ಮುಂಬಯಿ (ಉಡುಪಿ), ನ.17: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು ಇವರ ಸಹಭಾಗಿತ್ವಾದಲ್ಲಿ ಯಕ್ಷಗಾನ ಕಲಾರಂಗ,ಉಡುಪಿ ಇವರಿಂದ ಬಹುಮಾನ್ಯ ಕಲಾವಿದರಿಗೆ, ಕಲಾಸಂಸ್ಥೆಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಗಣ್ಯ ವ್ಯಕ್ತಿಗಳ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಗಳನ್ನೂ ಯಕ್ಷಗಾನದ ವಿವಿಧ ಸ್ಥರಗಳಲ್ಲಿ ವಿಶೇಷ ಸೇವೆ ಮಾಡಿದ ಕಲಾವಿದರಿಗೆ ಪ್ರದಾನ ಮಾಡುತ್ತಾ ಅನುಗ್ರಹಿಸಿದರು.
ಶ್ರೀ ವಿಶ್ವೇಶ ತೀರ್ಥ ಪ್ರಶಸ್ತಿ'ಯನ್ನು ಪದವೀಧರ ಯಕ್ಷಗಾನ ಸಮಿತಿ (ರಿ.) ಮುಂಬಯಿ ಇದರ ಹೆಚ್ವ.ಬಿ.ಎಲ್ಗೆ ರಾವ್ ಇವರಿಗೆ ಪ್ರದಾನಿಸಿ ಅನುಗ್ರಹ ಸಂದೇಶ ನೀಡಿದರು.
ಡಾ.ಜಿ.ಶಂಕರ್ ಸಭಾಧ್ಯಕ್ಷತೆ ನೇರವೇರಿದ ಸಮಾರಂಭದಲ್ಲಿ ಕಲಾತರಂಗ- 2019 'ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿದರು. ಅಭ್ಯಾಗತರಾಗಿ ಸಿಂಡಿಕೇಟ್ ಬ್ಯಾಂಕಿನ ಭಾಸ್ಕರ್ ಹಂದೆ, ಕರ್ನಾಟಕ ಬ್ಯಾಂಕಿನ ಚಂದ್ರಶೇಖರ ಎಂ,ಮುಂಬಯಿ, ಪದವೀಧರ ಯಕ್ಷಗಾನ ಸಮಿತಿಯ ಎಚ್.ಬಿ.ಎಲ್ ರಾವ್ ಭಾಗವಹಿಸಿದ್ದರು. ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಅÀವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.