ಮುಂಬಯಿ (ಕಾರ್ಕಳ), ನ.22: ರಾಜ್ಯ ಸಹಕಾರ ಮಹಾಮಂಡಳಿ, ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಜಿಲ್ಲಾ ಸಹಕಾರಿ ಯೂನಿಯನ್ ಸಹಕಾರ ಇಲಾಖೆ ವತಿಯಿಂದ ಕಳೆದ ಸೋಮವಾರ (ನ.18) ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾವೇಶದಲ್ಲಿ ಕಾರ್ಕಳ ತಾಲೂಕು ಇಲ್ಲಿನ ಪರಂಪರಾ ವಿವಿದೊದ್ದೇಶ ಸಹಕಾರ ಸಂಘಕ್ಕೆ `ಉತ್ತಮ ಸಹಕಾರ ಸಂಘ' ಪ್ರಶಸ್ತಿ ನೀಡಿ ಗೌರವಿಸಿತು.
ಎಸ್‍ಸಿಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್, ಉಡುಪಿ ಶಾಸಕ ಕೆ.ರಘುಪತಿ ಭಟ್ ಉಪಸ್ಥಿತರಿದ್ದು ಸಂಘದ ಅಧ್ಯಕ್ಷ ನವೀನ್‍ಚಂದ್ರ ಜೈನ್, ಸಿಇಓ ಗಂಗಾಧರ್.ಆರ್ ಪಣಿಯೂರು ಅವರಿಗೆ ಪ್ರಶಸ್ತಿ ಫಲಕ ಪ್ರದಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಹಕಾರ ಮಂಡಳದ ಅಧ್ಯಕ್ಷ ಎನ್.ಗಂಗಣ್ಣ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.