ಪುಂಜಾಲಕಟ್ಟೆ, ನ.17: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಮತ್ತು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪ್ರಶಸ್ತಿ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಮಾಜಿ ಮಂತ್ರಿ, ದ.ಕ.ಜಿಲ್ಲಾ ಉಸ್ತುವರಿ ಸಚಿವ ಬಿ. ನಾಗರಾಜ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್ ಮುಖ್ಯ ಅತಿಥಿಯಾಗಿದ್ದು ರೋನ್ಸ್ ಬಂಟ್ವಾಳ್ (ಪತ್ರಿಕೋದ್ಯಮ) ಮತ್ತಿತರ ಗಣ್ಯರಿಗೆ ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಪ್ರಶಸ್ತಿ ಪ್ರದಾನಿಸಿ ಅಭಿನಂದಿಸಿದರು.
ಸಮಾರಂಭದಲ್ಲಿ ಪುರೋಹಿತ ಯೋಗೀಶ್ ಕೆ.ಭಟ್, ಪ್ರೊ.ಪಿ.ಸುಬ್ರಹ್ಮಣ್ಯ ಎಡಿಪಡಿತ್ತಾಯ, ತುಳು ಅಕಾಡೆಮಿ ಸದಸ್ಯರಾದ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ರವೀಂದ್ರ ಶೆಟ್ಟಿ ಬಳಂಜ, ಸಮಾಜ ಸೇವಕರಾದ ಡಾ| ಅಣ್ಣಯ್ಯ ಕುಲಾಲ್, ಅಶ್ವತ್ ಹೆಗ್ಡೆ, ಹರೀಂದ್ರ ಪೈ, ಕೆಂತಲೆ ನಿತ್ಯಾನಂದ ಪೂಜಾರಿ, ಓಂ ಪ್ರಸಾದ್, ರಾಜಶೇಖರ ಶೆಟ್ಟಿ, ಹೇಮಂತ್ ಕುಮಾರ್, ಬೇಬಿ ಕುಂದರ್, ಪ್ರದೀಪ್ ನಾಯಕ್ ಮದ್ದಡ್ಕ, ಯಾದವ ಕೋಟ್ಯಾನ್, ಧರ್ಮಪ್ಪ ಮಾಸ್ತರ್,ದಯಾನಂದ ಶೆಟ್ಟಿ ಸರಪಾಡಿ, ಸುದರ್ಶನ್ ಬಜ ಮತ್ತಿತರ ಗಣ್ಯರು ಅತಿಥಿಗಳಾಗಿ ಉಪಸ್ಥಿತರಿದ್ದು,
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ರೋನ್ಸ್ಬಂ ಬಂಟ್ವಾಳ್ (ಪತ್ರಿಕೋದ್ಯಮ)
ರೋಹಿನಾಥ್ ಪಾದೆ (ಉದ್ಯಮ), ಶಿಕ್ಷಕ ಬಿ.ರಾಮಚಂದ್ರ ರಾವ್, ಬಿ.ಸಿ.ರೋಡು (ಶಿಕ್ಷಣ) ಕ್ರೀಡಾಪಟು ಋತ್ವಿಕ್ ಅಲೆವೂರು (ಕ್ರೀಡೆ), ಹಸನಬ್ಬ ಚಾರ್ಮಾಡಿ (ಸಮಾಜಸೇವೆ), ಇವರೆಲ್ಲರಿಗೆ ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಪುರಸ್ಕಾರ* ಪ್ರದಾನಿಸಿ ಗೌರವಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಲಪುಂಜಾಲಕಟ್ಟೆ ಅಧ್ಯಕ್ಷ ಪ್ರಶಾಂತ್ ಎಂ. ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ ಪಿ ಮಂಜಲಪಲ್ಕೆ, ಪಂದ್ಯಾಟ ಸಂಚಾಲಕ ರಾಜೇಶ್ ಪಿ.ಪುಂಜಾಲ ಕಟ್ಟೆ, ಸಹ ಸಂಚಾಲಕ ಅಬ್ದುಲ್ ಹಮೀದ್ ಮಲ್ಪೆ, ತಾಂತ್ರಿಕ ಸಮಿತಿ ಸದಸ್ಯ ಫ್ರಾನ್ಸಿಸ್ ವಿ.ವಿ ಮತ್ತಿತರ, ನೂರಾರು ಕ್ರೀಡಾಭಿಮಾನಿ-ಕ್ರೀಡಾಸಕ್ತರು ಉಪಸ್ಥಿತರಿದ್ದು ಶುಭಾರೈಸಿದರು.
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಸಂಸ್ಥೆಯ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಸ್ವಾಗತಿಸಿ ಪ್ರಸ್ತಾವನೆ ಗೈದರು. ಸಂಯೋಜಕ ಸುಂದರರಾಜ್ ಹೆಗ್ಡೆ ಅತಿಥಿಗಳನ್ನು ಗೌರವಿಸಿದರು. ಪ್ರಭಾಕರ್ ಪುಂಜಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿಜಯರಾಜ್ ಅತ್ತಾಜೆ ವಂದಿಸಿದರು.