Sunday 11th, May 2025
canara news

ವಸಾಯಿ ತಾಲೂಕಾ ಸೌತ್ ಇಂಡಿಯನ್ ಫೆಡರೇಶನ್ ವತಿಯಿಂದ ವಾರ್ಷಿಕ ಸ್ನೇಹ ಕೂಟ

Published On : 19 Nov 2019   |  Reported By : Rons Bantwal


ಮುಂಬಯಿ, ನ.16: ವಸಾಯಿ ತಾಲೂಕಾ ಸೌತ್ ಇಂಡಿಯನ್ ಫೆಡರೇಶನ್ ವತಿಯಿಂದ ವಾರ್ಷಿಕ ಸ್ನೇಹ ಕೂಟವು ಮತ್ತು ಕಳೆದ ಅ.21ರಂದು ರಾಜ್ಯದ ವಿಧನಸಭೆಯ ಚುನಾವಣೆಯಲ್ಲಿ ಫೆಡರೇಶನ್ ಪದಾಧಿಕಾರಿಗಳ ಪೆÇ್ರೀತ್ಸಾಹದಿಂದ ಮೂವರು ಬಹುಜನ ವಿಕಾಸ ಅಘಾಡಿಯ ಶಾಸಕರು ಚುನಾಯಿತರಾಗಿದ್ದರಿಂದ ಸ್ನೇಹ ಸಮ್ಮಿಲನ ಇತ್ತೀಚಿಗೆ (04.11.2019) ವಿರಾರ್ ಪಶ್ಚಿಮದಲ್ಲಿನ ಹೊಟೇಲ್ ಬಂಜಾರ ಗ್ರ್ಯಾಂಡ್ ಇದರ ಸಭಾಗೃಹದಲ್ಲಿ ನೇರವೇರಿತು.

ಸಮಾರಂಭದ ಅಧ್ಯಕ್ಷತೆಯನ್ನು ವಸಾಯಿ ತಾಲೂಕಾ ಸೌತ್ ಇಂಡಿಯನ್ ಫೆಡರೇಶನ್ ಅಧ್ಯಷ ಡಾ| ವಿರಾರ್ ಶಂಕರ ಶೆಟ್ಟಿ ಅವರು ವಹಿಸಿದ್ದು, ಬಹುಜನ ವಿಕಾಸ ಅಘಾಡಿಯ ಶಾಸಕರಿಗಳಾದ ಹಿತೇಂದ್ರ ಠಾಕೂರ್, ಕ್ಷೀತಿಜ್ ಠಾಕೂರ್, ಪ್ರಥಮ ಮಹಾ ಪೌರರಾದ ಪ್ರವೀಣ್ ಶೆಟ್ಟಿ, ನವಘರ್ ಮಾಣಿಕ್‍ಪುರ ಮಾಜಿ ಅಧ್ಯಕ್ಷ ರಾಜೇಶ್ವರಿ ನಾರಾಯಣ್, ಬೊಯಿಸರ್‍ನ ಉದ್ಯಮಿ ಭುಜಂಗ ಶೆಟ್ಟಿ, ವಸಾಯಿ ತಾಲೂಕಾ ಸೌತ್ ಇಂಡಿಯನ್ ಫೆಡರೇಶನ್ ಗೌ|ಅಧ್ಯಕ್ಷ ಪಿ.ವಿ.ಕೆ ನಂಬಿಯಾರ್, ಕಾರ್ಯದರ್ಶಿ ನರೇಂದ್ರ ಪ್ರಭು, ಕೋಶಾಧಿಕಾರಿ ಚಕ್ರಮಣಿ, ಜೊತೆ ಕೋಶಾಧಿಕಾರಿ ಡಯಾನ್ ಡಿಸೋಜಾ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಹಾ ಪೌರರಾದ ಪ್ರವೀಣ್ ಶೆಟ್ಟಿ ಮಾತನಾಡಿ ಫೆಡರೇಶನ್ ಪೆÇ್ರೀತ್ಸಾಹ ಮತ್ತು ಪ್ರಯತ್ನದಿಂದ ನಮ್ಮ ಮೂವರು ಶಾಸಕರು ಜಯಗಳಿಸಿದ್ದಾರೆ. ಕರ್ಮಭೂಮಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯನಿರ್ವಾಹಿಸುತ್ತಿರುವುದು ಅಭಿನಂದನೀಯ. ಇದರ ಶ್ರೇಯಸ್ಸು ಫೆಡರೇಶನ್‍ನ ಎಲ್ಲಾ ಪಧಾಕಾರಿಗಳಿಗೆ ಪ್ರಥಮವಾಗಿ ವಿರಾರ್ ಶಂಕರ ಶೆಟ್ಟಿ ಅವರಿಗೆ ಸಲ್ಲುತ್ತದೆ. ನಾವೆಲ್ಲ ಸಂಘ ಸಂಸ್ಥೆಗಳು ಒಗ್ಗೂಡಿ ಕ್ಷೇತ್ರದ ಅಭಿವೃದ್ಧಿ ದುಡಿಯೋಣ ಎಂದು ತಿಳಿಸಿದರು.

