ವೃದ್ಧಾಶ್ರಮದಲ್ಲಿನ ಬಂಧುಗಳನ್ನು ಸ್ಪಂದಿಸುವುದೇ ಭಾಗ್ಯ : ಶೋಭಾ ಬಂಗೇರ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ನ.24: ಅನಾಥರ ಬದುಕಿನಲ್ಲಿ ಆಶ್ರಯವಾಗುವುದು, ವೃದ್ಧಾಶ್ರಮದಲ್ಲಿರುವ ಹಿರಿಯರ ಸುಖದುಃಖಗಳಿಗೆ ಸ್ಪಂದಿಸುವುದು ಪುಣ್ಯಾಧಿ ಕಾಯಕವೇ ಸರಿ. ಇಂತಹ ಕಾರ್ಯಗಳು ಮಾನಸಿಕ ಪೀಡೆಯನ್ನು ಅನುಭವಿಸಿದ ಬಂಧು-ಭಗಿನಿಂiÀರ ಖುಷಿಯೊಂದಿಗೆ ಜೀವನದಲ್ಲಿ ಮುಂದುವರಿಯಲು ಪ್ರೇರಣೆಯನ್ನೂ ನೀಡುತ್ತವೆ ಎಂದು ಸಾಫಲ್ಯ ಸೇವಾ ಸಂಘ (ರಿ.) ಮುಂಬಯಿ ಇದರ ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ಬಂಗೇರ ಅಭಿಪ್ರಾಯ ಪಟ್ಟರು.
ಸಾಫಲ್ಯ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಾಫಲ್ಯ ಇವರ ಮಾರ್ಗದರ್ಶನ ಹಾಗೂ ಸಂಘದ ಮಹಿಳಾ ವಿಭಾಗದ ಸಾರಥ್ಯದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಮತ್ತು ಯುವ ವಿಭಾಗದ ಸದಸ್ಯರು ಕಳೆದ ಭಾನುವಾರ ಪೂರ್ವಾಹ್ನ ಉಪನಗರ ನವಿಮುಂಬಯಿ ಖಾರ್‍ಘರ್ ಅಲ್ಲಿನ ಗಿರಿಜಾ ವೆಲ್ಫೇರ್ ಅಸೋಸಿಯೇಷನ್‍ನ ಆಶ್ರಮಕ್ಕೆ ಭೇಟಿ ನೀಡಿ ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾಗುವಂತಹ ಹಾಗೆಯೇ ದೈನಂದಿನ ಆಹಾರ ಸಾಮಾಗ್ರಿಗಳನ್ನು ಮತ್ತು ಧನಸಹಾಯವನ್ನಿತ್ತು ಸೇವೆಯನ್ನೀಡಿದ್ದು ಇದೇ ಸಂದರ್ಭದಲ್ಲಿ ಶೋಭಾ ಬಂಗೇರ ತಿಳಿಸಿದರು.
ಬದುಕು ಬಂಗಾರವಾಗಬೇಕಾದರೆ ಶೃಂಗಾರದ ಅಗತ್ಯವಿಲ್ಲ. ಜೀವನದಲ್ಲಿ ಹತಾಶರಾದವರ ಕಣ್ಣೀರನ್ನು ಒರೆಸುವುದೇ ಸಮಾಜಕ್ಕೆ ನಾವು ನೀಡಬಲ್ಲಂತಹ ಶ್ರೇಷ್ಠವಾದ ಕೊಡುಗೆ. ಗಿರಿಜಾ ವೆಲ್ಫೇರ್ ಅಸೋಸಿಯೇಶನ್‍ನ ಸದಸ್ಯರಿಗೆ ಆಶ್ರಯದಾತನಾಗಿ, ಅನ್ನದಾತನಾಗಿ, ವಿದ್ಯಾರ್ಜನೆಗೆ ಬೇಕಾದ ಗುರುವಾಗಿ, ಅವರ ಬೆಳವಣಿಗೆಗೆ ಮಾರ್ಗದರ್ಶಕನಾಗಿ ನಿಂತಿರುವ ಕೊಡುಗೈದಾನಿ ವಸಂತ್ ಕುಂಜಾರ್ ಇವರು ಸಂಸ್ಥೆಯ ಸದಸ್ಯರ ದೃಷ್ಟಿಯಲ್ಲಿ ಧರೆಗಿಳಿದು ಬಂದಂತಹ ಪ್ರತ್ಯಕ್ಷ ದೇವರು ಎಂದರೂ ತಪ್ಪಾಗಲಾರದು. ಜನತಾ ಸೇವೆಯೇ ಜನಾರ್ದನನ ಸೇವೆ ಎಂದು 15 ವರ್ಷಗಳಿಂದ ನಂಬಿ ನಡೆಯುತ್ತಿರುವ ಇವರ ನಿರಂತರ ಸೇವೆಯಲ್ಲಿ ಅಡಕವಾಗಿರುವ ಪ್ರೀತಿ, ಪ್ರೇಮ, ವಾತ್ಸಲ್ಯ ಸದಾ ನೆಲೆಸಿದ್ದು, ಇವರಿಗೆ ಇನ್ನಷ್ಟು ನಿಸ್ವಾರ್ಥ ಸೇವೆ ಮಾಡುವಂತಹ ಸೌಭಾಗ್ಯವನ್ನು ಭಗವಂತನು ಕರುಣಿಸಲಿ ಎಂದೂ ಉಪಸ್ಥಿತರ ಪರವಾಗಿ ಶೋಭಾ ಬಂಗೇರ ಹಾರೈಸಿದರು.
