ಸಹೃದಯಿ ದಾನಿಗಳು, ಸಂಘ-ಸಂಸ್ಥೆಗಳಿಂದ ಸಹಯಾಸ್ತಕ್ಕೆ ಮನವಿ
(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)
ಮುಂಬಯಿ, ನ.26: ಮಂಗಳೂರು ತಾಲೂಕು ಕಿನ್ನಿಗೋಳಿ ಇಲ್ಲಿನ ಗುತ್ತಕಾಡು ಮಾರ್ಗವಾಗಿ ಹೋದಾಗ, ಎಳತ್ತೂರು ಗ್ರಾಮದಲ್ಲಿ ಇಸ್ರೋಜಿ ಕೋಡಿ ಎಂಬ ಒಂದು ಪುಟ್ಟ ಊರಿದೆ. ಆ ಊರಿನ ಮಹಾತಾಯಿಯೇ ದೇವಕಿ. ಕಡು ಬಡವರು ಆಗಿರುವ ದೇವಕಿ ಅಮ್ಮ ನವರಿಗೆ ಒಂದು ಚಿಕ್ಕ ಮನೆ ಮಾತ್ರ ಇರುವುದು, ಗಂಡನ ಆರೋಗ್ಯ ಸರಿಯಿಲ್ಲದೆ ಮನೆಯಲ್ಲೇ ಮಲಗಿದ್ದರೆ, ನಾಲ್ಕು ಮಕ್ಕಳಲ್ಲಿ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು. ಕಷ್ಟಪಟ್ಟು ಬೇರೆಯವರ ಮನೆ ಕೆಲಸ ಮಾಡಿ ಸಾಲ ಮಾಡಿ ಈ ತಾಯಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಕೊಟ್ಟಿರುತ್ತಾರೆ. ದೊಡ್ಡ ಮಗಳನ್ನು ದೂರದ ದಾವಣಗೆರೆಗೆ ಮದುವೆ ಮಾಡಿ ಕೊಟ್ಟಿದ್ದು, ಮದುವೆ ಆದ ಸುಮಾರು ನಾಲ್ಕು ವರ್ಷಗಳಲ್ಲಿ ಗಂಡ ಕಾಯಿಲೆಯಿಂದ ಮರಣ ಹೊಂದಿದ್ದಾರೆ. ಮತ್ತೊಂದು ಮಗಳನ್ನು ಕಾರ್ಕಳಕ್ಕೆ ಮದುವೆ ಮಾಡಿ ಕೊಟ್ಟಿದ್ದು ಆಕೆಗೆ ಕೀರ್ತನ ಎಂಬ ಎಂಟು ವರ್ಷದ ಹೆಣ್ಣು ಮಗುವಿದೆ. ಆ ಮಗು ತನ್ವಿ ವಿಶೇಷ ಚೇತನ (ಬುದ್ಧಿಮಾಂದ್ಯ). ಒಬ್ಬ ಮಗನಿಗೆ ಮದುವೆ ಆಗಿದ್ದು, ಈತನಿಗೆ ಇಬ್ಬರು ಮುದ್ದಾದ ಮಕ್ಕಳು ಅದರಲ್ಲಿ 11 ವರ್ಷದ ಹೆಣ್ಣು ಮಗುವಿಗೆ ಹೃದಯದ ಕಾಯಿಲೆ, ಸುಮಾರು ಲಕ್ಷಾಂತರ ಹಣ ಖರ್ಚು ಮಾಡಿ ಈಗ ಸ್ವಲ್ಪ ಗುಣ ಹೊಂದಿದೆ. ಇನ್ನೊಂದು ಗಂಡುಮಗು ಚರಣ್ ತಲೆಯ ಮೆದುಳಿನ ತೊಂದರೆ ಇರುವುದರಿಂದ ಖರ್ಚು ಮಾಡಲು ಹಣ ಇಲ್ಲದೆ ಪರದಾಡುವ ಪರಿಸ್ಥಿತಿ ಬಂದಿದೆ. ಮತ್ತೊಬ್ಬ ಗಂಡು ಮಗುವನ್ನು ಸ್ವತಃ ಸಾಕಿ, ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಆದುದರಿಂದ ದೇವಕಿಅಮ್ಮನ ಕಷ್ಟ ಮುಗಿದಂತಿಲ್ಲ.
