ಸಂಘಗಳಿಂದ ನವಪೀಳಿಗೆಯಲ್ಲಿ ಭಾಷೆ-ಸಂಸ್ಕೃತಿಗಳ ಅರಿವು ಸಾಧ್ಯ-ಹರೀಶ್ ಎನ್.ಶೆಟ್ಟಿ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ ನ.25: ಮಲಾಡ್ ಕನ್ನಡ ಸಂಘದ ಯುವ ವಿಭಾಗದ ವತಿಯಿಂದ ಚೆಸ್ ಮತ್ತು ಕೇರಮ್ ಟೂರ್ನಮೆಂಟ್ ಮಲಾಡ್ ಕನ್ನಡ ಸಂಘದ ವತಿಯಿಂದ ಕಳೆದ ಶನಿವಾರ (ನ.24) ವಾರ್ಷಿಕ ಚೆಸ್ ಮತ್ತು ಕೇರಮ್ ಟೂರ್ನಮೆಂಟ್ ಕಾರ್ಯಕ್ರಮ ಸಂಘದ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಪೂಜಾರಿ ಹಾಗೂ ಸಂಘದ ಪದಾಧಿಕಾರಿಗಳೊಂದಿಗೆ ಉದ್ಘಾಟಿಸಿದರು.
ಸಂಘದ ಕಚೇರಿಯ ಶ್ರೀ ರಮಾನಾಥ ಎಸ್. ಪಯ್ಯಡೆ ಸ್ಮಾರಕ ಸಭಾಗೃಹದಲ್ಲಿ ಸೂರಪ್ಪ ಕುಂದರ್ ಉಸ್ತುವಾರಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪರಿಸರದ ಮಕ್ಕಳು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ದಿನಪೂರ್ತಿ ಜರಗಿದ ಈ ಕಾರ್ಯಕ್ರಮದಲ್ಲಿ ಯುವ ವಿಭಾಗದ ಕಾರ್ಯದರ್ಶಿ ಸುಂದರ ಪೂಜಾರಿ ವಾಲ್ಪಾಡಿ, ರಂಜನ್ ಪೂಜಾರಿ, ದೀಕ್ಷಿತ್ ಪೂಜಾರಿ, ಶ್ರುತಿ ಪೂಜಾರಿ ಮೊದಲಾದವರು ಕಾರ್ಯಕ್ರಮ ಸುಗಮಗೊಳ್ಳುವಲ್ಲಿ ಯಶಸ್ವಿಯಾದರು.
ಸಂಜೆ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಿದ್ದು ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಸ್ಪರ್ಧೆಯನ್ನು ಎದುರಿಸುವ ಎದೆಗಾರಿಕೆ ಮಕ್ಕಳಿಗೆ ಎಳೆತನದಲ್ಲೇ ರೂಢಿಗೊಳಿಸಬೇಕು. ಪಾಲಕರು ಮಕ್ಕಳನ್ನು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಸಂಘ ಸಂಸ್ಥೆಗಳಲ್ಲಿ ಜರಗುವ ಕಾರ್ಯಕ್ರಮಗಳಲ್ಲಿ ಯುವ ಪೀಳಿಗೆ ಭಾಗವಹಿಸಿದಾಗ ಅವರಿಗೆ ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಅರಿವಾಗುತ್ತದೆ. ಅದರಿಂದ ನಮ್ಮ ಭಾಷೆ, ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯವಾಗಬಹುದು. ನಮ್ಮ ಸಂಘದ ವತಿಯಿಂದ ಸ್ಥಾಪಿಸಿದ ಕನ್ನಡ ಕಲಿಕಾ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪಾಲಕರು ಪೆÇ್ರೀತ್ಸಾಹಿಸಬೇಕು ಎಂದÀು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಹರೀಶ್ ಶೆಟ್ಟಿ ಕರೆಯಿತ್ತರು.
ಯುವ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಪೂಜಾರಿ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಬಾಂಧವರು ಪಾಲ್ಗೊಂಡು ಕಾರ್ಯಕ್ರಮ ಯಶಸ್ಸು ಗೊಳಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು.
ಉಪಸ್ಥಿತ ಗಣ್ಯರುಉ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಣೆ ನಡೆಸಲಾಯಿತು. ಕಾರ್ಯಕ್ರಮವನ್ನು ಕೊಡುಗೈ ದಾನಿಗಳಾದ ಶೇಖರ ಪೂಜಾರಿ ಹಾಗೂ ಹಿಲೆರಿ ಲೋಬೋ ಅವರು ಪ್ರಾಯೋಜಿಸಿದ್ದು, ಸಂಘದ ಕಾರ್ಯದರ್ಶಿ ಶಂಕರ ಡಿ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಚೆಸ್ ಸ್ಪರ್ಧೆ: ಪ್ರಥಮ-ವಿಜ್ಞೇಶ್ ಭಂಡಾರಿ, ದ್ವಿತೀಯ-ಭರತ್ ಮೋಹನ್ ರೈ, ಕ್ಯಾರಂ ಸ್ಪರ್ಧೆ (ಮಕ್ಕಳು15 ವರ್ಷಕ್ಕಿಂತ ಕೆಳಗೆ) ಪ್ರಥಮ-ನಿಧಿ ಪೂಜಾರಿ, ದ್ವಿತೀಯ-ಜಯೇಶ್ ಶೆಟ್ಟಿ, ತೃತೀಯ-ನಿಶಾ ಪೂಜಾರಿ, ಕ್ಯಾರಂ ಸ್ಪರ್ಧೆ (ಮಹಿಳೆಯರು) ಪ್ರಥಮ-ಅಖಿಲಾ ಆಚಾರ್ಯ, ದ್ವಿತೀಯ-ಶಶಿ ಆಚಾರ್ಯ, ತೃತೀಯ-ಶ್ರುತಿ ಪೂಜಾರಿ, ಕ್ಯಾರಂ ಸ್ಪರ್ಧೆ (15 ವರ್ಷಕ್ಕಿಂತ ಮೇಲ್ಪಟ್ಟವರು) ಪ್ರಥಮ-ಸುರೇಂದ್ರ ಆಚಾರ್ಯ, ದ್ವಿತೀಯ -ದೀಕ್ಷಿತ್ ಪೂಜಾರಿ, ಕ್ಯಾರಂ ಡಬಲ್ಸ್: ಪ್ರಥಮ-ದೀಕ್ಷಿತ್ ಪೂಜಾರಿ, ವಿಘ್ನೇಶ್ ಭಂಡಾರಿ, ದ್ವಿತೀಯ-ರಂಜನ್ ಪೂಜಾರಿ ಮತ್ತು ಸರೋಜಿನಿ ಪೂಜಾರಿ ವಿಜೇತರೆಣಿಸಿದರು.