Saturday 6th, June 2020
canara news

ಮುಂಬಯಿ ವಿವಿ ಕನ್ನಡದ ವಿಭಾಗದಲ್ಲಿ 4 ಕೃತಿಗಳ ಬಿಡುಗಡೆ ; ಬೇಂದ್ರೆ ದತ್ತಿ ಉಪನ್ಯಾಸ

Published On : 02 Dec 2019   |  Reported By : Rons Bantwal


ಭಾರತೀಯ ರಂಗಭೂಮಿ ಆಥಿರ್sಕವಾಗಿ ಸದೃಢವಾಗಿಲ್ಲ: ಜೆ.ಲೋಕೇಶ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.30: ರಂಗಭೂಮಿಗೆ ಅಂತ್ಯ ಅನ್ನುವುದೇವಿಲ್ಲ. ಭಾರತೀಯ ರಂಗಭೂಮಿ ಹಲವು ಮನ್ಮಂಥಗಳನ್ನು ಕಂಡಿದೆ. ನಮ್ಮಲ್ಲಿನ ಬಹಳಷ್ಟು ನಾಟಕಕೃತಿಗಳು ರಂಗಕೃತಿಗಳಾಗಿ ಉಳಿಯದೆ ಅವು ಸಾಹಿತ್ಯ ಕೃತಿಗಳಾಗಿ ಉಳಿದಿದ್ದು ವಿಪರ್ಯಾಸ. ಆದರೆ ಅನುವಾದಿತ ಹಲವು ನಾಟಕ ಕೃತಿಗಳು ನಾಟಕಗಳಾಗಿ ಭೂಮಿಕೆ ಪಡೆದಿದೆ. ಆದುದರಿಂದಲೇ ಇಂದಿಗೂ ನಮ್ಮ ರಂಗಭೂವಿಯು ಆಥಿರ್sಕವಾಗಿ ಇನ್ನೂ ಸದೃಢವಾಗಿಲ್ಲ ಎಂದು ಕರ್ನಾಟಕ ನಾಟಕ ಅಕಾಡಮಿಯ ಪೂರ್ವಾಧ್ಯಕ್ಷ, ಹಿರಿಯ ರಂಗತಜ್ಞ ಜೆ.ಲೋಕೇಶ್ ತಿಳಿಸಿದರು.

ಇಂದಿಲ್ಲಿ ಶನಿವಾರ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡದ ವಿಭಾಗ ಮತ್ತು ಕರ್ನಾಟಕ ಸಂಘ ಮುಂಬಯಿ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನೀಡಿ ಬೇಂದ್ರೆ ದತ್ತಿ ಉಪನ್ಯಾಸದಲ್ಲಿ ಕನ್ನಡ ರಂಗಭೂಮಿಯ ಹುಟ್ಟು ಮತ್ತು ಬೆಳವಣಿಗೆ' ವಿಷಯವಾಗಿ ಮಾತನಾಡಿ ಕೃತಿ ಬಿಡುಗಡೆ ಗೊಳಿಸಿ ಮಾತನಾಡಿದರು.

ಸ್ವಾತಂತ್ರ್ಯ ಚಳುವಳಿಯನ್ನು ವೃತ್ತಿ ರಂಗಭೂಮಿ ಯಶಸ್ವಿಯಾಗಿಸಿರುವುದು ನಮ್ಮ ಹಿರಿಮೆಯಾದರೂ, ಒಂದು ಕಾಲದಲ್ಲಿ ರಾಜಾಶ್ರಮ ಪಡೆದ ರಂಗಭೂಮಿ ಇಂದು ಬರೇ ಹವ್ಯಾಸಿ ರಂಗವಾಗಿದೆ. ಅಲ್ಲದೆ ಇಂದು ಬರೇ ಜನಾಶ್ರಯದಲ್ಲಿ ಮಾತ್ರ ರಂಗಭೂಮಿ ಉಳಿದಿದೆ ಎಂದೂ ಲೋಕೇಶ್ ತಿಳಿಸಿದರು.

