Thursday 25th, April 2024
canara news

ಕೆ.ಸಿ.ಎಫ್ ಶಾರ್ಜಾ ಝೋನ್ ವತಿಯಿಂದ ಗ್ರ್ಯಾಂಡ್ ‌ ಮೀಲಾದ್ ಸಮಾವೇಶ

Published On : 21 Nov 2019   |  Reported By : Rons Bantwal


ಶಾರ್ಜಾ: ಲೋಕ‌ ಪ್ರವಾದಿ ಮುಹಮ್ಮದ್‌ ಮುಸ್ತಫಾ ಸ.ಅ ರವರ 1494ನೇ ಜನ್ಮ ದಿನದ ಪ್ರಯುಕ್ತ, "ಹಬೀಬ್ (ಸ.ಅ.) ನಮ್ಮ ಜತೆಗಿರಲಿ" ಎಂಬ ಘೋಷವಾಕ್ಯದೊಂದಿಗೆ, ದಿನಾಂಕ 22-11-19 ರಂದು ಶುಕ್ರವಾರ ಸಂಜೆ 6 ಗಂಟೆಗೆ ಶಾರ್ಜಾದ ಖಾಸಿಮಿಯಾದಲ್ಲಿರುವ ರಯಾನ್ ಹೋಟೆಲಿನಲ್ಲಿ ಗ್ರ್ಯಾಂಡ್‌ ಮೀಲಾದ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಕೆ.ಸಿ.ಎಫ್ ಶಾರ್ಜಾ ವಲಯದ ಅಧ್ಯಕ್ಷರಾದ ಬಹು! ಅಬೂಸ್ವಾಲಿಹ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ, ಕೆ‌.ಸಿ.ಎಫ್ ಯು.ಎ.ಇ. ಶಿಕ್ಷಣ ವಿಭಾಗದ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿಯವರು ದುಆ ನೆರವೇರಿಸಲಿದ್ದಾರೆ. ಕೆ‌.ಸಿ.ಎಫ್ ರಾಷ್ಟ್ರೀಯ ಸಮಿತಿ ಯು.ಎ.ಇ ಇದರ ಅಧ್ಯಕ್ಷರಾದ ಬಹು! ಅಬ್ದುಲ್ ಜಲೀಲ್ ನಿಝಾಮಿಯವರು ಸಮಾರಂಭದ ಉದ್ಘಾಟನೆಗೈಯಲಿದ್ದು, ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷರಾದ ಯು.ಟಿ. ನೌಶದ್ ರವರು ಸ್ವಾಗತ ಭಾಷಣ ಮಾಡಲಿದ್ದಾರೆ. ಕೆ.ಸಿ.ಎಫ್ ಶಾರ್ಜಾ ವಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ರಜಬ್ ಮುಹಮ್ಮದ್ ಉಚ್ಚಿಲ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಬಹುಮಾನ್ಯ ಬದ್ರುಸ್ಸಾದಾತ್ ಅಸ್ಸಯ್ಯಿದ್ ಇಬ್ರಾಹಿಮ್ ಖಲೀಲ್ ಅಲ್ ಬುಖಾರಿ ತಂಙಲ್ ರವರು ಮುಖ್ಯ ಅತಿಥಿಯಾಗಿ ಆಗಮಿಸಿ ದುಆಕ್ಕೆ ನೇತೃತ್ವ ನೀಡಲಿದ್ದಾರೆ.
ಬಹು! ಮಸ್ಊದ್ ಸಖಾಫಿ ಗೂಡಲ್ಲೂರು ರವರು ಹುಬ್ಬುರಸೂಲ್ ಮುಖ್ಯ ಭಾಷಣ ಮಾಡಲಿದ್ದಾರೆ.

ಸಮಾರಂಭದಲ್ಲಿ ಶಾರ್ಜಾ ಝೋನ್ ತಂಡದಿಂದ ಆಕರ್ಷಕ ದಫ್ ಪ್ರದರ್ಶನ, ಮೌಲಿದ್ ಪಾರಾಯಣ, ಮನಮೋಹಕ ಬುರ್ದಾ ಆಲಾಪನೆ, ನಾತೇ ಶರೀಫ್ ನಡೆಯಲಿದ್ದು, ಸಮಾರಂಭದಲ್ಲಿ ಕೆ.ಸಿ.ಎಫ್ ಅಂತರಾಷ್ಟ್ರೀಯ ನೇತಾರರು, ಉಮಾರಾ ನಾಯಕರು, ಉಲಮಾಗಳು ಭಾಗವಹಿಸುವುದಾಗಿ ಸ್ವಾಗತ ಸಮಿತಿ ನೇತಾರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

*ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದವರು:*
ಬಹು ನೌಶಾದ್ ಯು.ಟಿ.(ಅಧ್ಯಕ್ಷರು ಮೀಲಾದ್ ಸ್ವಾಗತ ಸಮಿತಿ )
ಬಹು ಅಬೂಸ್ವಾಲಿಹ್ ಸಖಾಫಿ (ಕೆ.ಸಿ.ಎಫ್ ಶಾರ್ಜ ಝೋನ್ ಅಧ್ಯಕ್ಷರು)
ಬಹು ರಜಬ್ ಮಹಮ್ಮದ್ (ಕೆ.ಸಿ.ಎಫ್ ಶಾರ್ಜ ಝೋನ್ ಪ್ರಧಾನ ಕಾರ್ಯದರ್ಶಿ)
ಬಹು ಮುಹಮ್ಮದ್ ಹುಸೈನ್ ಇನೋಳಿ (ಕಾರ್ಯದರ್ಶಿ, ಕೆ.ಸಿ.ಎಫ್ ಶಾರ್ಜ ಝೋನ್ ಮೀಲಾದ್ ಸ್ವಾಗತ ಸಮಿತಿ)
ಬಹು ಕರೀಂ ಮುಸ್ಲಿಯಾರ್ (ಅಧ್ಯಕ್ಷರು , ಪ್ರಕಾಶನ ವಿಭಾಗ ಕೆ.ಸಿ.ಎಫ್ ಯು.ಎ.ಈ)
ಬಹು ತಾಜುದ್ಧೀನ್ ಅಮ್ಮುಂಜೆ (ಅಧ್ಯಕ್ಷರು ಮೀಡಿಯಾ ಸಮಿತಿ , ಮೀಲಾದ್ ಸ್ವಾಗತ ಸಮಿತಿ)




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here