ಮುಂಬಯಿ (ಕಲಬುರಗಿ), ನ.28: ಕಲಬುರಗಿ ಆಕಾಶವಾಣಿ ಕೇಂದ್ರದ ಮಕ್ಕಳ ಕಾರ್ಯಕ್ರಮ ಬಾಲಲೋಕದಲ್ಲಿ ಡಿ. ಒಂದರಂದು ಬೆಳಿಗ್ಗೆ 09.05 ಕ್ಕೆ ಅಂಚೆಕಚೇರಿ ಕಾರ್ಯಚಟುವಟಿಕೆಗಳ ಕುರಿತು `ರೇಡಿಯೋ ಶಾಲೆ'ಯಲ್ಲಿ ಕಾರ್ಯಕ್ರಮ ಬಿತ್ತರವಾಗಲಿದೆ.
ಕಲಬುರಗಿ ವಲಯ ಹಿರಿಯ ಅಂಚೆ ವರಿಷ್ಠಾಧಿಕಾರಿ ಬಿ.ಆರ್ ನಾನಜಗಿ ಮತ್ತು ಕಲಬುರಗಿಯ ಗಾಜಿಪುರದ ಚೇತನಾ ಯೂತ್‍ಫೋರಂ ಶಾಲೆಯ ವಿದ್ಯಾಥಿರ್üಗಳಾದ ಭವಾನಿ ತೆಗನೂರ್ ಹಾಗೂ ಭವಾನಿ ಅಗಸ್ತೀರ್ಥ ಭಾಗವಹಿಸಲಿರುವರು. ಬದಲಾದ ಮತ್ತು ಸ್ಪರ್ಧಾತ್ಮಕ ಪರಿಸರದಲ್ಲಿ ಅಂಚೆ ಕಚೇರಿಯು ನೀಡುತ್ತಿರುವ ಸೇವೆಗಳು, ಅಂಚೆ ಚೀಟಿ, ಕೇಂದ್ರ ಸರಕಾರದ ಯೋಜನೆ , ಪಿಂಚಣಿ ಸ್ಕೀಮ್, ಠೇವಣಿ ಸಂಗ್ರಹ, ಅಂಚೆ ಬಟವಾಡೆ ಕ್ರಮ, ಮುಂತಾದುವುಗಳ ಕುರಿತಾದ ಸಮಗ್ರ ಮಾಹಿತಿ ನೀಡುವ ವಿನೂತನ ಕಾರ್ಯಕ್ರಮಗಿ `ರೇಡಿಯೋ ಶಾಲೆ' ವಿದ್ಯಾಥಿರ್üಗಳಿಗೆ ಹಾಗೂ ಮಕ್ಕಳಿಗೆ ಉಪಯುಕ್ತ ಎಂದು ಕಾರ್ಯಕ್ರಮವಾಗಿದೆ. ನಿರ್ವಾಹಕರಾದ ಡಾ. ಸದಾನಂದ ಪೆರ್ಲ ತಿಳಿಸಿದ್ದಾರೆ.
ಕಲಬುರಗಿ ಆಕಾಶವಾಣಿ ಕೇಂದ್ರವು ವಿನೂತನ ಮತ್ತು ಮಾಹಿತಿ ಪೂರ್ಣ ಕಾರ್ಯಕ್ರವiಗಳನ್ನು ಪ್ರಸಾರ ಮಾಡುತ್ತಿದ್ದು ಇದನ್ನು ಪ್ರಸಾರಭಾರತಿಯ ಟಿeತಿsoಟಿಚಿiಡಿ ಆ್ಯಪ್‍ನಲ್ಲೂ ಎಲ್ಲಿ ಬೇಕಾದರೂ ಕೇಳುವ ಅವಕಾಶ ಇದೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್. ಕುಲಕರ್ಣಿ ತಿಳಿಸಿದ್ದಾರೆ.