(ಚಿತ್ರ / ವರದಿ: ರೊನಿಡಾ ಮುಂಬಯಿ)
ಗುಜರಾತ್ (ಸೂರತ್), ನ.26: ಕರ್ನಾಟಕ ಸಮಾಜ ಸೂರತ್‍ವು ಬಹಳ ಅರ್ಥ ಪೂರ್ಣವನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನನ್ನನ್ನು ಈ ಕಾರ್ಯಕ್ರಮಕ್ಕೆ ಪ್ರೀತಿಯಿಂದ ಆಹ್ವಾನಿಸಿದ ತಮಗೆಲ್ಲರಿಗೂ ಅಭಿನಂದಸುತ್ತೇನೆ ಎಂದು ಕರ್ನಾಟಕ ಸಮಾಜ ಸೂರತ್ (ರಿ.) ಸಂಸ್ಥೆಯು ರವಿವಾರ(25.11.2018) ಮಧ್ಯಾಹ್ನ ಸೂರತ್ ನಗರದ ನಾನ್‍ಪುರಾ ಇಲ್ಲಿನ ಜೀವನ ಭಾರತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ವಸಂತ್ ಶೆಟ್ಟಿ ಮಾತನಾಡಿದರು.
Shashidhar Shetty Baroda Dr. Bharatkumar Polipu.
Manoj C.Poojary Radhakrishna Shetty.
Jayprakash Hegde
ಮುಖ್ಯ ಅತಿಥಿüಯಾಗಿ ಎಲ್‍ಎನ್‍ಟಿ ಸೂರತ್ ಉದ್ಯಮದ ಪ್ರಧಾನ ಪ್ರಬಂಧಕ ಅನಿಲ್ ಬೋಂಟಡ್ಕ ಉಪಸ್ಥಿತರಿದ್ದು, ಮೌಂಟ್ ಕಾರ್ಮೆಲ್ ಕಾಥೋಲಿ ಚರ್ಚ್ ನಾನ್ಪುರ-ಸೂರತ್ ಇದರ ಸಹಾಯಕ ಧರ್ಮಗುರು ರೆ| ಫಾ| ಮಾರ್ಕ್ ರೋಬರ್ಟ್ ಡಿಸೋಜಾ ಅವರು ದೀಪ ಪ್ರಜ್ವಲಿಸಿ ರಾಜ್ಯೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿದರು.
ರೆ| ಫಾ| ಮಾರ್ಕ್ ರೋಬರ್ಟ್ ಮಾತನಾಡಿ ಕನ್ನಡದ ಕುಲದೇವಿ ಕಾಪಾಡು ಬಾ ಎಂಬ ಕವಿತೆಯ ಮೂಲಕ ಕರ್ನಾಟಕ ರಾಜ್ಯೋತ್ಸವಕ್ಕೆ ಶುಭ ಹಾರೈಸಿದರು.ಕನ್ನಡ ರಾಜ್ಯೋತ್ಸವವನ್ನು ಆಚರಿಸಿದಾಗ ತಾಯಿ ಭುವನೇಶ್ವರಿಯನ್ನು ಕನ್ನಡಾಂಬೆ ಎಂದು ಪೂಜಿಸುತ್ತೇವೆ ಹಾಗೂ ಅವರು ಕರ್ನಾಟಕ ರಾಜ್ಯ ಧ್ವಜದ ವರ್ಣಗಳ ಅರ್ಥವನ್ನು ಬಹಳ ಅರ್ಥಪೂರ್ಣವಾಗಿ ತಿಳಿಸಿದರು.
ಅನಿಲ್ ಬೋಂಟಡ್ಕ ಮಾತನಾಡಿ ಸೂರತ್‍ನ ಎಲ್ಲಾ ತುಳು ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕ ರಾಜ್ಯೋತ್ಸವವನ್ನು ಇಂದು ಬರೀ ಕರ್ನಾಟಕದಲ್ಲಿ ಮಾತ್ರ ಆಚರಿಸಲಾಗುವುದಿಲ್ಲ, ಮುಂಬಯಿ, ಗುಜರಾತ್, ದುಬಾಯಿ, ಅಸ್ಟ್ರೇಲಿಯಾ ಸೇರಿದಂತೆ ಆನೇಕ ನಗರಗಳಲ್ಲಿ ಆಚರಿಸಲಾಗುವುದು. ಹಲವಾರು ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ತಮ್ಮ ತಾಯ್ನಾಡಿನ ಹೆಸರನ್ನು ಪಸರಿಸಿದ್ದಾರೆ.
ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳ್ನಾಡಿ ಕರ್ನಾಟಕ ಸಮಾಜ ಸೂರತ್ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ. ಸಂಘವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಹೊಂದುತ್ತಿದೆ. ಸಂಘದ ಸದಸ್ಯರ ಸಂಖ್ಯೆಯನ್ನು ಇನ್ನೂ ಬಲ ಪಡಿಸಲು ಹಾಗೂ ಸದಸ್ಯರಲ್ಲಿ ಉತ್ಸಾಹ ಬರಿಸಲು ಹಲವಾರು ಸಮಾಜ ಮುಖೇನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಸಂಘವು ತನ್ನ 9ನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಿ ದಶಮಾನೋತ್ಸವ ಸಂಭ್ರಮದಲ್ಲಿದೆ. ಸಂಘದ ಮುಂದಿನ ಮಹತ್ವವಾದ ಕಾರ್ಯವೆಂದರೆ ಭವನ ನಿರ್ಮಾಣ. ಇದಕ್ಕೆ ಎಲ್ಲಾ ಊರ ಪರವೂರ ತುಳು ಕನ್ನಡಿಗರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ ರಾಮಚಂದ್ರ ವಿ.ಶೆಟ್ಟಿ, ಉಪಾಧ್ಯಕ್ಷರುಗಳಾದ ಅಜಿತ್ ಎಸ್.ಶೆಟ್ಟಿ ಅಂಕ್ಲೇಶ್ವರ, ಪ್ರಭಾಕರ ಶೆಟ್ಟಿ ಕೋಸಂಬಾ, ಶಿವರಾಮ್ ಶೆಟ್ಟಿ, ಜಯಂತ್ ಶೆಟ್ಟಿ, ಸಾಧು ಪೂಜಾರಿ, ತಿಮ್ಮಪ್ಪ ಸಫಲಿಗ, ಐ.ವಿ ಶೆಟ್ಟಿ, ವಿಶ್ವನಾಥ ಪೂಜಾರಿ, ಸುನೀತಾ ಆರ್.ಶೆಟ್ಟಿ, ವನಿತಾ ಜೆ.ಶೆಟ್ಟಿ, ಸೌಮ್ಯ ಪಿ.ಪೂಜಾರಿ, ಜೊತೆ ಕಾರ್ಯದರ್ಶಿ ಶಾಂತಿ ಡಿ.ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ನಾಡಗೀತೆಯೊಂದಿಗೆ ಸಂಭ್ರಮ ಪ್ರಾರಂಭಗೊಂಡಿತು. ಗೌ| ಪ್ರ| ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ ಕ್ರೀಡಾಕೂಟದ ವಿಜೇತರ ಪಟಿ ವಾಚಿಸಿದರು. ರಂಜನಿ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರÀು. ಮನೋರಂಜನಾ ಕಾರ್ಯಕ್ರಮವಾಗಿ ಸೂರತ್‍ನ ಕಲಾವಿದರು ವೈವಿಧ್ಯಮಯ ನೃತ್ಯಾವಳಿಗಳನ್ನು ಸಾದರ ಪಡಿಸಿದರು. ್ರೀ ಗೀತಾಂಬಿಕಾ ಕೃಪಾ ಪೆÇೀಷಿತ ಯಕ್ಷಗಾನ ಮಂಡಳಿ ಅಸಲ್ಫಾ, ಘಾಟ್ಕೋಪರ್ ಮುಂಬಯಿ ಇವರಿಂದ ಶಬರಿಮಲೆ ಅಯ್ಯಪ್ಪ ಯಕ್ಷಗಾನ ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಪವಿತ್ರ ಬಿ.ಶೆಟ್ಟಿ ನಿರೂಪಿಸಿದರು.