಿಗಳು ಹಾಗೂ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಖ್ಯಾತ ಕವಿ , ಸಾಹಿತಿ ಗೋಪಾಲ ತ್ರಾಸಿ ಕಾರ್ಯಕ್ರಮವನ್ನು ನಿರೂಪಿಸಿದರು .ಕವಿ ಅಶೋಕ್ ವಳದೂರು ಪ್ರದರ್ಶನದ ಸಂಯೋಜನೆಯನ್ನು ಮಾಡಿದ್ದರು . ಕಲಾವಿದ ಸುನಿಲ್ ಮಿಶ್ರಾ ವಂದಿಸಿದರು . ಈ ಪ್ರದರ್ಶನವು ನವೆಂಬರ್18 ರ ತನಕ ಬೆಳ್ಳಿಗೆ 11.00 ರಿಂದ ಸಂಜೆ 7.00 ತನಕ ಸಾರ್ವಜನಿಕ ವೀಕ್ಷಣೆಗೆ ತೆರೆದಿರುತ್ತದೆ . ಹೆಚ್ಚಿನ ಮಾಹಿತಿಗಾಗಿ ಪ್ರದರ್ಶನದ ಸಂಯೋಜಕ ಅಶೋಕ್ ವಳದೂರು ಅವರನ್ನು ಮೊಬೈಲ್ ಸಂಖ್ಯೆ 9820363221/9757152520 ರಲ್ಲಿ ಸಂಪರ್ಕಿಸಬಹುದು .

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here