ಹಿತೇಂದ್ರ ಠಾಕೂರ್ ಮಾತನಾಡಿ ಫೆಡರೇಶನ್ ಮಾಡಿರುವ ಕೆಲಸಕ್ಕೆ ಸಂಸ್ಥೆಯ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ ನಮ್ಮ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಯಾವ ಒಳ್ಳೆಯ ಕೆಲಸಗಳಲ್ಲಿ ವಿಳಂಬ ಅಥವಾ ಆಗದಲ್ಲಿ ನನ್ನ ಗಮನಕ್ಕೆ ತರಬೇಕು. ನಗರಸೇವಕರು ಕೆಲಸಗಳಲ್ಲಿ ವಿಫಲವಾದರೆ ನಮ್ಮಲ್ಲಿ ತಿಳಿಸದರೆ ನಾವೂ ಅದನ್ನು ತಿದ್ದುಪಡಿಸಬಹುದು. ಎಲ್ಲರ ಸಹಕಾರದಿಂದ ಅಗತ್ಯವಿದೆ ಎಂದು ನುಡಿದರು.

ನಮ್ಮ ಜಯಕ್ಕೆ ಫೆಡರೇಶನ್‍ನ ಅಧ್ಯಕ್ಷರ ಮುಂದಾಳತ್ವದಲ್ಲಿ ಹಲವು ಸಭೆಗಳನ್ನು ನಡೆಸಿ, ಗೆಲುವಿಗೆ ಶ್ರಮ ಪಟ್ಟ ಎಲ್ಲರಿಗೂ ನಮ್ಮ ಧನ್ಯವಾದಗಳು. ವಸಾಯಿ ತಾಲೂಕನ್ನು ಅಭಿವೃದ್ಧಿ ಕ್ಷೇತ್ರವೆಂದು ಪರಿಗಣಿಸಲು ನಾವೂ ಸಂಪೂರ್ಣವಾಗಿ ಪ್ರಯತ್ನಿಸುತ್ತೇವೆ. ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದು ನಾಲಾಸೋಫಾರ ವಿಧಾನ ಸಭೆಯ ಶಾಸಕ ಕ್ಷಿತಿಜ್ ಠಾಕೂರ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಇತ್ತೀಚಿಗೆ ರಾಜ್ಯಪಾಲರಿಂದ ದೊರೆತಿರುವ ಧಾರ್ಮಿಕ ಸಾಮರಸ್ಯ ಮತ್ತು ಶಾಂತಿ ಪುರಸ್ಕಾರ ಪಡೆದಿರುವ ವಿರಾರ್ ಶಂಕರ ಶೆಟ್ಟಿ ಅವರನ್ನು ಜಯೇಂದ್ರ ಠಾಕೂರ್ ಅವರು ಅತಿಥಿsಗಳನ್ನೊಳಗೊಂಡು ಶಾಲು ಹೊದಿಸಿ, ಪೇಟವನ್ನಿಟ್ಟು ಸನ್ಮಾನಿಸಿ, ನಿಮ್ಮ ಸಮಾಜ ಸೇವೆ ನಿರಂತರ ನಡೆಯಲಿ, ಅನೇಕ ಗೌರವ ಪುರಸ್ಕಾರಗಳಿ ನಿಮ್ಮದಾಗಲಿ, ಜೀವ್ದಾನಿ ಮಾತೆ ಮತ್ತು ಸಾಯಿಬಾಬಾರ ಆಶೀರ್ವಾದ ನಿಮ್ಮೊಡನೆ ಸದಾ ಇರಲಿ ಎಂದು ಶುಭಾರೈಸಿದರು.

ವಿರಾರ್ ಶಂಕರ ಶೆಟ್ಟಿ ಅಧ್ಯಕ್ಷೀಯ ಭಾಷಣಗೈದು ಫೆಡರೇಶನ್‍ನ ಎಲ್ಲರು ಒಗ್ಗೂಡಿ ಮೂವರು ಶಾಸಕರನ್ನು ಜಯಭೇರಿ ಗೊಳಿಸಿದಕ್ಕೆ ಎಲ್ಲರಿಗೂ ಅಂತರಾಳದಿಂದ ಅಭಿನಂದಿಸಿ ಕೃತಜ್ಞತೆ ಸಲ್ಲಿಸುತ್ತೇನೆ. ಇಂದು ನಿಮ್ಮೆಲ್ಲರ ಪರವಾಗಿ ನೂತನ ಶಾಸಕರನ್ನು ಸನ್ಮಾನಿಸುತ್ತೇವೆ. ನನ್ನಿಂದ ಒಬ್ಬನಿಗೆ ಸಾಧ್ಯವಿಲ್ಲ, ನಿಮ್ಮೆಲ್ಲರ ವಿಶ್ವಾಸ, ತನು ಮನ ಸಹಕಾರದಿಂದ ಸಾಧ್ಯವಾಗಿದೆ ಎಂದು ಎಲ್ಲರಿಗೂ ಅಭಿವಂದಿಸಿದರು.
ಈ ಸಂದರ್ಭದಲ್ಲಿ ಲ|ಡಾ| ಕೆ.ಟಿ ಶಂಕರ ಶೆಟ್ಟಿ, ಲ| ಶಶಿಕಾಂತ್ ಸುವರ್ಣ, ವಿರಾರ್-ನಾಲಾಸೋಪಾರ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಸದಾಶಿವ ಕರ್ಕೇರ, ವಸಾಯಿ, ಡಹಾಣು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದು, ಶುಭಕೋರಿದರು. ನರೇಂದ್ರ ಪ್ರಭ ಕಾರ್ಯಕ್ರಮ ನಿರೂಪಿಸಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here