ಮುಂಬಯಿ ವಿವಿ ಕನ್ನಡದ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದ್ರೆ ಇದರ ಪ್ರಾಧ್ಯಾಪಕ, ಸಾಹಿತಿ ಅನು ಬೆಳ್ಳೆ ಅವರು ಅನಿತಾ ಪಿ.ಪೂಜಾರಿ ತಾಕೋಡೆ ರಚಿತ ಡಾ| ಬಿ.ಜನಾರ್ದನ ಭಟ್ ಅವರ ಜೀವನ ಸಾಧನಾ ಶೋಧ ಸಂಪ್ರಬಂಧ `ಸವ್ಯಸಾಚಿ ಸಾಹಿತಿ' ಕೃತಿಯನ್ನು, ಡಾ| ಜಿ.ಎನ್ ಉಪಾಧ್ಯ ರಚಿತ `ಮುಂಬಯಿ ಕನ್ನಡ ಜಗತ್ತು' ಕೃತಿಯನ್ನು ಜೆ.ಲೋಕೇಶ್, ಡಾ| ಜಿ.ಎನ್ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಎಂ.ಫಿಲ್ ಪದವಿಯಾಗಿಸಿ ಕನ್ನಡ ವಿಭಾಗದ ವಿದ್ಯಾಥಿರ್sನಿ ಸುರೇಖಾ ಹೆಚ್.ದೇವಾಡಿಗ ಸಿದ್ಧಪಡಿಸಿದ ಸಂಪ್ರಬಂಧ `ದೇವಾಡಿಗ ಜನಾಂಗ ಒಂದು ಸಾಂಸ್ಕೃತಿಕ ಅದ್ಯಯನ' ಕೃತಿಯನ್ನು ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು.ದೇವಾಡಿಗ ಹಾಗೂ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ರಚಿತ `ಸ್ವೀಕೃತಿ' ಕೃತಿಯನ್ನು ನಾಡಿನ ಪ್ರಸಿದ್ಧ ಕವಿ, ಸಾಹಿತಿ ಶಾಂತರಾಮ ವಿ.ಶೆಟ್ಟಿ ಬೆಂಗಳೂರು ಬಿಡುಗಡೆ ಗೊಳಿಸಿದರು.

ಹೇಮಂತ್ ದೇವಾಡಿಗ, ಪದ್ಮನಾಭ ಪೂಜಾರಿ ವೇದಿಕೆಯಲ್ಲಿದ್ದು ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್ ಅಲೆವೂರು, ಸಂಘಟಕ ವಿಶ್ವನಾಥ ಶೆಟ್ಟಿ ಪೇತ್ರಿ, ಕನ್ನಡದ ವಿಭಾಗದ ಡಾ| ರಮಾ ಉಡುಪ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ| ದಿನೇಶ್ ಶೆಟ್ಟಿ ರೆಂಜಾಳ ಕ್ರಮವಾಗಿ ಕೃತಿಗಳನ್ನು ಪರಿಚಯಿಸಿದರು. ಸುರೇಖಾ ದೇವಾಡಿಗ ಮತ್ತು ಹೇಮಂತ್ ದೇವಾಡಿಗ ದಂಪತಿ ಡಾ| ಜಿ.ಎನ್ ಉಪಾಧ್ಯ ಅವರಿಗೆ ಸನ್ಮಾನಿಸಿ ಗುರುವಂದನೆಗೈದುರು.

ಇದೇ ಸಂದರ್ಭದಲ್ಲಿ ಕನ್ನಡದ ವಿಭಾಗ ಕೊಡಮಾಡುವ ಅಕ್ಷಯ ಮಾಸಿಕದ ಗೌರವ ಸಂಪಾದಕ ಎಂ.ಬಿ ಕುಕ್ಯಾನ್ ಪ್ರಾಯೋಜಕತ್ವದ ಸ್ವರ್ಣ ಪದಕವನ್ನು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಕಾರ್ಯಕಾರಿ ಸಮಿತಿ ಸದಸ್ಯೆ, ಎಂಎ ಪ್ರಥಮ ರ್ಯಾಂಕ್ ವಿಜೇತೆ ಅನಿತಾ ಪಿ.ಪೂಜಾರಿ ತಾಕೋಡೆ ಅವರಿಗೆ ಪ್ರದಾನಿಸಿದ್ದು, ಎಂ.ಫಿಲ್ ಪದವೀಧರೆ ಸುರೇಖಾ ಹೆಚ್.ದೇವಾಡಿಗ ಮತ್ತು ಪಿಹೆಚ್‍ಡಿ ಪದವೀಧರೆ ಡಾ| ರಮಾ ಉಡುಪ ಅವರಿಗೆ ಪದವಿ ಪ್ರದಾನಗೈದು ಗೌರವಿಸಿ ಅತಿಥಿüಗಳು ಅಭಿನಂದಿಸಿದರು. ಅಂತೆಯೇ ನಡೆಸಲ್ಪಟ್ಟ ಘಟಿಕೋತ್ಸವದಲ್ಲಿ ರೂಪ ಸಾಂಗೊಳ್ಳಿ (ಎಂ.ಫಿಲ್ ಪದವಿ), ಸೂರಪ್ಪ ಕುಂದರ್, ಜಯ ಪೂಜಾರಿ, ಲಕ್ಷ್ಮೀ ಪೂಜಾರಿ, ಅನಿತಾ ಪಿ.ಪೂಜಾರಿ, ರಮೇಶ್ ಸುವರ್ಣ, ಉದಯ ಶೆಟ್ಟಿ, ಗೋವಿಂದ ಭಟ್( ಎಂ.ಎ ಪದವಿ) ಪ್ರದಾನಿಸಲಾಯಿತು.

