ಮುಂಬಯಿ (ಕಾಸರಗೋಡು), ನ.25: ಕಳೆದ ಶನಿವಾರ ಕಾಸರಗೋಡು ಇಲ್ಲಿನ ಕ್ಯಾಪಿಟಲ್ ಇನ್ ಸಭಾಗೃಹದಲ್ಲಿ ನಡೆಸಲ್ಪಟ್ಟ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕೈರಾಳಿ ಪ್ರಕಾಶನದ ಜಂಟಿ ಆಶ್ರಯದಲ್ಲಿ ನಡೆದ ಗಡಿನಾಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಂಬಯಿನ ಹಿರಿಯ ಹೊಟೇಲು ಉದ್ಯಮಿ, ಸಮಾಜ ಸೇವಕ ಡಾ. ಶಂಕರ್ ಶೆಟ್ಟ್ಟಿವಿರಾರ್ ಮತ್ತು ನಾಡಿನ ಹಿರಿಯ ಬ್ಯಾರಿ ಭಾಷಾ ಕವಿ, ಚಲನಚಿತ್ರ ನಟ ಮುಹಮ್ಮದ್ ಬಡ್ಡೂರ್ ಇವರಿಗೆ `ಗಡಿನಾಡ ರಾಜ್ಯೋತ್ಸವ' ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.