ಒಟ್ಟಾರೆ ಈ ಕುಟುಂಬಕ್ಕೆ ಕಷ್ಟದ ಮೇಲೆ ಕಷ್ಟಗಳ ಬರೆ, ಬದುಕು ಸಾಗಿಸಲಾಗ ಹೊರೆ. ಇಷ್ಟೆಲ್ಲವನ್ನೂ ಈ ವರೆಗೆ ಸಹಿಸಿ ಬಾಳಿದ ದೇವಕಿ ಇದೀಗ ಮಾನಸಿಕ ಮತ್ತು ದೈಹಿಕವಾಗಿ ಬಳಲಿ ಕುಸಿದು ಬಿದ್ದು ಸ್ವತಃ ತಾನೇ ಅನಾರೋಗ್ಯ ಪೀಡಿತೆಯಾಗಿದ್ದಾರೆ. ಇದನ್ನರಿತ ಪಕ್ಕದ ಮನೆಯವರು ಚಿಕಿತ್ಸೆಗಾಗಿ ಮಂಗಳೂರು ಇಲ್ಲಿನ ಎ.ಜೆ ಹಾಸ್ಪಿಟಲ್‍ಗೆ ದಾಖಲಿಸಿದ್ದಾರೆ. ಹಿಗೇ ದೇವಕಿಅಮ್ಮನ ಕಷ್ಟದ ಕಥೆ ಇಲ್ಲಿಗೂ ಮುಗಿಯಲಿಲ್ಲ ಇವರನ್ನು ತಪಾಸನೆ ಮಾಡಿ ಚಿಕಿತ್ಸೆ ಮಾಡುತ್ತಿರುವ ವೈದ್ಯರು ದೇವಕಿ ಅವರ ಹೃದಯದಲ್ಲಿ ಎರಡು ರಂಧ್ರಗಳು ಇವೆ. ತಕ್ಷಣ ಆಪರೇಷನ್ ಮಾಡ ಬೇಕು ಇಲ್ಲದಿದ್ದರೆ ಇವರ ಜೀವಕ್ಕೆ ಆಪತ್ತು ಕಟ್ಟಿಟ್ಟಬುತ್ತಿ ಅಂದಿದ್ದಾರೆ.
ಮಗ ಪೂನಾದಲ್ಲಿ ಹೋಟೆಲ್ ಕೆಲಸದಲ್ಲಿದ್ದು, ಈಗ ತಾಯಿಯ ಆರೈಕೆಗಾಗಿ ಕೆಲಸ ಬಿಟ್ಟು ಊರಿಗೆ ಬಂದಿದ್ದಾರೆ. ಈಗ ಅವರಿಗೂ ದುಡಿಮೆ ಇಲ್ಲದ ಕಾರಣ ಕುಟುಂಬ ಬಾರೀ ಸಂಕಷ್ಟದಲ್ಲಿದೆ. ಇದೀಗಲೇ ಮುಂಬಯಿನ ಹಿರಿಯ ಹೊಟೇಲು ಉದ್ಯಮಿ, ಸಮಾಜ ಸೇವಕ ಡಾ| ಶಂಕರ್ ಶೆಟ್ಟ್ಟಿ ವಿರಾರ್ ಮತ್ತು ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ ಸಂಘದ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ ತಮ್ಮ ದೇಣಿಗೆಯನ್ನು ನೀಡಿ ಕುಟುಂಬಕ್ಕೆ ಸಂತೈಸಿದ್ದಾರೆ. ದೇವಕಿ ಅವರ ಆಪರೇಷನ್ ಖರ್ಚು ಬಹಳಷ್ಟು ಇರುವ ಕಾರಣ, ಉದಯ ಶೆಟ್ಟಿ ಅವರೂ ಸಹೃದಯಿ ದಾನಿಗಳ ಸಹಾಯಸ್ತ ಕೋರಿದ್ದಾರೆ.
ಸಹೃದಯಿ ದಾನಿಗಳು, ಸಂಘಸಂಸ್ಥೆಗಳು ದಯವಿಟ್ಟು ಸಹಯಾಸ್ತ ಚಾಚಿ ಒಂದೇ ಕುಟುಂಬದ ಹತ್ತಾರು ಜನರ ಬಾಳನ್ನು ಬೆಳಗಿಸುವರೇ ವಿನಂತಿ. ನೀವು ಕೊಡುವ ನೂರು ರೂಪಾಯಿ ಕೂಡಾ ಈ ಕುಟುಂಬಕ್ಕೆ ಅತ್ಯಮೂಲ್ಯ ಆಗಿರುತ್ತದೆ. ದೇವರೇ.... ಕಷ್ಟ ಕೊಡುವುದಿದ್ದರೆ ಯಾವೊತ್ತೂ ಒಂದೇ ಮನೆಗೆ ಮಾತ್ರ ಕೊಡದಿರಿ ಎಂದು ಪ್ರಾಥಿರ್üಸಿ ಈ ಕುಟುಂಬಕ್ಕೆ ಮತ್ತೆ ಪುನಶ್ಚೇತನ ಕರುಣಿಸುವರೇ ಕೋರಿಕೆ. ದಾನಿಗಳು ಸಂಪರ್ಕಿಸ ಬೇಕಾದವರು
DEVAKI, No 2-27, Isroji Kodi, Yelatthur Post & Vilage, Kinnigoli, Mangalore Taluk, D.K, Karnataka, India - 574150. Mbl: 9730526860 Raghavendra (Son).
Bank A/C: 0635108065581 (Canara Bank, Kinnigoli) IFSC: CNRB0000635.