ಕನ್ನಡದ ಉಳಿವು ಕನ್ನಡಿಗರ ಜೀವಾಳವಾಗಲಿ-ಡಾ| ಬಸವರಾಜ ಪಾಟೀಲ್
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ನ.27: ಹೊರನಾಡ ಕನ್ನಡಿಗರಾಗಿದ್ದು ಕರ್ಮಭೂಮಿಯಲ್ಲಿ ಕನ್ನಡದ ತೇರನ್ನೆಳೆದು ಕನ್ನಡದ ದೀಪವನ್ನಚ್ಚುವ ಇಲ್ಲಿನ ಕನ್ನಡಿಗರೇ ಅಚ್ಚಕನ್ನಡಿಗರು. ನೀವುಗಳೇ ಕನ್ನಡ ಸಂಸ್ಕೃತಿಯ ಪ್ರತೀಕರು. ನಿಮ್ಮೆಲ್ಲರದ್ದು ನಿಜಾರ್ಥದ ಕನ್ನಡಾಭಿಮಾನ ಆಗಿದೆ. ತಮ್ಮೆಲ್ಲರಿಂದ ಕನ್ನಡದ ಉಳಿವು ಸದಾ ಜೀವಾಳವಾಗಲಿ ಎಂದು ಲಕ್ಷ್ಮೀ ಇನ್ಸಿಟ್ಯೂಟ್ ಆಫ್ ಟೆಕ್ನಾಲಾಜಿ ಇದರ ನಿರ್ದೇಶಕ ಡಾ| ಬಸವರಾಜ ಪಾಟೀಲ್ ಆಶಯ ವ್ಯಕ್ತಪಡಿಸಿದರು.
ಕನ್ನಡ ಸೇವಾ ಸಂಘ ಮತ್ತು ಕನ್ನಡ ಮಹಿಳಾ ಸಂಘ ದಾದ್ರ ಮತ್ತು ನಗರ ಹವೇಲಿ ಜೊತೆಗೂಡಿ ಕಳೆದ ರವಿವಾರ (ನ.24) ಗುಜರಾತ್ ರಾಜ್ಯದ ಶಿಲ್ವಾಸಾ ನಗರದ ಗಾರ್ಡನ್ ಸಿಟಿ ಹಾಲ್‍ನಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮದೊಂದಿಗೆ ಸಂಘದ ವಾರ್ಷಿಕೋತ್ಸವ ಆಚರಿಸಿದ್ದು, ಸಮಾರಂಭದಲ್ಲಿ ಬಸವರಾಜ ಪಾಟೀಲ್ ಮುಖ್ಯ ಅತಿಥಿsಯಾಗಿದ್ದು ದೀಪ ಬೆಳಗಿಸಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸೇವಾ ಸಂಘ ಅಧ್ಯಕ್ಷ ಡಾ| ಗಣೇಶ್ ಕಮಲಾಕರ ವೇರ್ಣೆಕರ್ ಮತ್ತು ಕನ್ನಡ ಮಹಿಳಾ ಸಂಘ ಅಧ್ಯಕ್ಷೆ ದಾಕ್ಷಾಯಣಿ ರಾವ್ ಇವರ ಸಾರಥ್ಯದಲ್ಲಿ ನೇರವೇರಿದ ಕಾರ್ಯಕ್ರಾದಲ್ಲಿ ಹೆಸರಾಂತ ಚುಟುಕು ಸಾಹಿತಿ ಹಾಗೂ ಕಲಬುರ್ಗಿ ಪ್ರಾಧ್ಯಾಪಕ ಡಾ| ರಾಧಾ ಕೃಷ್ಣ ನಾಯರ್ ಅತಿಥಿsಯಾಗಿ ಉಪಸ್ಥಿತರಿದ್ದು, ಕಾರ್ಯಕ್ರಮ ಆಯೋಜಿಸಿದ ಎಲ್ಲರಿಗೂ ಶುಭಾಶಯ ನೀಡಿ ಹೊರನಾಡÀಲ್ಲಿ ಕನ್ನಡದ ಕಂಪು ಪಸರಿಸುವ ಕನ್ನಡಿಗರ ಮನಸ್ಸುಗಳನ್ನು ಕಂಡು ಮನ ಪುಲಕಿತಗೊಂಡಿತು ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸೇವಾ ಸಂಘದ ಬುನಾದಿ ಹಾಕಿಕೊಟ್ಟ ಮಹಾನೀಯರಾದ ಶ್ಯಾಮರಾಜ ಶೆಟ್ಟಿ, ಲೊರೆನ್ಸ್ ಸುವಾರಿಸ್, ಸುರೇಶ್ ಕೋಟ್ಯಾನ್, ಗೋವಿಂದ ಶೆಟ್ಟಿ, ದಿವಾಕರ ಶೆಟ್ಟಿ, ಕಿಶೋರ ನಿಂಜೂರ, ದಿ| ಎಂ.ಜೆ ರಾವ್ (ಪರವಾಗಿ ಧರ್ಮಪತ್ನಿ ದಾಕ್ಷಾಯಿನಿ ರಾವ್), ಎಸ್.ಆಚಾರ್ಯ, ಭಾಸ್ಕರ ಭಂಡಾರಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಹಾಗೂ ಸ್ಥಾನೀಯ ಪ್ರತಿಭಾನ್ವಿತ ವಿದ್ಯಾಥಿರ್sಗಳಿಗೆ ಅತಿಥಿsಗಳು ಪ್ರತಿಭಾ ಪುರಸ್ಕಾರ ಪ್ರದಾನಿಸಿ ಹಾಗೂ ಒಳಾಂಗಣ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಿ ಶುಭಾರೈಸಿದರು.
ದಾದ್ರ, ನಗರ ಹವೇಕಿ, ವಾಪಿ, ಉಮರ್‍ಗಾಂ, ದಮನ್ ಸೇರಿದಂತೆ ಸುಮಾರು 500ಕ್ಕೂ ಮಿಕ್ಕಿದ ತುಳು ಕನ್ನಡಿಗÀರು ಹಾಜರಿದ್ದು, ಸ್ಥಾನೀಯ ಅನಿವಾಸಿ ಕನ್ನಡಿಗರ ಮಕ್ಕಳು, ಕನ್ನಡ ನಾಡಿನ ಹಾಡು, ನೃತ್ಯಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ಡಾ| ಗಣೇಶ್ ವೇರ್ಣೆಕರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಮಮತಾ ಅರುಣ್ ಕಾರ್ಯಕ್ರಮ ನಿರೂಪಿಸಿದರು. ವೇಕಟೇಶ ಪೂಜಾರಿ ಧನ್ಯವಾದಗೈದರು.