ದೇವಾಡಿಗ ಜನಾಂಗ ಒಂದು ಸಣ್ಣ ಸಮಾಜ ಈ ಬಗ್ಗೆ ಯಾರು ಕೃತಿ ರಚಿಸಿಲ್ಲ. ಈಗ ಸುರೇಖಾ ದೇವಾಡಿಗ ಅವರು ಡಾ| ಉಪಾಧ್ಯ ಮಾರ್ಗದರ್ಶನ ಪಡೆದು ಈ ಸಾಹಸದ ಸಾಧನೆಗೈದಿದ್ದಾರೆÉ. ಅವರಿಗೆ ನಾನು ಸಮಗ್ರ ದೇವಡಿಗರ ಪರವಾಗಿ ಕೃತಜ್ಞತೆ ಸಲ್ಲಿಸುವೆ. ಉಪಾಧ್ಯ ಅವರು ಸಮಗ್ರ ಸಮಾಜದ ಎಲ್ಲಾ ಜಾತಿಧಮೀಯರನ್ನು ಒಂದುಗೂಡಿಸಿ ಮುನ್ನಡೆಯುತ್ತಾರೆ. ಮುಂಬಯಿ ವಿಶ್ವ ವಿದ್ಯಾಲಯದಲ್ಲೊ ಮೊದಲ ಬಾರಿಗೆ ವೇದಿಕೆ ಹತ್ತಿ ಭಾಷಣ ಮಾಡುವ ಭಾಗ್ಯ ಸಿಕ್ಕಿದ್ದು, ತುಂಬಾ ಸಂತೋಷ ತಂದಿದೆ ಎಂದು ಧರ್ಮಪಾಲ ದೇವಾಡಿಗ ನುಡಿದರು.

ಶಾಂತರಾಮ ಶೆಟ್ಟಿ ಮಾತನಾಡಿ ಕನ್ನಡ ಸಾಹಿತ್ಯಲೋಕಕ್ಕೆ ಮಹಾರಾಷ್ಟ್ರದಲ್ಲಿನ ಕನ್ನಡಿಗರ ಕೊಡುಗೆ ಶ್ಲಾಘನೀಯ. ಮುಂಬಯಿ ವಿಶ್ವವಿದ್ಯಾಲಯ ಇಲ್ಲಿನ ಕನ್ನಡಾಸಕ್ತರನ್ನು ಬೆಳೆಸುತ್ತಿರುವುದು ಈ ಮಣ್ಣಿನಗುಣವೇ ಸರಿ. ಡಾ| ಜಿ.ಎನ್ ಉಪಾಧ್ಯರು ಗುರುವಾಗಿ ಕನ್ನಡವನ್ನು ಬೆಳೆಸುತ್ತಿದ್ದಾರೆ. ನಾನು ಇಲ್ಲಿ ಪ್ರೀತಿ ತೋರಿಸಲು ಬಂದವ ಆದುದರಿಂದ ಅತಿಥಿs ಪ್ರೀತಿಬೇಡ. ಪೂರ್ಣಿಮ ಅವರು ಓರ್ವ ಕವಿಯತ್ರಿ, ನಿರೂಪಕಿ, ವಿಮರ್ಶಕಿಯಾಗಿ ನಮ್ಮೆಲ್ಲರನ್ನು ಅಪ್ತರಾಗಿ ಕಂಡವರು. ಕನ್ನಡದ ಕೃತಿಗಳ ಬಗ್ಗೆ ಮಾತನಾಡುವ ಪರಿಪಾಠ ಮುಂಬಯಿಗರಲ್ಲಿದ್ದು ತಾಯಿ ಮಗುವಿನ ಮಾತುಕತೆಯಂತಿರಬೇಕು. ವಿಮರ್ಶಕರು ಭಾವನಾತ್ಮಕವಾಗಿರಬೇಕು. ಬರೆಯುವವರಿಗೆ ಅನುಕೂಲಕರ ಆಗಬೇಕು ಎಂದರು.

