ಘಟಕಗಳ ಸಾಧಕರು-ಸಂಚಾಲಕರಗಳಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ನ.26: ವಿಶ್ವದ ಬೇರೆ ಮೂಳೆಗಳಲ್ಲಿ ಸಮಾಜದ ವಿಕಾಸಕಾಗಿ ಘಟಕಗಳನ್ನು ಸ್ಥಾಪಿತ ಜಯಂಟ್ಸ್ ವೆಲ್ಫೇರ್ ಫೌಂಡೇಶನ್ ಮುಂಬಯಿ ತನ್ನ ಘಟಕ 1, 2 ಮತ್ತು 3ಎ ಘಟಕಗಳ ಸಮ್ಮೇಳನವನ್ನು ಕಳೆದ ಆದಿತ್ಯವಾರ ಗುಜರಾತ್ ರಾಜ್ಯದ ದಮನ್ ಇಲ್ಲಿನ ಹೊಟೇಲ್ ಹನಿಗಾರ್ಡನ್ ಸಭಾಗೃಹದಲ್ಲಿ ನೆರವೇರಿಸಿತು.
ಘಟಕ 3ಎ ಇದರ ಅಧ್ಯಕ್ಷ ಅಶೋಕ್ ಭಾರೋತ್ ಅಧ್ಯಕ್ಷತೆÉ ಹಾಗೂ ಘಟಕದ ಉಪಾಧ್ಯಕ್ಷ, ತುಳುನಾಡ ಐಸಿರಿ ವಾಪಿ ಅಧ್ಯಕ್ಷ ಬಾಲಕೃಷ್ಣ ಎಸ್. ಶೆಟ್ಟಿ ಅವರ ಸಂಚಾಲಕತ್ವದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಲ್ಪಟ್ಟ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ, ಸನ್ಮಾನ, ಗೌರವ ಸಮರ್ಪಣಾ ಕಾರ್ಯಕ್ರಮ ನಡೆಸಲಾಯಿತು. ಉಪಸ್ಥಿತ ಪದಾಧಿಕಾರಿಗಳು, ಗಣ್ಯರು ವಿವಿಧ ಘಟಕದ ಸಾಧಕರು, ಸಂಚಾಲಕರÀನ್ನು ಶಾಲು ಹೊದೆಸಿ ಫಲಪುಷ್ಪ, ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು.
ಈ ಸಂಘಟನೆಯು ವಿದ್ಯೆ, ಲಘು ಕೈಗಾರಿಕೆ, ಸ್ವಚ್ಛ ಭಾರತ ಅಭಿಯಾನ, ಬಡವರಿಗೆ ಧನ ಸಹಕಾರ ನೀಡುತ್ತಿದ್ದರೂ ಎಂದಿಗೂ ಪ್ರಚಾರ ಬಯಸದೆ ನಿರಂತರ 50 ವರ್ಷಗಳಿಂದ ಜನಸಾಮಾನ್ಯರು ಮೆಚ್ಚುವಂತ ಕಾರ್ಯಕ್ರಮ ಸಮಾಜಕ್ಕೆ ನೀಡಿದೆ.ಮುಂದೆಯೂ ಇದೆ ರೀತಿ ಸ್ಪಂದಿಸಲಿದೆ. ಹಿರಿಯರು, ಗಣ್ಯರು ಮನದಾಳದ ಭಾವನೆಗಳಿಗೆ ಸ್ಪಂದಿಸ ಬೇಕು ಎಂದು ಅಶೋಕ್ ಭಾರೋತ್ ತಿಳಿಸಿದರು.
ವಿಶ್ವ ಮಟ್ಟದ ಈ ಸಂಘಟನೆ ಕಳೆದ 5 ದಶಕಗಳಿಂದ ಯಾವುದೇ ಜಾತಿ, ಮತ ಬೇಧವಿಲದೆ, ಒಳೆಯ ಮನೋಭಾವನೆ ಇರುವ ಈ ಸಂಘಟನೆಯಾಗಿ ಬೆಳೆದಿದೆ. ಯಾವಾಗಲು ಸಹಕಾರಾತ್ಮಕ ಮನೋಭಾವನೆ ಇರಿಸಿ ಒಳ್ಳೆಯ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಬೇಕು, ನಕಾರಾತ್ಮಕ ವಿಚಾರಣೆ ನಮಲ್ಲಿ ಬರಬಾರದು ಎಂದು ಮುಂಬಯಿ ವಲಯ ಅಧ್ಯಕ್ಷ ಭೂಫೆದ್ರ ವಾಶಿ ಎಲ್ಲಾ ಸದಸ್ಯರುಗಳಿಗೆ ಕರೆ ನೀಡಿದರು.
ಮುಂಬಯಿ ಸಮಿತಿಯ ಅನಿಲ್ ರಾವತು, ಶ್ವೇತ ಭೋತ್ರ, ಪರಮ್ ಜೀತು ಕೌರ್, ಶಾಂತರಾಮ್ ಕೌರ್, ಚಾರು ಶೀಲಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಧರ್ ಯಾನ್. ಶೆಟ್ಟಿ, ಜನಾರ್ಧನ ಶೆಟ್ಟಿ ಪುತ್ತೂರು, ತುಳುನಾಡ ಐಸಿರಿಯ ಜೊತೆ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಸುನಿಲ್ ಡಿಸೋಜಾ, ನಿತೇಶ್ ಶೆಟ್ಟಿ, ಭಾಸ್ಕರ್ ಸರಪಾಡಿ ಮತ್ತಿತರರು ಕಾರ್ಯಕ್ರಮಕ್ಕೆ ಸಹಕರಿಸಿದರು.
ಘಟಕದ ಹಿರಿಯ ಕಾರ್ಯಕರ್ತ ಅತ್ತುಲ್ ಸಿ.ಶ್ಹಾ ಸ್ವಾಗತಿಸಿ ಗಣ್ಯರನ್ನು ಪರಿಚಯಿಸಿದರು. ಬಾಲಕೃಷ್ಣ ಶೆಟ್ಟಿ ಪ್ರಸ್ತಾವನೆಗೈದು ಸಂಸ್ಥೆಯು 5 ದಶಕದಿಂದ ನಡೆಸಿದ ಸೇವೆ, ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮತ್ತು ಕಾರ್ಯಕಲಾಪಗಳ ಬಗ್ಗೆ ತಿಳಿಸಿದರು. ರಜನಿ ಬಾಲಕೃಷ್ಣ ಶೆಟ್ಟಿ ಮತ್ತು ಚಾರು ಶೀಲಾ ಭಟ್ ಕಾರ್ಯಕ್ರಮ ನಿರೂಪಣೆ ಮಾಡಿದರು. 3ಎ ಘಟಕದ ಪ್ರದಾನ ಕಾರ್ಯದರ್ಶಿ ಪೂಜಾ ಅರೋರ ಧನ್ಯವದಿಸಿದರು.