ಮುoಬಯಿ, ನ.18: ಪಿಲಾರು ಮಜಲಬೆಟ್ಟು ಹಿರಿಯ ಪ್ರಾಥಮಿಕ ಶಾಲೆ ಹಲಸಿನಕಟ್ಟೆ (ಸಾಂತೂರು ಪಿಲಾರು ಗ್ರಾಮ ಮದರಂಗಡಿ) ಹಳೆ ವಿದ್ಯಾಥಿರ್sಗಳ ಸಂಘವನ್ನು ಪಿಲಾರು ಮಜಲಬೆಟ್ಟು ಹಿರಿಯ ಪ್ರಾಥಮಿಕ ಶಾಲೆ ಮುಂಬಯಿ ಅಲುಮ್ನಿ ಅಸೋಸಿಯೇಶನ್‍ನ್ನು ಆದಿತ್ಯವಾರ ಸಾಕಿನಾಕ ಜಂಕ್ಷನ್‍ನಲ್ಲಿರುವ ಹೊಟೇಲ್ ಮುಂಬಯಿ ಮೆಟ್ರೋ ಪ್ಯಾಲೇಸ್ ಸಭಾಗೃಹದಲ್ಲಿ ಅಸ್ವಿತ್ವಕ್ಕೆ ತರಲಾಯಿತು.
ಶಾಲೆಯ ಮಾಲಕರುಗಳಾದ ಶ್ರೀಮತಿ ಶಶಿ ಶೆಟ್ಟಿ ಮತ್ತು ರಾಜೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನೇರವೇರಿದ ಸಭೆಯಲ್ಲಿ ಪಿಲಾರು ಮಜಲಬೆಟ್ಟು ಹಿರಿಯ ಪ್ರಾಥಮಿಕ ಶಾಲೆ ಹಲಸಿನಕಟ್ಟೆ ಮುಂಬಯಿಯಲ್ಲಿ ಸ್ಥಾಪನೆಗೊಂಡಿರುವ ರಿಜಿಸ್ಟ್ರಾರ್ ಹಳೆ ವಿದ್ಯಾಥಿರ್sಗಳ ಸಂಘಕ್ಕೆ ನಮ್ಮ ಮತ್ತು ಕುಟುಂಬದ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.
ಹಳೆ ವಿದ್ಯಾಥಿರ್s ಸಂಘ ಸ್ಥಾಪಕ ಎ.ಪಿ ಕುಮಾರ್ ಭಂಡಾರಿ ಮಾತನಾಡಿ ಸಂಘ ಸ್ಥಾಪನೆ ಮಾಡುವ ಉದ್ದೇಶ, ಶಾಲೆಯಲ್ಲಿ ಕಲಿತ ಎಲ್ಲಾ ವಿದ್ಯಾಥಿರ್sಗಳನ್ನು ಒಗ್ಗೂಡಿಸುವುದು. ಶಾಲೆಯಲ್ಲಿ ಕಲಿಯುತ್ತಿರುವ ಹಾಗೂ ಮುಂದೆ ಕಲಿಯಲಿರುವ ವಿದ್ಯಾಥಿರ್sಗಳಿಗೆ ಶೈಕ್ಷಣಿಕ ಮತ್ತು ಆಥಿರ್sಕನೆರವು. ಶಾಲೆಯ ಕುಂದು ಕೊರೆತೆಗಳಿಗೆ ಸ್ಪಂದಿಸುವ ಉದ್ದೇಶ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಂದರ ಶೆಟ್ಟಿ , ಶೈಲೇಶ್ ಶೆಟ್ಟಿ, ಲೀಲಾಧರ ಪೂಜಾರಿ ಸೇರಿದಂತೆ ಅನೇಕ ಹಳೆ ವಿದ್ಯಾಥಿರ್sಗಳು ಉಪಸ್ಥಿತರಿದ್ದರು.