ನಂತರ ಸಂಘದ ಹಿರಿಯ ಸದಸ್ಯ ಕೊಗ್ಗ ಸಾಲಿಯಾನ್ ದಂಪತಿ ವಿದ್ಯಾರ್ಜನೆಗೆ ಬೇಕಾದಂತಹ ಸಾಮಾಗ್ರಿಗಳನ್ನು ಮಕ್ಕಳಿಗೆ ಹಂಚಿದರು ಹಾಗೂ ಗೀತಾ ಶ್ರೀಯಾನ್ ವೃದ್ಧಾಪ್ಯದಲ್ಲಿರುವವರಿಗೆ ವೈದ್ಯಕೀಯ ಸೌಲಭ್ಯಕ್ಕೆ ಬೇಕಾದ ಸಾಮಗ್ರಿಗಳನ್ನು (Piಟಟ ಔಡಿgಚಿಟಿiseಡಿ) ಹಸ್ತಾಂತರಿಸಿದರು. ಮಕ್ಕಳನ್ನು ಕಲಾಪ್ರೇಮಿಗಳನ್ನಾಗಿ ಪರಿವರ್ತಿಸಿ,ಅವರ ಬದುಕಿನಲ್ಲಿ ಇನ್ನಷ್ಟು ಸಂತಸ ತರಲೋಸುವ ಆರ್ಟ್ ಝೋನ್‍ನ ರೇಶ್ಮಾ ಕುಂದರ್ ಅಲ್ಲಿನ ಮಕ್ಕಳಿಗೆ ಕಲೆಯ ಕುಸುರಿ ಕೆಲಸದ (ಆoಣ ಂಡಿಣ) ಬಗ್ಗೆ ತರಬೇತಿ ನೀಡಿದರು.
ಸಂಘದ ಸಕ್ರೀಯ ಸದಸ್ಯ ಕಿರಣ್ ಸಫಲಿಗ ಹಾಗೂ ಇತರ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಗೌರವ ಕೋಶಾಧಿಕಾರಿ ಹೇಮಂತ್ ಬಿ.ಸಫಲಿಗ, ಕಾರ್ಯಕಾರಿ ಸಮಿತಿಯ ರವಿಕಾಂತ್ ಸಫಲಿಗ, ಸಚಿನ್ ಸಾಲ್ಯಾನ್, ವಿಮಲಾ ಎಸ್.ಬಂಗೇರಾ, ಶೋಭಾ ಕರ್ಕೇರ, ಪದ್ಮಿನಿ ಬಂಗೇರಾ, ಮಹಿಳಾ ವಿಭಾಗದ ರತಿಕಾ ಸಫಲ್ಯಾ, ಕಲಾ ಬಂಗೇರ, ಅನುಸೂಯ ಸೋಮೇಶ್ವರ್, ಸುಲೋಚನಾ ಸಫಲಿಗ, ಲೋಲಾಕ್ಷಿ ಬಂಗೇರ, ಪ್ರತಿಭಾ ಹೇಮಂತ್, ಯುವ ವಿಭಾಗದ ಅಶ್ವಿನಿ ಸಫಲಿಗ, ದಿವ್ಯ ಸಫಲ್ಯ, ಸ್ನೇಹ ಕುಂಜತ್ತೂರು, ಸದಸ್ಯರಾದ ಪದ್ಮನಾಭ ಸೋಮೇಶ್ವರ್, ವಿಮಲಾಕ್ಷಿ ಬಂಗೇರ, ಕುಸುಮಾ ಬಂಗೇರ, ವಿೂನಾಕ್ಷಿ ಸಫಲಿಗ, ಜಯಶ್ರೀ ಸಫಲಿಗ ಪಾಲ್ಗೊಂಡಿದ್ದರು.
ದೇಶಾದ್ಯಂತ ಇರುವ ಎಲ್ಲಾ ಅನಾಥ ಮಕ್ಕಳಿಗೆ ವಿದ್ಯಾಭ್ಯಾಸ ಲಭಿಸಿ, ಅವರ ಭವಿಷ್ಯ ಉಜ್ವಲವಾಗಲಿ, ಜೀವನದ ಸಂಧ್ಯಾ ಕಾಲದಲ್ಲಿ ಪ್ರೀತಿಯ ಆಸರೆ ಸಿಗದೆ ಯಾತನೆ ಅನುಭವಿಸುವ ವೃದ್ಧರು ನೆಮ್ಮದಿಯ ಬಾಳನ್ನು ಸಾಗಿಸುವಂತಾಗಲಿ ಎಂಬುದಾಗಿ ಉಪಸ್ಥಿತರು ಒಮ್ಮತದ ಅಭಿಪ್ರಾಯಪಟ್ಟರು.
ಸಾಫಲ್ಯ ಸೇವಾ ಸಂಘವು ತನ್ನ 76ನೇ ವಾರ್ಷಿಕ ಸಂದರ್ಭದಲ್ಲಿ ಸಮಾಜಕ್ಕೆ ಪೂರಕವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಾ ಬರುತ್ತಿರುವುದನ್ನು ಸಂಘದ ಗೌ| ಪ್ರ| ಕಾರ್ಯದರ್ಶಿ ಭಾಸ್ಕರ್ ಟಿ.ಸಫಲಿಗ ಸರ್ವರನ್ನು ಸ್ವಾಗತಿಸಿದರು. ಸಚಿನ್ ಸಾಲ್ಯಾನ್ ಅವಕಾಶಕ್ಕಾಗಿ ಸರರನ್ನು ವಂದಿಸಿದರು.