ಕನ್ನಡದ ಜಗತ್ತಿಗೆ ಹೊಸ ಆಯಾಮ ನೀಡುವ ಕೆಲಸ ಮುಂಬಯಿನÀಲ್ಲಿ ನಡೆಯುತ್ತಿದೆ. ಇಂದಿಲ್ಲಿ ಏಕಕಾಲಕ್ಕೆ ನಾಲ್ಕು ಕೃತಿಗಳು ಸಾರಸ್ವತ ಲೋಕಕ್ಕೆ ಅರ್ಪಿಸಲ್ಪಟ್ಟಿದ್ದು, ಕನ್ನಡ ವಿಭಾಗದಿಂದ ಹೊಸ ಬೆಳೆಯ ಕೊೈಲು ಇಂದಿಲ್ಲಿ ನಡೆದಂತಾಗಿದೆÉ. ಕನ್ನಡದ ದೀಕ್ಷೆ ನೀಡುವ ಈ ವಿಭಾಗ ಕನ್ನಡದ ಕೃಷಿ ಮಾಡುತ್ತಿದೆ. ಶುದ್ಧ ಸ್ವರ್ಣ ಪದಕ ಪಡೆಯುವಲ್ಲಿ ಯಶಕಂಡ ಚಿನ್ನದ ಹುಡುಗಿ ಅನಿತಾ ಪೂಜಾರಿ ಅವರ ಸಾಧನೆ ಜೊತೆಗೆ ಡಾ| ಪೂರ್ಣಿಮಾ ಶೆಟ್ಟಿ ಮತ್ತು ಸುರೇಖಾ ದೇವಾಡಿಗರ ಸಾಧನೆಯೂ ಅನುಪಮ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಜಿ.ಎನ್ ಉಪಾಧ್ಯ ನುಡಿದರು.

ಚಂದ್ರಹಾಸ ರೈ ಪ್ರಾರ್ಥನೆಯನ್ನಾಡಿದರು. ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಸುಖಾಗಮನ ಬಯಸಿದರು. ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷ ಡಾ| ಭರತ್‍ಕುಮಾರ್ ಪೆÇಲಿಪು ಅತಿಥಿüಗಳನ್ನು ಪರಿಚಯಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಕೃತಜ್ಞತೆ ಸಮರ್ಪಿಸಿದರು.

 
More News

 ಸ್ವಾಸ್ಥ ್ಯ ಸಮಾಜದ ಹೊಣೆ ಎಲ್ಲಾ ನಾಗರಿಕರದ್ದು : ರೋಲ್ಫಿ ಡಿಕೊಸ್ಟಾ
ಸ್ವಾಸ್ಥ ್ಯ ಸಮಾಜದ ಹೊಣೆ ಎಲ್ಲಾ ನಾಗರಿಕರದ್ದು : ರೋಲ್ಫಿ ಡಿಕೊಸ್ಟಾ
ಟ್ರೆಸ್ಸಿ ಡೋಲ್ಫಿ ಮಾರ್ಟಿಸ್ ನಿಧನ
ಟ್ರೆಸ್ಸಿ ಡೋಲ್ಫಿ ಮಾರ್ಟಿಸ್ ನಿಧನ
ಕವತ್ತಾರು ಬಾಲಗುತ್ತು ಅನಿತಾ ಬಿ.ಶೆಟ್ಟಿ ನಿಧನ
ಕವತ್ತಾರು ಬಾಲಗುತ್ತು ಅನಿತಾ ಬಿ.ಶೆಟ್ಟಿ ನಿಧನ

Comment Here